ಈ ಸಲ Exit poll ಯಾಕೆ ಫೇಲಾಗಲಿವೆ? ಉತ್ತರಪ್ರದೇಶದ ಈ ಉದಾಹರಣೆಯೊಂದೇ ಸಾಕು….

ಇಲ್ಲಿ ಮತ್ತೆ ಎನ್‍ಡಿಎ ಅಧಿಕಾರಕ್ಕೆ ಬರಬಹುದು ಅಷ್ಟೇ. ಬಂದೇ ಬರುತ್ತದೆ ಎಂದು ಹೇಳುವ ಬಹುಪಾಲು ಎಕ್ಸಿಟ್ ಪೋಲ್ಸ್ ಫೇಲಾಗುವ ಸಾಧ್ಯತೆಗಳು ದಟ್ಟವಾಗಿವೆ. ಉತ್ತರಪ್ರದೇಶದ ಸಮೀಕ್ಷೆ ಕುರಿತಂತೆ ಇಲ್ಲಿ ನೀಡಿರುವ ಎಡ ವಟ್ಟು, ಭಾನಗಡಿಗಳ ವಿವರ ಓದಿದರೆ, ಈ ಬಾರಿ ಎಕ್ಸಿಟ್ ಪೋಲ್ಸ್ ಯಾಕೆ ವಿಫಲವಾಗಬಹುದು ಎಂಬುದಕ್ಕೆ ಉತ್ತರ ಸಿಗುತ್ತವೆ…..

ಅತ್ಯಂತ ಪ್ರಮುಖ ಎನಿಸಿದ ಉತ್ತರಪ್ರದೇಶದ ಕುರಿತಂತೆ ಎಕ್ಸಿಟ್ ಪೋಲ್‍ಗಳು ನೀಡಿರುವ ಸಂಖ್ಯೆಗಳು ಅನುಮಾನಾಸ್ಪದವಾಗಿವೆ. ಮತ್ತೆ ಮೋದಿ ಪ್ರಧಾನಿ ಎಂದು ಈ ಎಲ್ಲ ಪೋಲ್‍ಗಳು ಹೇಳಿದರೂ ಉತ್ತರಪ್ರದೇಶದ ಕುರಿತು ನೀಡಿರುವ ಸಂಖ್ಯೆಗಳಲ್ಲಿ ಸಾಕಷ್ಟು ‘ವೈವಿಧ್ಯತೆ’ ಇದೆ! ಒಂದೇ ರಾಜ್ಯ, ಹಲವು ಅಂದಾಜು!

ಎಕ್ಸಿಟ್ ಪೋಲ್‍ಗಳು ಮೂರು ಬಗೆಯ ಫಲಿತಾಂಶ ಅಂದಾಜು ಮಾಡಿವೆ:
1. ಎನ್‍ಡಿಎ, ಘಟಬಂಧನ್ ಸಮ-ಸಮ
2. ಎನ್‍ಡಿಎ ಸ್ವೀಪ್
3. ಘಟಬಂಧನ್ ಸ್ವೀಪ್

1. ಎನ್‍ಡಿಎ, ಘಟಬಂಧನ್ ಸಮ ಸಮ
ಮೂರು ಸಮೀಕ್ಷೆಗಳು ಈ ತರಹ ವರದಿ ಮಾಡಿವೆ. ಇಂಡಿಯಾ ಟಿವಿ-ಸಿಎನ್‍ಎಕ್ಸ್ ಸಮೀಕ್ಷೆ ಪ್ರಕಾರ, ಸಮ-ಸಮ ಅಲ್ಲದಿದ್ದರೂ, ಅದು ಎನ್‍ಡಿಎಗೆ 50, ಘಟಬಂಧನ್‍ಗೆ 28 ಕೊಟ್ಟಿದೆ. ಸಿ-ವೋಟರ್ ಘಟಬಂಧನ್‍ಗೆ 40, ಎನ್‍ಡಿಎಗೆ 38 ನೀಡಿದೆ. ಎಬಿಪಿ-ನೆಲ್ಸನ್ ಘಟಬಂಧನ್‍ಗೆ 45, ಎನ್‍ಡಿಎಗೆ 33 ಸೀಟು ನೀಡಿದೆ. ಈ ಮೂರೂ ಸಮೀಕ್ಷೆಗಳು ಕಾಂಗ್ರೆಸ್‍ಗೆ 2 ಸ್ಥಾನ ಕೊಟ್ಟಿವೆ.

