ಮಂಡ್ಯದಲ್ಲಿ ನಿಖಿಲ್ ವಿರುದ್ಧ ಸುಮಲತಾ ಭರ್ಜರಿ ಜಯಭೇರಿ : ಬೆಂಬಲಿಗರ ಸಂಭ್ರಮಾಚರಣೆ

ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಸುಮಲತಾ ಅಂಬರೀಶ್ ಭಾರಿ ಅಂತರದಿಂದ ಮುನ್ನಡೆ ಗಳಿಸಿದ್ದಾರೆ. ಭಾರಿ ಮುನ್ನಡೆ ಕಾಯ್ದುಕೊಂಡಿರುವ ಸುಮಲತಾ ಅಂಬರೀಶ್ ಗೆಲುವು ಸಾಧಿಸಿದ್ದು, ಬೆಂಬಲಿಗರ ಸಂಭ್ರಮಾಚರಣೆ ಮುಗಿಲುಮುಟ್ಟಿದೆ.

ಮಂಡ್ಯದಲ್ಲಿ ದಿ. ಅಂಬರೀಶ್ ಅವರ ಭಾವಚಿತ್ರ ಹಿಡಿದು ರಸ್ತೆಗಿಳಿದ ಅಭಿಮಾನಿಗಳು ಸುಮಲತಾ ಅಂಬರೀಶ್ ಪರವಾಗಿ ಘೋಷಣೆ ಹೋಗಿದ್ದಾರೆ. ಸುಮಲತಾ ಅವರ ಚಿಹ್ನೆ ಕಹಳೆ ಮತ್ತು ಬಿಜೆಪಿ ಬಾವುಟಗಳನ್ನು ಹಿಡಿದು ಜೈಕಾರ ಕೂಗುತ್ತಿದ್ದು, ಕಾರ್ಯಕರ್ತರ ಸಂಭ್ರಮಾಚರಣೆ ಮುಗಿಲುಮುಟ್ಟಿದೆ. ಸುಮಲತಾ ಬೆಂಬಲಿಗರು, ಬಿಜೆಪಿ ಕಾರ್ಯಕರ್ತರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ನಡೆಸಿದ್ದಾರೆ.

ಆರಂಭಿಕ ಸುತ್ತುಗಳಲ್ಲಿ ಕ್ಷಣ ಕ್ಷಣಕ್ಕೂ ಕುತೂಹಲ ಮೂಡಿಸಿದ್ದ ಫಲಿತಾಂಶದಲ್ಲಿ ಒಮ್ಮೆ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್, ಮತ್ತೊಮ್ಮೆ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟದ ಅಭ್ಯರ್ಥಿ ನಿಖಿಲ್ ಕುಮಾರ್ ಮುನ್ನಡೆ ಗಳಿಸುತ್ತ ಬಂದಿದ್ದರು.

ಮತಗಳ ಅಂತರವೂ ಕಡಿಮೆ ಇತ್ತು. ಕ್ಷಣಕ್ಷಣದ ಫಲಿತಾಂಶ ಕುತೂಹಲ ಮೂಡಿಸಿತ್ತು. ಆದರೆ ನಂತರದಲ್ಲಿ 15ನೇ ಹಂತದ ಮತ ಎಣಿಕೆಯಲ್ಲಿ ಮುನ್ನಡೆ ಕಾಯ್ದುಕೊಂಡು ಸುಮಾರು 90 ಸಾವಿರ ಮತಗಳ ಅಂತರ ಕಾಯ್ದುಕೊಂಡಿರುವ ಸುಮಲತಾ ನಿಖಿಲ್ ವಿರುದ್ಧ ಜಯಭೇರಿ ಸಾಧಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com