ಮಂಡ್ಯ ರೋಚಕ ಹಣಾಹಣಿಯಲ್ಲಿ ನಿಖಿಲ್ ಸೋಲಿಗೆ ಸುಮಲತಾ ಗೆಲುವಿಗೆ ಇದೇ ಕಾರಣ…

ಇಡೀ ದೇಶವೇ ಎದುರು ನೋಡುತ್ತಿದ್ದ ಮಂಡ್ಯ ಫಲಿತಾಂಶದಲ್ಲಿ ಸುಮಲತಾ ಅಂಬರೀಶ್ ಜಯಭೇರಿ ಸಾಧಿಸಿದ್ದಾರೆ. ಮಂಡ್ಯ ಕ್ಷೇತ್ರದಲ್ಲಿ ಮೈತ್ರಿಕೂಟದ ಅಭ್ಯರ್ಥಿಯಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಕಣದಲ್ಲಿ ಹೀನಾಯ ಗೆಲುವು ಅನುಭವಿಸಿದ್ದಾರೆ.

ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್  ನಿರೀಕ್ಷಿತ ಮತ ಗಳಿಸಿ ಜಯ ಸಾಧಿಸಿದ್ದಾರೆ. ಸೋಲು ಗೆಲುವಿಗೆ ಕಾರಣಗಳು ಇಲ್ಲಿದೆ.

ಸುಮಲತಾ ಅಂಬರೀಶ್ ಗೆಲುವಿಗೆ ಕಾರಣಗಳು :

1)ಮಂಡ್ಯದಲ್ಲಿ ನಟ ಹಾಗೂ ರಾಜಕಾರಣಿ ಕಾವೇರಿ ನೀರಿಗಾಗಿ ಅಧಿಕಾರವನ್ನು ಬಿಟ್ಟ ಮಂಡ್ಯದ ಗಂಡು ಅಂಬರೀಶ್ ಕಳೆದುಕೊಂಡಿರುವುದು ಅನುಕಂಪದ ಅಲೆ ಅಧಿಕವಾಗಿತ್ತು.

2)ಬಿರುಸಿನ ಪ್ರಚಾರಕ್ಕೆ ಸಿನಿ ಸ್ಟಾರ್ ಯಶ್, ದರ್ಶನ್ ಮದರ್ ಇಂಡಿಯಾ ಪರ ತೊಡೆತಟ್ಟಿ ನಿಂತರು.

3) ಅಲ್ಲದೇ ಕಾಂಗ್ರೆಸ್ ಕಾರ್ಯಕರ್ತರು, ರೈತ ಸಂಘ- ಸಂಘಟನೆಗಳು , ಬಿಜೆಪಿಯಿಂದ ಬೆಂಬಲ.

4) ಪ್ರಧಾನಿ ನರೇಂದ್ರ ಮೋದಿ  ಸುಮಲತಾ ಅಂಬರೀಶ್ ಅವರ ಪರ ನಿಲ್ಲಲ್ಲು ಮಂಡ್ಯದ ಜನತೆಗೆ ಮನವಿ ಮಾಡಿದ್ದರು.

5) ದೇವೇಗೌಡರ ಕುಟುಂಬ ರಾಜಕಾರಣ ಸಹಿಸದ ಮಂಡ್ಯ ಮತದಾರರು.

6) ಕಾಂಗ್ರೆಸ್ ನಲ್ಲಿ ಟಿಕೇಟ್ ಸಿಗದ ಕಾರಣ ಪಕ್ಷೇತರ ಅಭ್ಯರ್ಥಿಯಾದರು

 

ನಿಖಿಲ್ ಕುಮಾರಸ್ವಾಮಿ ಸೋಲಿಗೆ ಕಾರಣ :

1)ಪ್ರಾರಂಭದಲ್ಲೇ ನಿಖಿಲ್ ಮಂಡ್ಯದಲ್ಲಿ ಕಣಕ್ಕಿಳಿಯಲು ಮೈತ್ರಿ ನಾಯಕರಿಂದ ಅಪಸ್ವರ

2) ಮಿತ್ರ ಪಕ್ಷದೊಂದಿಗೆ ಚರ್ಚಿಸದೇ ನಿಖಿಲ್ ಮಂಡ್ಯ ಅಭ್ಯರ್ಥಿಯಾಗಿ ಟಿಕೀಟ್ ನೀಡಿದ ನಿಲುವಿಗೆ ಮೈತ್ರಿ ನಾಯಕರ ಮುನಿಸು.

3) ಸಿನಿ ಸ್ಟಾರ್ ಗಳ ಪ್ರಚಾರದ ಮುಂದೆ ಸಪ್ಪೆಯಾದ ನಿಖಿಲ್ ಕುಮಾರಸ್ವಾಮಿ.

4) ಡಿಕೆಶಿ ಮಂಡ್ಯ ಅತೃಪ್ತ  ನಾಯಕರನ್ನು ಮನವೊಲಿಸಲು ವಿಫಲ

Leave a Reply

Your email address will not be published.

Social Media Auto Publish Powered By : XYZScripts.com