2014ರಲ್ಲಿ ಘಟಬಂಧನ್ (ಆಗ ಅವು ಪ್ರತ್ಯೇಕವಾಗಿಯೇ ಸ್ಪರ್ಧಿಸಿದ್ದವು) ಎನ್‍ಡಿಎಗಿಂತ 42 ಕ್ಷೇತ್ರಗಳಲ್ಲಿ ಶೇಕಡಾವಾರು ಮತ ಪ್ರಮಾಣದಲ್ಲಿ ಮುಂದೆ ಇತ್ತು, 36 ಸೀಟುಗಳಲ್ಲಿ ಹಿಂದೆ ಇತ್ತು.
ಈಗ ಯಾವುದೇ ಪಾಸಿಟಿವ್ ಅಥವಾ ನೆಗೆಟಿವ್ ವೋಟ್ ಸ್ವಿಂಗ್ ಇಲ್ಲದೇ ಇದ್ದರೆ, ಈ ಘಟಬಂಧನ್ ನಡುವೆ ಪರಿಪೂರ್ಣ ‘ಮತ ವರ್ಗಾವಣೆ’ (ವೋಟ್ ಟ್ರಾನ್ಸ್‍ಫರ್) ನಡೆದರೆ, ಎನ್‍ಡಿಎಗೆ ಸಿಗುವುದು 36 ಸೀಟು (ಕಳೆದ ಸಲ 73) ಮಾತ್ರ!

ಇದನ್ನು ಓದಿ: 75-80 ಸೀಟು ನಷ್ಟ! ಉತ್ತರ ಭಾರತದಲ್ಲಿ ಬಿಜೆಪಿ ಪಾತಾಳಕ್ಕೆ….

ಆದರೆ, ಬಹುಪಾಲು ಸಮೀಕ್ಷೆಗಳು ಈ ವಿಷಯದಿಂದ ಒಂದು ಸಣ್ಣ ವಿಚಲನೆ ( ವಿಷಯಾಂತರ ಅನ್ನಬಹುದು, deviation) ಮಾಡಿವೆ. ಸಿ-ವೋಟರ್ ಸರ್ವೆ, ಘಟಬಂಧನ್ ಪಕ್ಷಗಳ ನಡುವೆ ಮತ ವರ್ಗಾವಣೆ ಸರಿಯಾಗಿದೆ ಎಂದು ತೋರಿಸುತ್ತಲೇ, ಬಿಜೆಪಿ ವಿರುದ್ಧ ಯಾವುದೇ ನೆಗೆಟಿವ್ ಸ್ವಿಂಗ್ ಇಲ್ಲ ಎಂದು ಸೂಚಿಸುತ್ತದೆ!

ಸಿಎನ್‍ಎಕ್ಸ್ ಸಮೀಕ್ಷೆ, ಘಟಬಂಧನ್ ಪಕ್ಷಗಳ ನಡುವೆ ಮತ ವರ್ಗಾವಣೆಯಲ್ಲಿ ಕೊಂಚ ಹಿನ್ನಡೆ ಆಗುವುದನ್ನು ಸೂಚಿಸುತ್ತಲೇ, ಒಂದು ಸಣ್ಣ ಪಾಸಿಟಿವ್ ಸ್ವಿಂಗ್ ಇದೆ ಎನ್ನುತ್ತದೆ. ನೆಲ್ಸನ್ ಸಮೀಕ್ಷೆ ಇದಕ್ಕೆ ವಿರುದ್ಧವಾಗಿದ್ದು, ಅದು ಘಟಬಂಧನ್ ನಡುವೆ ಪರಿಪೂರ್ಣ ಮತ ವರ್ಗಾವಣೆಯನ್ನು ಹೇಳುತ್ತಲೇ, ಎನ್‍ಡಿಎಯಿಂದ ಒಂದು ಅತಿ ಸಣ್ಣ ಸ್ವಿಂಗ್ ಆಗಲಿದೆ ಎನ್ನುತ್ತದೆ. ವಿಚಿತ್ರ ಎಂದರೆ, ಈ ನೆಲ್ಸನ್ ಸರ್ವೆ ಮೇ 19ರ ಸಂಜೆ ಎನ್‍ಡಿಎಗೆ 22 ಸೀಟು ಕೊಟ್ಟಿತ್ತು, ಆದರೆ ನಂತರ ಅದನ್ನು ಸಡನ್ನಾಗಿ 33ಕ್ಕೆ ಅಡ್ಜಸ್ಟ್ ಮಾಡಿಕೊಂಡಿತು!

