ಬಹುನಿರೀಕ್ಷಿತ ಫಲಿತಾಂಶ : ಸಂಜೆಯೊಳಗೆ ಘಟಾನುಘಟಿಗಳ ಹಣೆ ಬರಹ ತೀರ್ಮಾನ!

ಬಹುನಿರೀಕ್ಷಿತ ಲೋಕಸಭಾ ಚುನಾವಣೆ ಫಲಿತಾಂಶದ ಮತ ಎಣಿಕೆ ಆರಂಭಗೊಂಡಿದ್ದು ಅಂತಿಮ ಫಲಿತಾಂಶ ಇನ್ನೇನು ಕೆಲವೇ ಗಂಟೆಗಳಲ್ಲಿ ಹೊರಹೊಮ್ಮಲಿದೆ. ಸದ್ಯದ ಮಾಹಿತಿ ಪ್ರಕಾರ ದೇಶದ ಒಟ್ಟು 542 ಕ್ಷೇತ್ರಗಳ ಪೈಕಿ 319 ಕ್ಷೇತ್ರಗಳಲ್ಲಿ ಎನ್ ಡಿ ಎ ಮುನ್ನಡೆ ಸಾಧಿಸಿದೆ. ಇನ್ನೂ ಯು ಪಿ ಎ 113 ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದೆ. ಇತರೆ ಪಕ್ಷಗಳು 102 ಕ್ಷೇತ್ರಗಳಲ್ಲಿ ಮುನ್ನಡೆ ಕಂಡಿದೆ.

ಸಂಜೆ ಒಳಗೆ ಘಟಾನುಘಿಗಳ ಭವಿಷ್ಯ ನಿರ್ಧಾರವಾಗಿಲಿದೆ. ಈ ಚುನಾವಣೆಯಲ್ಲಿ ಪ್ರಧಾನಿ ಮೋದಿ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಮಹಾಘಟ ಬಂದನ್ ನಾಯಕ, ಆಂಧ್ರ ಸಿಎಂ ಚಂದ್ರಬಾಬು ನಾಯ್ಡು, ಕರ್ನಾಟಕ ಸಿಎಂ ಕುಮಾರಸ್ವಾಮಿ, ಮಾಜಿ ಸಿಎಂ ಸಿದ್ದರಾಮಯ್ಯ, ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹಣೆ ಬರಹ ತೀರ್ಮಾನವಾಗಲಿದೆ.

ಪೂರ್ವ ದೆಹಲಿಯಲ್ಲಿ ಗೌತಮ್ ಗಂಭೀರ್ ಮುನ್ನಡೆಯಲ್ಲಿದ್ದಾರೆ. ಕುತೂಹಲ ಮೂಡಿಸಿರುವ ಭೋಪಾಲ್ ನಲ್ಲಿ ದಿಗ್ವಿಜಯ್ ಸಿಂಗ್ 5500 ಮತಗಳಿಂದ ಹಿನ್ನಡೆ ಸಾಧಿಸಿದ್ದಾರೆ.

ಇನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಕ್ಷೇತ್ರ ವಾರಣಾಸಿಯಲ್ಲಿ ಯಾವುದೇ ಸ್ಪರ್ಧೆಯಿಲ್ಲ. 2014ರಲ್ಲಿ ಮೋದಿ ವಿರುದ್ಧ ಅರವಿಂದ್ ಕೇಜ್ರಿವಾಲ್ ಸ್ಪರ್ಧೆ ನಡೆಸಿದ್ದರು. ಆದ್ರೆ ಈ ಬಾರಿ ಯಾವುದೇ ಪಕ್ಷ ಮೋದಿ ವಿರುದ್ಧ ಬಲ ವ್ಯಕ್ತಿಯನ್ನು ನಿಲ್ಲಿಸಿಲ್ಲ. ಹಾಗಾಗಿ ಮೋದಿ ಗೆಲುವು ಸುಲಭ. ಸದ್ಯ ಮೋದಿ 11000 ಮತಗಳಿಂದ ಮುನ್ನಡೆ ಕಾಯ್ದುಕೊಂಡಿದ್ದಾರೆ.

ಇನ್ನು ಗುರುದಾಸ್ಪುರದಲ್ಲಿ ಸನ್ನಿ ಡಿಯೋಲ್ ಮುನ್ನಡೆ ಕಾಯ್ದುಕೊಂಡಿದ್ದಾರೆ. ಇನ್ನು ಕನೌಜ್ ನಲ್ಲಿ ಡಿಂಪಲ್ ಯಾದವ್ ಮುಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com