ರಾಜ್ಯ ಲೋಕಸಭಾ ಚುನಾವಣೆ ಫಲಿತಾಂಶ ಕ್ಷೇತ್ರವಾರು ವಿಜೇತರ ವಿವರ ಇಲ್ಲಿದೆ ನೋಡಿ..

ರಾಜ್ಯದ ಮಹತ್ವದ ಲೋಕಸಭಾ ಚುನಾವಣೆ ಫಲಿತಾಂಶ ಇಂದು ಬಿಡುಗಡೆಗೊಂಡಿದ್ದು, ಅಂತಿಮವಾಗಿ ಬಿಜೆಪಿ 24 ಕ್ಷೇತ್ರಗಳಲ್ಲಿ ಜಯಭೇರಿ ಸಾಧಿಸಿದೆ. ಫಲಿತಾಂಶದಲ್ಲಿ ರಾಜ್ಯದ ಯಾವ ಯಾವ ಕ್ಷೇತ್ರದಲ್ಲಿ..? ಯಾವ ಅಭ್ಯರ್ಥಿಗಳು ಜಯ ಸಾಧಿಸಿದ್ದಾರೆ? ಯಾವ ಪಕ್ಷದ ಅಭ್ಯರ್ಥಿಗಳು ಸೋಲನ್ನು ಅನುಭವಿಸಿದ್ದಾರೆ..? ಎಷ್ಟು ಮತಗಳ ಅಂತರದಲ್ಲಿ ಸೋಲು ಗೆಲುವು ಕಂಡಿದ್ದಾರೆ..? ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ.

ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಮೊದಲ ಹಂತದ ಮತದಾನ ನಡೆದಿತ್ತು. ನಂತರ ಎರಡನೇ ಹಂತದ 14 ಕ್ಷೇತ್ರಗಳಲ್ಲಿ ಮತದಾನ ನಡೆದಿತ್ತು. ಈ ಚುನಾವಣೆಗೆ ಕಾಂಗ್ರೆಸ್-ಜೆಡಿಎಸ್ ಪಕ್ಷಗಳು ಮೈತ್ರಿ ಮಾಡಿಕೊಂಡು ಸ್ಪರ್ಧಿಸಿದ್ದವು. ಬಹುತೇಕ ಕ್ಷೇತ್ರಗಳಲ್ಲಿ ಮೈತ್ರಿಕೂಟದ ಅಭ್ಯರ್ಥಿ ಹಾಗೂ ಬಿಜೆಪಿ ನಡುವೆ ನೇರ ಸ್ಪರ್ಧೆ ನಡೆದಿದೆ. ರಾಜ್ಯದಲ್ಲಿ 11 ಸಂಸದರು ಒಬ್ಬ ಹಾಲಿ, 6 ಮಾಜಿ ಸಚಿವರು, ಮಾಜಿ ಪ್ರಧಾನಿ, ಇಬ್ಬರು ಮಾಜಿ ಸಿಎಂಗಳು ಕಣದಲ್ಲಿದ್ದರು.

ರಾಜ್ಯ ಲೋಕಸಭಾ ಚುನಾವಣೆಯ ಫಲಿತಾಂಶದ ಮತ ಎಣಿಕೆ ಪೂರ್ಣಗೊಂಡಿದ್ದು, ಫಲಿತಾಂಶವನ್ನು ಚುನಾವಣಾ ಆಯೋಗ ಅಧಿಕೃತವಾಗಿ ಘೋಷಣೆ ಮಾಡಬೇಕಿದೆ.