2. ಎನ್‍ಡಿಎ ಸ್ವೀಪ್
ಈ ವಿಭಾಗದಲ್ಲಿ 3 ಬಗೆಯಿವೆ. ಒಂದು, ಇಂಡಿಯಾ ಟುಡೇ-ಆಕ್ಸಿಸ್ ಸಮೀಕ್ಷೆ ಎನ್‍ಡಿಎಗೆ 62-68 ಸೀಟುಗಳನ್ನು, ಘಟಬಂಧನ್‍ಗೆ 10-16 ಸೀಟುಗಳನ್ನು ದಯಪಾಲಿಸಿದೆ. ಟುಡೆ’ಸ್ ಚಾಣಕ್ಯ ಎನ್‍ಡಿಎಗೆ 65 ಮತ್ತು ಘಟಬಂಧನ್‍ಗೆ 13 ಸೀಟುಗಳನ್ನು ನೀಡಿದೆ. ನ್ಯೂಸ್-18-ಇಪ್ಸೊಸಿಸ್ ಎನ್‍ಡಿಎಗೆ 60 ಸೀಟು ಮತ್ತು ಘಟಬಂಧನ್‍ಗೆ 18 ಸೀಟು ಎಂದು ಹೇಳಿದೆ.
ಇಲ್ಲಿ ಪ್ರಸ್ತಾಪಿಸಲ್ಪಟ್ಟ ಮೂರೂ ಸಮೀಕ್ಷೆಗಳ ಪ್ರಕಾರ, ಉತ್ತರ ಪ್ರದೇಶದಲ್ಲಿ ಜಾತಿ, ಲಿಂಗ, ವಯಸ್ಸು- ಈ ಎಲ್ಲ ಪರಿಗಣನೆ ಇಲ್ಲದೇ ಮೋದಿ ಅಲೆ ಎಲ್ಲ ಕಡೆಯಿದೆ ಎಂದಾಯ್ತು!

3 ಘಟಬಂಧನ್ ಸ್ವೀಪ್
ಮೇಲಿನ ಸಮೀಕ್ಷೆಗಳಿಗಿಂತ ಭಿನ್ನ ಎನಿಸುವ ಎರಡು ಸರ್ವೆಗಳು ಮಹಾ ಘಟಬಂಧನ್‍ಗೆ ಸ್ವೀಪ್ ಎಂದು ತೋರಿಸುತ್ತಿವೆ. ನ್ಯೂಸ್ ಚಾನೆಲ್ ನ್ಯಾಷನಲ್ ವಾಯಿಸ್ ಪ್ರಕಾರ, ಘಟಬಂಧನ್‍ಗೆ 48, ಎನ್‍ಡಿಎಗೆ 28 ಸೀಟು ದಕ್ಕಲಿವೆ.
ಕೃತಕ ಬುದ್ಧಿಮತ್ತೆ ( artificial intelligence) ನೆರವು ಪಡೆದು ಸಮೀಕ್ಷೆ ಮಾಡುವ Anthro.ai ಸಂಸ್ಥೆಯ ಸಮೀಕ್ಷೆ ಪ್ರಕಾರ, ಘಟಬಂಧನ್‍ಗೆ 54 ಸೀಟು ಸಿಗಲಿವೆ. ಎನ್‍ಡಿಎ 50 ಸೀಟು ಕಳೆದುಕೊಂಡು 22 ಸೀಟನ್ನಷ್ಟೇ ಗಳಿಸಲಿದೆ…

ಸೀಟ್ ಟು ಸೀಟ್ ಮತ್ತು ರಾತ್ರೋರಾತ್ರಿ ಡಿಲೀಟ್!
ಮೂರು ಸಂಸ್ಥೆಗಳು ಉತ್ತರಪ್ರದೇಶದಲ್ಲಿ ಸೀಟ್-ಟು-ಸೀಟ್ ಸಮೀಕ್ಷೆ ಮಾಡಿವೆ ಎಂದು ಹೇಳಿಕೊಂಡಿವೆ- ಆಕ್ಸಿಸ್, ಂಟಿಣhಡಿo.ಚಿi, ನ್ಯಾಷನಲ್ ವೈಸ್. ಆದರೆ, ರಾತ್ರೋರಾತ್ರಿ ಆಕ್ಸಿಸ್‍ನವರು ತಮ್ಮ ವೆಬ್‍ಸೈಟಿನಿಂದ ತಮ್ಮ ಪ್ರೆಡಿಕ್ಷನ್ ಅನ್ನು ಡಿಲೀಟ್ ಮಾಡಿದ್ದು ಸಂಶಯಾಸ್ಪದವಾಗಿದೆ! ಆದರೆ, ಈ ಪ್ರೆಡಿಕ್ಷನ್‍ಗಳಲ್ಲಿ ಕೆಲವೊಂದು ಬದಲಾವಣೆ ಮಾಡಿ, ಆಕ್ಸಿಸ್ ಸಹಭಾಗಿ ಚಾನೆಲ್ ಇಂಡಿಯಾ ಟುಡೇಯ ವೆಬ್‍ಸೈಟಿನಲ್ಲಿ ಹಾಕಲಾಗಿದೆ.

