‘ನಾಳೆವರೆಗೆ ಮಾತ್ರ ಕುಮಾರಸ್ವಾಮಿ ಸಿಎಂ’ : ಮೈತ್ರಿ ನಾಯಕರ ವಿರುದ್ಧ ಸದಾನಂದಗೌಡ ವ್ಯಂಗ್ಯ

ಹೆಚ್.ಡಿ ದೇವೇಗೌಡರು, ಕುಮಾರಸ್ವಾಮಿಯವರನ್ನು ಚಂದ್ರಬಾಬು ನಾಯ್ಡು ನಿನ್ನೆ ಭೇಟಿಯಾಗಿರುವ ಬಗ್ಗೆ ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ‘ಆಂಧ್ರದಲ್ಲಿ ಚಂದ್ರಬಾಬು ನಾಯ್ಡು ಅಧಿಕಾರ ಕಳೆದುಕೊಳ್ಳುತ್ತಾರೆ. ಸಮಾನ ಮನಸ್ಕರು ಒಂದೆಡೆ ಸೇರಿದ್ದಾರೆ’ ಎಂದು ಹೇಳುವ ಮೂಲಕ ವ್ಯಂಗ್ಯವಾಡಿದ್ದಾರೆ.

ಬೆಂಗಳೂರಿನಲ್ಲಿ ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ಮಾಧ್ಯಮದೊಂದಿಗೆ ಮಾತನಾಡಿ ‘ನಾಳೆ ಸಂಜೆಯವರೆಗೆ ಮಾತ್ರ ಮುಖ್ಯಮಂತ್ರಿಯಾಗಿ ಹೆಚ್.ಡಿ ಕುಮಾರಸ್ವಾಮಿಯವರು ಇರುತ್ತಾರೆ. ನಾಳೆ ಅಧಿಕಾರ ಕಳೆದುಕೊಂಡು ರಾಜೀನಾಮೆ ಕೊಡುತ್ತಾರೆ. ಹೊಸ ಸರ್ಕಾರ ರಚನೆಗೆ ವೇದಿಕೆ ಸಜ್ಜಾಗುತ್ತಿದೆ’ ಎಂದಿದ್ದಾರೆ.

ಜೊತೆಗೆ ‘ಸತ್ಯವನ್ನು ಬಹಳ ದಿನ ಮರೆಮಾಚಲು ಸಾಧ್ಯವಾಗೋದಿಲ್ಲ. ಸಿದ್ದರಾಮಯ್ಯ ಅತ್ಯಂತ ದುರಹಂಕಾರಿ ಸಿಎಂ ಆಗಿದ್ದರು’ ಎಂದು ರೋಷನ್ ಬೇಗ್ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ದಿನೇಶ್ ಗುಂಡೂರಾವ್ ರಾಹುಲ್ ಗಾಂಧಿಯ ಕೈಗೊಂಬೆ. ರೊಮೋಟ್ ಕಂಟ್ರೋಲ್ ಆಗಿದ್ದಾರೆ ಎಂದು ಕೈ ನಾಯಕರ ವಿರುದ್ಧ ವ್ಯಂಗ್ಯವಾಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com