ಫಲಿತಾಂಶದ ಕ್ಷೇತ್ರವಾರು ವಿವರ ಇಲ್ಲಿದೆ…

1)ಕೋಲಾರ ಲೋಕಸಭಾ ಕ್ಷೇತ್ರ :-

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಕೂಟದ ಅಭ್ಯರ್ಥಿ ಕೆ.ಎಚ್. ಮುನಿಯಪ್ಪ ಸೋಲು

ಬಿಜೆಪಿಯ ಎಸ್ ಮುನಿಸ್ವಾಮಿ 183687 ಮತಗಳ ಅಂತರದಿಂದ ಗೆಲುವು

   

 

2)ಉಡುಪಿ -ಚಿಕ್ಕಮಗಳೂರು ಕ್ಷೇತ್ರ :-

ಮೈತ್ರಿಕೂಟದ ಅಭ್ಯರ್ಥಿಯಾಗಿ ಪ್ರಮೋದ್ ಮಧ್ವರಾಜ್ ಸೋಲು

ಬಿಜೆಪಿಯಿಂದ ಶೋಭಾ ಕರಂದ್ಲಾಜೆ 153625 ಮತಗಳ ಅಂತರದಿಂದ ಗೆಲುವು

 

 

3)ಹಾಸನ ಲೋಕಸಭಾ ಕ್ಷೇತ್ರ :-                                                                                                                         

ಮೈತ್ರಿಕೂಟದ ಅಭ್ಯರ್ಥಿ ಹೆಚ್.ಡಿ ಪ್ರಜ್ವಲ್ ರೇವಣ್ಣ ಒಟ್ಟು  675512 ಮತ, 142126 ಮತಗಳ ಅಂತರದಿಂದ ಗೆಲುವು

ಬಿಜೆಪಿ ಅಭ್ಯರ್ಥಿಯಾಗಿ ಎ. ಮಂಜು ಸೋಲು 533389 ಮತ ಗಳಿಸಿ ಸೋಲು

 

 

4)ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ:-

ಮೈತ್ರಿಕೂಟದ ಅಭ್ಯರ್ಥಿಯಾಗಿ ಮಿಥುನ್ ಸೋಲು

ಬಿಜೆಪಿ ಅಭ್ಯರ್ಥಿಯಾಗಿ ನಳಿನ್ ಕುಮಾರ್ ಕಟೀಲು 236153 ಮತಗಳ ಅಂತರದಲ್ಲಿ ಗೆಲುವು

 

5)ಚಿತ್ರದುರ್ಗ ಲೋಕಸಭಾ ಕ್ಷೇತ್ರ :-

ಮೈತ್ರಿಕೂಟದ ಅಭ್ಯರ್ಥಿಯಾಗಿ ಬಿ.ಎನ್. ಚಂದ್ರಪ್ಪ ಸೋಲು

ಬಿಜೆಪಿಯ ಎ. ನಾರಾಯಣಸ್ವಾಮಿ 85000 ಅಂತರದಿಂದ ಗೆಲುವು

 

6)ತುಮಕೂರು ಲೋಕಸಭಾ ಕ್ಷೇತ್ರ :-

ಮೈತ್ರಿ ಕೂಟದ ಅಭ್ಯರ್ಥಿ ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡ ಸೋಲು

ಬಿಜೆಪಿಯ ಜಿ.ಎಸ್. ಬಸವರಾಜು 15,433 ಮತಗಳ ಅಂತರದಿಂದ ಗೆಲವು

 

7)ಮಂಡ್ಯ ಲೋಕಸಭಾ ಕ್ಷೇತ್ರ :-

ಮೈತ್ರಿಕೂಟದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಸೋಲು

ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ 90 ಸಾವಿರ ಮತಗಳ ಅಂತರದಲ್ಲಿ ಗೆಲುವು

 

 8)ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ :-

ಮೈತ್ರಿಕೂಟದ ಅಭ್ಯರ್ಥಿ ಸಿ.ಎಚ್. ವಿಜಯಶಂಕರ್ 330222 ಮತ ಗಳಿಸಿ ಸೋಲು

ಬಿಜೆಪಿಯ ಪ್ರತಾಪ್ ಸಿಂಹ ಒಟ್ಟು 434018 ಮತಗಳನ್ನು ಗಳಿಸಿ 1 ಲಕ್ಷ ಮತಗಳ ಅಂತರದಲ್ಲಿ ಗೆಲುವು

 