ಆಕ್ಸಿಸ್‍ನ ಸೀಟ್-ಟು-ಸೀಟ್ ವಿಶ್ಲೇಷಣೆಯಲ್ಲಿ ಅಖಿಲೇಶ್ ಪತ್ನಿ ಡಿಂಪಲ್ ಸೊಲು ಎಂದು ಹೇಳಲಾಗಿತ್ತು. 2014ರಲ್ಲಿ ಮೋದಿ ಅಲೆಯಲ್ಲಿ, ಬಿಎಸ್‍ಪಿ ಬೆಂಬಲವೂ ಇಲ್ಲದೇ ಗೆದ್ದಿದ್ದ ಡಿಂಪಲ್‍ಗೆ ಮೋದಿ ಅಲೆ ಇಲ್ಲದ, ಬಿಎಸ್‍ಪಿ ಬೆಂಬಲ ಬೇರೆ ಇರುವ ಹೊತ್ತಿನಲ್ಲಿ ಸೋಲು ಹೇಗೆ ಸಾಧ್ಯ ಎಂಬ ಸರಳ ಪ್ರಶ್ನೆಗೆ ಆಕ್ಸಿಸ್ ಬಳಿ ಉತ್ತರವಿರಲಿಲ್ಲ. ಇಂತಹ ಹಲವು ಎಡವಟ್ಟುಗಳ ಕಾರಣದಿಂದ ಅದು ತನ್ನ ವೆಬ್‍ಸೈಟಿನಿಂದಲೇ ತನ್ನದೇ ಪ್ರೆಡಿಕ್ಷನ್ ಅನ್ನು ತೆಗೆದು ಹಾಕಬೇಕಾಗಿತು! ಮುಲಾಯಂ ಸಿಂಗ್ ಕ್ಷೇತ್ರದ ವಿಚಾರದಲ್ಲೂ ಆಕ್ಸಿಸ್ ಎಡವಟ್ಟು ರಿಸಲ್ಟ್ ಕೊಟ್ಟಿತ್ತು.
ಇತರ ರಾಜ್ಯಗಳಲ್ಲೂ ಈ ಸಂಸ್ಥೆ ಮಾಡಿದ ಸೀಟ್-ಟು-ಸೀಟ್ ಎಕ್ಸಿಟ್ ಪೋಲ್‍ಗಳು ಸಂಶಯಾತ್ಮಕವಾಗಿಯೇ ಇವೆ.

ವಿಚಿತ್ರ ಅಂದರೆ, ಸೀಟ್-ಟು-ಸೀಟ್ ಪೋಲ್‍ನಲ್ಲಿ, ‘ಆಯಾ ಪಾರ್ಟಿಗಳ ಜನಪ್ರಿಯತೆಯನ್ನು ಮಾತ್ರ ಲೆಕ್ಕಕ್ಕೆ ತೆಗೆದುಕೊಡಿದ್ದೇವೆ ಹೊರತು ಅಭ್ಯರ್ಥಿಯ ಸಾಮಥ್ರ್ಯವನ್ನಲ್ಲ, ಇದರಲ್ಲಿ ಏರುಪೇರಾದರೆ ನಾವು ಜವಾಬ್ದಾರ ಅಲ್ಲ’ ಎಂದು ಆಕ್ಸಿಸ್ ಮೊದಲೇ ಘೋಷಿಸಿತ್ತು!
ಅಭ್ಯರ್ಥಿಯ ವಿಷಯವನ್ನೇ ಡ್ರಾಪ್ ಮಾಡಿದರೆ ಅದ್ಹೇಗೆ ಸೀಟ್-ಟು-ಸೀಟ್ ಸಮೀಕ್ಷೆ ಆಗುತ್ತದೆ? ಹೀಗಾಗಿ, ಒಟ್ಟಿನಲ್ಲಿ ಇಂಡಿಯಾ ಟುಡೇ-ಆಕ್ಸಿಸ್ ಸಮೀಕ್ಷೆಯೇ ನಂಬಿಕೆಗೆ ಅರ್ಹವಲ್ಲ ಅನಿಸತೊಡಗಬಹುದು.

ಸೀಟ್-ಟು-ಸೀಟ್ ಲೆಕ್ಕದ ಸರ್ವೆಯಲ್ಲಿ ನ್ಯಾಷನಲ್ ವೈಸ್ ಸಮೀಕ್ಷೆಯೇ ವಿಶ್ವಾಸಾರ್ಹ. ಅದು ಘಟಬಂಧನ್‍ಗೆ ಉತ್ತರಪ್ರದೇಶದಲ್ಲಿ 48 ಸೀಟು ಎಂದು ಹೇಳಿದೆ.
(ಆಧಾರ: ದಿ ಕ್ವಿಂಟ್)

Leave a Reply

Your email address will not be published.

Social Media Auto Publish Powered By : XYZScripts.com