ನನ್ನ ಭಾಷೆ ಒರಟು, ಆದರೆ ದುರಹಂಕಾರಿ ಅಲ್ಲ -ಬೇಗ್‌ಗೆ ತಿರುಗೇಟು ನೀಡಿದ ಸಿದ್ದರಾಮಯ್ಯ

ನಾನು ಹಳ್ಳಿಯವ, ನನ್ನ ಭಾಷೆ ಒರಟೆ ಹೊರತು ನಾನು ದುರಹಂಕಾರಿ ಅಲ್ಲ ಎಂದು ತಮ್ಮ ಬಗ್ಗೆ ಅಪದ್ಧ ನುಡಿದ ಮಾಜಿ ಸಚಿವ ರೋಶನ್ ಬೇಗ್ ಅವರಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿರುಗೇಟು ನೀಡಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಸಿದ್ದರಾಮಯ್ಯ ಹಳ್ಳಿ ಪರಿಸರದಲ್ಲಿ ಬೆಳೆದು ಬಂದವ ನಾನು. ನನ್ನ ಭಾಷೆಯಲ್ಲಿ ಒರಟುತನ ಕಾಣಬಹುದು ಆದರೆ ವರ್ತನೆಯಲ್ಲಿ ಆಲ್ಲ. ನಾನೆಂದೂ ದುರಹಂಕಾರದಿಂದ ನಡೆದುಕೊಂಡಿಲ್ಲ ಎಂದು ಹೇಳಿದರು.

ನನ್ನದು ಹಳ್ಳಿ ಭಾಷೆ ಮತ್ತು ನೇರ ನುಡಿ. ಸ್ವಾಭಿಮಾನಿಯಾದವರು ಮತ್ತು ಪ್ರಾಮಾಣಿಕರು ಮಾತ್ರ ನೇರ ನಿಷ್ಠುರ ವ್ಯಕ್ತಿತ್ವ ಹೊಂದಿರುತ್ತಾರೆ, ಆದರೆ ಇದು ಕೆಲವು ಸೋಗಲಾಡಿ ವ್ಯಕ್ತಿತ್ವದವರಿಗೆ ಅಹಂಕಾರದಂತೆ ಕಾಣುತ್ತದೆ. ನಾವು ಜನಪರ ಮತ್ತು ಬಡವರ ಪರವಾಗಿರುವುದರಿಂದ ಅಂಥವರ ಮಾತಿಗೆ ಹೆಚ್ಚು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದರು.

ಅವರು ರೋಶನ್ ಬೇಗ್ ಅವರಿಗೆ ಅಧಿಕಾರದ ಆಸೆ ಹೆಚ್ಚಿದೆ. ಅದು ಸಿಗದಾಗ ಈ ರೀತಿಯಲ್ಲಿ ಮನಬಂದಂತೆ ಅರ್ಥರಹಿತವಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿದರು.ರೋಷನ್ ಬೇಗ್ ಅವರು ಮಂತ್ರಿಯಾಗುವ ಬಯಕೆ ಹೊಂದಿದ್ದರು ಜೊತೆಗೆ ಲೋಕಸಭಾ ಟಿಕೆಟ್‌ನ ಆಕಾಂಕ್ಷಿ ಕೂಡ ಆಗಿದ್ದರು.

ಇವೆರಡು ಕೈತಪ್ಪಿರುವುದರಿಂದ ಅವರು ಈ ರೀತಿ ಹೇಳಿಕೆ ನೀಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಅವರ ಮೇಲೆ ಸೂಕ್ತ ಶಿಸ್ತು ಕ್ರಮ ಕೈಗೊಳ್ಳುವ ಭರವಸೆ ಇದೆ ಎಂದರು.

ರೋಶನ್ ಬೇಗ್ ಅವರಾಡಿರುವ ಮಾತುಗಳಿಂದ ಪಕ್ಷಕ್ಕೆ ಹಾನಿಯಾಗಿದೆ. ಅವರ ವಿರುದ್ಧ ಕ್ರಮ ಜರುಗಿಸುವುದು ಪಕ್ಷಕ್ಕೆ ಬಿಟ್ಟ ವಿಚಾರವಾಗಿದೆ ಎಂದು ಅವರು ತಿಳಿಸಿದರು.

ಇನ್ನು ತಾವೆಂದೂ ಧರ್ಮ ಒಡೆಯುವ ಕೆಲಸಕ್ಕೆ ಕೈಹಾಕಿಲ್ಲ. ಪ್ರತ್ಯೇಕ ಧರ್ಮ ಆಗಬೇಕೆಂದು ವಿರಕ್ತರು ಬಂದು ಒತ್ತಾಯ ಮಾಡಿದಾಗ ಸಂಪುಟಲ್ಲಿ ಚರ್ಚೆ ಮಾಡಿ, ಹಿಂದುಳಿದ ಆಯೋಗದ ಶಿಫಾರಸನ್ನು ಜಾರಿಗೆ ತಂದೆನಷ್ಟೇ ಎಂದು ಸಿದ್ದರಾಮಯ್ಯ ಹೇಳಿದರು.

Leave a Reply

Your email address will not be published.

Social Media Auto Publish Powered By : XYZScripts.com