9)ಚಾಮರಾಜನಗರ ಲೋಕಸಭಾ ಕ್ಷೇತ್ರ :-

ಮೈತ್ರಿಕೂಟದ ಅಭ್ಯರ್ಥಿ ಧ್ರುವನಾರಾಯಣ

ಬಿಜೆಪಿಯ ವಿ. ಶ್ರೀನಿವಾಸ ಪ್ರಸಾದ್ 253 ಅಂತರದ ಮತಗಳಲ್ಲಿ ಮುನ್ನಡೆ

 

10)ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ :-

ಮೈತ್ರಿಕೂಟದ ಅಭ್ಯರ್ಥಿ ಡಿ.ಕೆ. ಸುರೇಶ್ ಒಟ್ಟು 748993 ಮತ ಗಳಿಸಿ 201592 ಮತಗಳ ಅಂತರದಲ್ಲಿ ಗೆಲುವು

ಬಿಜೆಪಿಯ ಅಶ್ವತ್ಥ ನಾರಾಯಣ್ 547745 ಮತ ಸೋಲು

 

11)ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ :-

ಮೈತ್ರಿಕೂಟದ ಅಭ್ಯರ್ಥಿ ಕೃಷ್ಣಬೈರೇಗೌಡ 605877 ಮತ ಗಳಿಸಿ ಸೋಲು

ಬಿಜೆಪಿ ಅಭ್ಯರ್ಥಿ ಡಿ.ವಿ. ಸದಾನಂದಗೌಡ ಒಟ್ಟು 734589 ಮತ ಗಳಿಸಿ 128713 ಮತಗಳ ಅಂತರದಲ್ಲಿ ಗೆಲುವು

 

12)ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ :-

ಮೈತ್ರಿಕೂಟದ ಅಭ್ಯರ್ಥಿ ರಿಜ್ವಾನ್ ಅರ್ಷದ್ 487606 ಸೋಲು

ಬಿಜೆಪಿ ಪಿ.ಸಿ. ಮೋಹನ್ ಒಟ್ಟು ಮತ 530059 ಗಳಿಸಿ 42453 ಮತಗಳ ಅಂತರದಲ್ಲಿ ಗೆಲುವು

ಪಕ್ಷೇತರ ಅಭ್ಯರ್ಥಿ ನಟ ಪ್ರಕಾಶ್ ರಾಜ್ ಸೋಲು

 

13)ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ :-

ಮೈತ್ರಿಕೂಟದ ಅಭ್ಯರ್ಥಿ ಬಿ.ಕೆ. ಹರಿಪ್ರಸಾದ್ 358035 ಸೋಲು

ಬಿಜೆಪಿಯಿಂದ ತೇಜಸ್ವಿ ಸೂರ್ಯ  ಒಟ್ಟು 641240 ಮತ ಗಳಿಸಿ 278205 ಮತಗಳ ಅಂತರದಲ್ಲಿ ಗೆಲುವು

 

 14)ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ :-

ಮೈತ್ರಿಕೂಟದ ಅಭ್ಯರ್ಥಿ ಎಂ. ವೀರಪ್ಪ ಮೊಯ್ಲಿ ಸೋಲು

ಬಿಜೆಪಿ ಅಭ್ಯರ್ಥಿ ಬಿ.ಎನ್. ಬಚ್ಚೇಗೌಡ 171717 ಮತಗಳ ಅಂತರದಲ್ಲಿ ಗೆಲುವು

ಬಹುಜನ ಸಮಾಜ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಸಿ.ಎಸ್. ದ್ವಾರಕನಾಥ್ ಸೋಲು

 

15)ಕಲಬುರಗಿ ಲೋಕಸಭಾ ಕ್ಷೇತ್ರ ;-

ಮೈತ್ರಿಕೂಟದ ಕಾಂಗ್ರೆಸ್ ಅಭ್ಯರ್ಥಿ ಮಲ್ಲಿಕಾರ್ಜುನ್ ಖರ್ಗೆ ಸೋಲು

ಬಿಜೆಪಿ ಉಮೇಶ್ ಜಾಧವ್ 83000 ಮತಗಳ ಅಂತರದಲ್ಲಿ ಗೆಲುವು

 

