ಲೋಕಸಮರದ ಮಹಾತೀರ್ಪು ಸಂಭ್ರಮಕ್ಕೆ ಮಳೆರಾಯ ಅವಕಾಶ ಕೊಡ್ತಾನಾ..?

ನಾಳೆ ಲೋಕಸಮರದ ಮಹಾತೀರ್ಪು ಹೊರಬೀಳಲಿದೆ. ಅಭ್ಯರ್ಥಿಗಳ ಎದೆ ಬಡಿತ ಹೆಚ್ಚಾಗಿದೆ. ಹೀಗಿರುವಾಗ ನಾಳೆ ಫಲಿತಾಂಶ ಹೊರ ಬೀಳುತ್ತಲೇ ಪಟಾಕಿ ಸಿಡಿಸಿ, ಸಿಹಿ ಹಂಚಿ ರಸ್ತೆಯುದ್ದಕ್ಕೂ ಸಂಭ್ರಮಾಚರಣೆ ಮಾಡಬೇಕು ಅಂತಾ ಅಭ್ಯರ್ಥಿಗಳು, ಕಾರ್ಯಕರ್ತರು ಪ್ಲಾನ್ ಮಾಡಿಕೊಂಡಿದ್ದಾರೆ. ಆದ್ರೆ ಇದಕ್ಕೆ ಮಳೆರಾಯ ತಣ್ಣೀರೆರಚಲಿದ್ದಾನೆ.

ಕೌಂಟಿಂಗ್ ದಿನ ಅಂದ್ರೆ ನಾಳೆ ಭಾರಿ ಮಳೆಯಾಗುವ ಸಾಧ್ಯತೆ ಇದೆಯಂತೆ. ಅದ್ರಲ್ಲೂ ಮಂಡ್ಯ, ಮೈಸೂರು, ಬೆಂಗಳೂರು, ಹಾಸನ, ತುಮಕೂರು, ಕರಾವಳಿ, ಮಲೆನಾಡು ಭಾಗದಲ್ಲಿ ಬಿರುಗಾಳಿ ಸಹಿತ ಮಳೆಯಾಗಲಿದೆ ಅಂತಾ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಮೇ 23 ರಿಂದ 25 ರವರೆಗೆ ಅಂದ್ರೆ 3 ದಿನಗಳ ಕಾಲ ರಾಜ್ಯದಲ್ಲಿ ಮಳೆಯ ಆರ್ಭಟ ಜೋರಾಗಿರಲಿದೆ ಅಂತಾ ಹೇಳಲಾಗ್ತಿದೆ. ಹೀಗಾಗಿ ಅಭ್ಯರ್ಥಿಗಳ ಗೆಲುವಿನ ಸಂಭ್ರಮಾಚರಣೆಗೆ ಅಡ್ಡಿಯಾಗೋದಂತು ಗ್ಯಾರಂಟಿ.

Leave a Reply

Your email address will not be published.

Social Media Auto Publish Powered By : XYZScripts.com