ಆಯಸ್ಸು ಗಟ್ಟಿಯಿದ್ರೆ ಸಾಯಲು ಸಾಧ್ಯವಿಲ್ಲ ಅನ್ನೋದಕ್ಕೆ ಜೀವಂತ ಸಾಕ್ಷಿ ಇದು…

ಆಯಸ್ಸಿದ್ರೆ ಏನೇ ಮಾಡಿದ್ರೂ ಸಾವು ಬರದು ಎಂಬ ಮಾತಿದೆ. ಬಾಗ್ಪತ್ ನಲ್ಲಿ ಈ ಮಾತು ಸತ್ಯವೆನ್ನಿಸುವ ಘಟನೆ ನಡೆದಿದೆ. ಕಬ್ಬಿನ ಗದ್ದೆಯಲ್ಲಿ ಒಂದು ವಾರದ ಹಿಂದೆ ಸಾವನ್ನಪ್ಪಿದ್ದ ತಾಯಿ ಶವದ ಬಳಿಯಿದ್ದ ಮಗುವನ್ನು ರಕ್ಷಿಸಲಾಗಿದೆ. ತಾಯಿಯನ್ನು ಹತ್ಯೆ ಮಾಡಿದ ದುಷ್ಕರ್ಮಿಗಳು ಒಂದೂವರೆ ವರ್ಷದ ಮಗುವಿನ ಹತ್ಯೆಗೆ ಯತ್ನ ನಡೆಸಿದ್ದಾರೆ. ಮಗುವಿಗೆ ಹೊಡೆದು ಅಲ್ಲಿಯೇ ಬಿಟ್ಟು ಹೋಗಿದ್ದಾರೆ.

ಒಂದು ವಾರದ ಮೇಲೂ ಮಗು, ಶವದ ಬಳಿ ಜೀವಂತವಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ. ಕೊಲೆಯಾದ ಮಹಿಳೆ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮಗುವಿಗೆ ಚಿಕಿತ್ಸೆ ನಡೆಯುತ್ತಿದೆ. ಮಹಿಳೆ ಗುರುತು ಪತ್ತೆ ಕಾರ್ಯದಲ್ಲಿ ಪೊಲೀಸರು ನಿರತರಾಗಿದ್ದಾರೆ.

ಕಬ್ಬಿನ ಗದ್ದೆಗೆ ತೆರಳಿದ್ದ ರೈತನೊಬ್ಬನಿಗೆ ಮಗು ಕಾಣಿಸಿತ್ತಂತೆ. ದೂರದಲ್ಲಿ ತಾಯಿ ಶವವೂ ಇತ್ತಂತೆ. ತಕ್ಷಣ ಆತ ಪೊಲೀಸರಿಗೆ ಮಾಹಿತಿ ನೀಡಿದ್ದ ಎನ್ನಲಾಗಿದೆ. ಸ್ಥಳಕ್ಕೆ ಪೊಲೀಸರು ಬಂದಾಗ ಮಗು ಉಸಿರಾಡುತ್ತಿತ್ತಂತೆ.

Leave a Reply

Your email address will not be published.

Social Media Auto Publish Powered By : XYZScripts.com