16) ಬೀದರ್ ಲೋಕಸಭಾ ಕ್ಷೇತ್ರ :-

ಮೈತ್ರಿಕೂಟದ ಕಾಂಗ್ರೆಸ್ ಅಭ್ಯರ್ಥಿ ಈಶ್ವರ್ ಖಂಡ್ರೆ ಸೋಲು

ಬಿಜೆಪಿ ಭಗವಂತ ಖೂಬಾ ಗೆಲುವು

 

17)ವಿಜಯಪುರ ಲೋಕಸಭಾ ಕ್ಷೇತ್ರ :-

ಜೆಡಿಎಸ್ ಅಭ್ಯರ್ಥಿ ಸುನೀತಾ 377829 ಮತ ಸೋಲು

ಬಿಜೆಪಿ ಅಭ್ಯರ್ಥಿ ರಮೇಶ್ ಜಿಗಜಿಣಗಿ ಒಟ್ಟು 635867 ಮತಗಳನ್ನು ಗಳಿಸಿ 258038 ಮತಗಳ ಅಂತರದಲ್ಲಿ ಗೆಲುವು

 

18)ಬೆಳಗಾವಿ ಲೋಕಸಭಾ ಕ್ಷೇತ್ರ :-

ಕಾಂಗ್ರೆಸ್ ಅಭ್ಯರ್ಥಿ ವಿರುಪಾಕ್ಷ ಸಾದುನವರ್ ಸೋಲು

ಬಿಜೆಪಿ ಸುರೇಶ್ ಅಂಗಡಿ 182497 ಮತಗಳ ಅಂತರದಲ್ಲಿ ಗೆಲುವು

 

19)ಚಿಕ್ಕೋಡಿ ಲೋಕಸಭಾ ಕ್ಷೇತ್ರ :-

ಕಾಂಗ್ರೆಸ್ ಅಭ್ಯರ್ಥಿ ಪ್ರಕಾಸ್ ಹುಕ್ಕೇರಿ ಸೋಲು

ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ್ ಜೊಲ್ಲಿ 102000 ಮತಗಳ ಅಂತರದಲ್ಲಿ ಗೆಲುವು

 

20)ಬಾಗಲಕೋಟೆ ಲೋಕಸಭಾ ಕ್ಷೇತ್ರ :-

ಕಾಂಗ್ರೆಸ್ ಅಭ್ಯರ್ಥಿ ವೀಣಾ ಕಾಶಪ್ಪನವರ್ 425074 ಮತ ಸೋಲು

ಬಿಜೆಪಿ ಅಭ್ಯರ್ಥಿ ಪಿಸಿ ಗದ್ದಿಗೌಡರ್ ಒಟ್ಟು 573197 ಮತಗಳನ್ನು ಗಳಿಸಿ 148122 ಮತಗಳ ಅಂತರದಲ್ಲಿ ಗೆಲುವು

 

21) ದಾವಣಗೆರೆ ಲೋಕಸಭಾ ಕ್ಷೇತ್ರ :-

ಕಾಂಗ್ರೆಸ್ ಅಭ್ಯರ್ಥಿ ಹೆಚ್.ಬಿ ಮಂಜಪ್ಪ ಸೋಲು

ಬಿಜೆಪಿ ಅಭ್ಯರ್ಥಿ ಜಿ.ಎಂ ಸಿದ್ದೇಶ್ 110000 ಮತಗಳ ಅಂತರದಲ್ಲಿ ಗೆಲುವು

Image result for ಬಿಜೆಪಿ ಅಭ್ಯರ್ಥಿ ಜಿ.ಎಂ ಸಿದ್ದೇಶ್

 

