ನಟಿ ಕಾಜೋಲ್ ಗರ್ಭಿಣಿಯಾ? ನೆಟ್ಟಿಗರು ತರತರಹದ ಕಮೆಂಟ್ ಟ್ರೋಲ್..!

ಬಣ್ಣದ ಲೋಕಕ್ಕೆ ಪ್ರವೇಶ ಮಾಡಿದ್ಮೇಲೆ ಸೌಂದರ್ಯದ ಬಗ್ಗೆ ವಿಶೇಷ ಗಮನ ನೀಡಲೇಬೇಕು. ಸಿನಿಮಾದಲ್ಲಿರಲಿ ಇಲ್ಲದಿರಲಿ ವಿಶೇಷವಾಗಿ ನಟಿಯರು ಫಿಗರ್ ಮೆಂಟೇನ್ ಮಾಡಬೇಕಾಗುತ್ತದೆ. ತೂಕ ಜಾಸ್ತಿಯಾದ್ರೂ, ಹಣೆ ಮೇಲೆ ಸಣ್ಣ ನೆರಿಗೆ ಬಂದ್ರೂ ಮಾಧ್ಯಮಗಳು, ಅಭಿಮಾನಿಗಳ ಕಣ್ಣಿಗೆ ಇದು ಬೀಳುತ್ತದೆ. ಈಗ ಬಾಲಿವುಡ್ ನಟಿ ಹಾಗೂ ಅಜಯ್ ದೇವಗನ್ ಪತ್ನಿ ಕಾಜೋಲ್ ಇದೇ ವಿಚಾರಕ್ಕೆ ಟ್ರೋಲ್ ಆಗಿದ್ದಾಳೆ.

ವಿಮಾನ ನಿಲ್ದಾಣದಲ್ಲಿ ಮಗಳ ಜೊತೆಗಿರುವ ಕಾಜೋಲ್ ಫೋಟೋ ವೈರಲ್ ಆಗಿದೆ. ತಾಯಿ-ಮಗಳಿಬ್ಬರೂ ಕಪ್ಪು ಬಣ್ಣದ ಡ್ರೆಸ್ ಧರಿಸಿದ್ದಾರೆ. ಈ ಡ್ರೆಸ್ ನಲ್ಲಿ ಕಾಜೋಲ್ ಹೊಟ್ಟೆ ಸ್ವಲ್ಪ ದೊಡ್ಡದಾಗಿ ಕಾಣಿಸ್ತಿದೆ. ಇದನ್ನು ನೋಡಿದ ನೆಟ್ಟಿಗರು ತರತರಹದ ಕಮೆಂಟ್ ಶುರು ಮಾಡಿದ್ದಾರೆ.

ಕಾಜೋಲ್ ಗರ್ಭಿಣಿಯಾ? ಬೇಬಿ ಬಂಪ್ ಸ್ಪಷ್ಟವಾಗಿ ಕಾಣ್ತಿದೆ. ಹೀಗೆ ಅಭಿಮಾನಿಗಳು ತಮಗನ್ನಿಸಿದ್ದನ್ನು ಬರೆಯಲು ಶುರು ಮಾಡಿದ್ದಾರೆ. ಕಾಜೋಲ್ ಮಾತ್ರವಲ್ಲ ಮಗಳು ನ್ಯಾಸಾ ಬಗ್ಗೆಯೂ ಕಮೆಂಟ್ ಮಾಡಿದ್ದಾರೆ. ನ್ಯಾಸಾ ಬಾಲಿವುಡ್ ಗೆ ಬರಬೇಕೆಂದ್ರೆ ಜಾಹ್ನವಿ ಕಪೂರ್ ನಂತೆ ಸರ್ಜರಿ ಮಾಡಿಸಿಕೊಳ್ಳಬೇಕು ಅಂತಾ ನೆಟ್ಟಿಗರು ಹೇಳಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com