22) ಹಾವೇರಿ ಲೋಕಸಭಾ ಕ್ಷೇತ್ರ :-

ಕಾಂಗ್ರೆಸ್ ಅಭ್ಯರ್ಥಿ ಡಿ.ಆರ್ ಪಾಟೀಲ್ 532565 ಮತ ಸೋಲು

ಬಿಜೆಪಿ ಅಭ್ಯರ್ಥಿ ಶಿವಕುಮಾರ್ ಉದಾಸಿ ಒಟ್ಟು 667454 ಮತಗಳನ್ನು ಗಳಿಸಿ 134889 ಮತಗಳ ಅಂತರದಲ್ಲಿ ಗೆಲುವು

 

23) ಕೊಪ್ಪಳ ಲೋಕಸಭಾ ಕ್ಷೇತ್ರ :-

ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ್ ಹಿಟ್ನಾಳ್ 547573 ಮತ ಸೋಲು

ಬಿಜೆಪಿ ಅಭ್ಯರ್ಥಿ ಸಂಗಣ್ಣ ಅಮರಪ್ಪ ಕರಡಿ ಒಟ್ಟು 584997 ಮತಗಳ ಗಳಿಸಿ 37434 ಮತಗಳ ಅಂತರದಲ್ಲಿ ಗೆಲುವು

 

24)ಧಾರವಾಡ ಲೋಕಸಭಾ ಕ್ಷೇತ್ರ :-

ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಲಕರ್ಣಿ ಒಟ್ಟು ಸೋಲು

ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಜೋಶಿ 212000 ಮತಗಳ ಅಂತರದಲ್ಲಿ ಗೆಲುವು

 

25) ಉತ್ತರ ಕನ್ನಡ ಲೋಕಸಭಾ ಕ್ಷೇತ್ರ :-

ಜೆಡಿಎಸ್ ಅಭ್ಯರ್ಥಿ ಆನಂದ್ ಅಸ್ನೋಟಿಕರ್ ಸೋಲು

ಬಿಜೆಪಿ ಅಭ್ಯರ್ಥಿ ಅನಂತ್ ಕುಮಾರ್ ಹೆಗಡೆ  ಒಟ್ಟು 783211 ಮತ ಗಳಿಸಿ 477081 ಮತಗಳ ಅಂತರದಲ್ಲಿ ಗೆಲುವು

 26) ಶಿವಮೊಗ್ಗ ಲೋಕಸಭಾ ಕ್ಷೇತ್ರ :-

ಬಿಜೆಪಿ ಅಭ್ಯರ್ಥಿ ಬಿ.ವೈ ರಾಘವೇಂದ್ರ ಒಟ್ಟು 729051 ಮತ ಗಳಿಸಿ 222706 ಮತಗಳ ಅಂತರದಲ್ಲಿ ಗೆಲುವು

ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಸಾಧುನೂರ್ ಸೋಲು

ಜೆಡಿಎಸ್ ಯಿಂದ ಮಧು ಬಂಗಾರಪ್ಪ 506345 ಮತ ಹೀನಾಯ ಸೋಲು

 

27) ಬಳ್ಳಾರಿ ಲೋಕಸಭಾ ಕ್ಷೇತ್ರ :-

ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್ ಉಗ್ರಪ್ಪ 559970 ಮತ ಗಳಿಸಿ ಸೋಲು

ಬಿಜೆಪಿ ಅಭ್ಯರ್ಥಿ ವೈ ದೇವೇಂಧ್ರಪ್ಪ ಒಟ್ಟು 614274 ಮತ ಗಳಿಸಿ 54304 ಮತಗಳ ಅಂತರದಲ್ಲಿ ಗೆಲುವು

 

28) ರಾಯಚೂರು ಲೋಕಸಭಾ ಕ್ಷೇತ್ರ :-

ಕಾಂಗ್ರೆಸ್ ಅಭ್ಯರ್ಥಿ ಬಿ.ವಿ ನಾಯಕ್ 397084 ಸೋಲು

ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ್ ನಾಯಕ್  ಒಟ್ಟು 397084 ಮತ ಗಳಿಸಿ 82189 ಮತಗಳ ಅಂತರದಲ್ಲಿ ಗೆಲುವು

Leave a Reply

Your email address will not be published.

Social Media Auto Publish Powered By : XYZScripts.com