World cup Cricket : ವಿಶ್ವಕಪ್ ಗೆದ್ದು ದೇಶದ ಗಡಿ ಕಾಯುವ ಯೊಧರಿಗೆ ಅರ್ಪಿಸುತ್ತೆವೆ -Kohli

ಮೂರನೇ ಬಾರಿಗೆ ವಿಶ್ವಕಪ್ ಕ್ರಿಕೆಟ್ ಗೆಲ್ಲುವ ಉಮೇದು ಮತ್ತು ವಿಶ್ವಾಸದೊಂದಿಗೆ ವಿರಾಟ್ ಕಪಹ್ಲಿ ನಾಯಕತ್ವದ ಭಾರತ ಕ್ರಿಕೆಟ್ ತಂಡ ಇಂಗ್ಲೆಂಡಿಗೆ ಪ್ರಯಾಣ ಬೆಳೆಸಿದೆ.

ಎರಡು ಬಾರಿಯ ಚಾಂಪಿಯನ್ ಬಾರತ ಮೂನೇ ಬಾರಿಗೆ ಕಪ್ಪಿಗೆ ಮುತ್ತಿಕ್ಕುವ ವಿಸ್ವಾಸವನ್ನು ತಂಡದ ನಾಯಕ ಕೊಹ್ಲಿ ಹಾಗೂ ಕೋಚ್ ರವಿ ಶಾಸ್ತ್ರಿ ಇಂಗ್ಲೆಂಡಿಗೆ ತೆರಳುವ ಮುನ್ನ ವ್ಯಕ್ತಪಡಿಸಿದ್ದಾರೆ.

ಮಹತ್ವದ ಟೂರ್ನಿಗೆ ಹೊರಡುವ ಮುನ್ನ ಮಂಗಳವಾರ ಸುದ್ದಿಗಾರರ ಜೊತೆ ಗುಫ್ತಗೂ ಮಾಡಿದ ಕೊಹ್ಲಿ ಟ್ರೋಫಿ ಗೆದ್ದು ಅದನ್ನು ದೇಶದ ಗಡಿ ಕಾಯುವ ಯೊಧರಿಗೆ ಅರ್ಪಿಸುವುದಾಗಿ ಹೇಳಿದ್ದಾರೆ.

ಪ್ರಸಕ್ತ ವಿಶ್ವಕಪ್ಪಿನ ಸ್ವರೂಪ ನೋಡಿದರೆ ಯಾವುದೇ ತಂಡಕ್ಕೂ ಇದು ಸವಾಲಿನ ವಿಷಯ ಎಂಬುದು ಸ್ಪಷ್ಟವಾಗುತ್ತದೆ.ಆದರೆ ಸವಾಲುಗಳನ್ನು ಮೆಟ್ಟಿ ನಿಲ್ಲುವ ತಾಕತ್ತು ಮತ್ತು ಅದಕ್ಕೆ ಬೇಕಾದ ಸಂಪನ್ಮೂಲ ತಂಡದಲ್ಲಿದೆ ಎಂಬ ವಿಶ್ವಾಸವನ್ನು ಕೊಹ್ಲಿ ವ್ಯಕ್ತ ಮಾಡಿದ್ದಾರೆ.
ಇಂಗ್ಲೆಂಡಿನ ವಾತಾವರಣ ಹೇಗಿರಲಿದೆ ಎಂಬುದರ ಸ್ಪಷ್ಟ ಅರಿವು ತಂಡಕ್ಕಿದೆ. ಆದರೆ ಒತ್ತಡವನ್ನು ಸಹಿಸಿಕೊಂಡು ಅದನ್ನು ಮೆಟ್ಟಿ ನಿಲ್ಲುವ ದೊಡ್ಡ ಸವಾಲು ನಮ್ಮ ಮುಂದಿದ್ದು, ಆ ಸವಾಲನ್ನು ಸಮರ್ಥವಾಗಿ ನಿಭಾಯಿಸುವ ವಿಶ್ವಾಸ ತಂಡಕ್ಕಿದೆ ಎಂದು ಕೊಹ್ಲಿ ಹೊರಡುವ ಮುನ್ನ ಹೇಳಿದ್ದಾರೆ.

ಈ ನಿಟ್ಟಿನಲ್ಲಿ ಇತ್ತೀಚೆಗಷ್ಟೇ ಮುಗಿದ ಐಪಿಎಲ್ ಪಂದ್ಯಾವಳಿಯ ಪ್ರದರ್ಶನವನ್ನು ಅವಲೋಕಿಸಿದರರೆ ಒತ್ತಡದ ಸಂದರ್ಭಗಳನ್ನು ಹೇಗೆ ನಿಭಾಯಿಸಬೇಕು ಎಂಬುದು ತಂಡದ ಆಟಗಾರರಿಗೆ ಮನವರಿಕೆಯಾಗಿರುವುದು ಮನದಟ್ಟಾಗುತ್ತದೆ ಎಂದು ಕೊಹ್ಲಿ ಹೇಳಿದ್ದಾರೆ,

ಈ ವಿಶ್ವಕಪ್ಪಿಗೆ ಅತ್ಯಂತ ಸಮತೋಲಿತ ತಂಡದೊಂದಿಗೆ ಕಣಕ್ಕಿಳಿಯುತ್ತಿದ್ದೇವೆ, ಐಪಿಎಲ್‌ನಲ್ಲಿ ಎಮ್ಮರೂ ತಮ್ಮ ಸಾಮರ್ಥ್ಯ ತೋರ್ಪಡಿಸಿದ್ದಾರೆ. ಈ ಬಾರಿ ಕಪ್ ಗೆಲ್ಲುವ ಮೂಲಕ ದೇಶ ಕಾಯುವ ಯೋದರಿಗೆ ಅದನ್ನು ಸಮರ್ಪಣೆ ಮಾಡಲಿದ್ದೇವೆ ಎಂದು ನಾಯಕ ವಿರಾಟ್ ಕೊಹ್ಲಿ ಭರವಸೆ ನೀಡಿದ್ದಾರೆ.

ಇದೇ ವೇಳೆ ಪಂದ್ಯಾವಳಿಯ ಬಗ್ಗೆ ಮಾತನಾಡಿದ ಕೊಹ್ಲಿ ತಾವಾಡಿರವು ಪಂದ್ಯಾವಳಿಗಳಲ್ಲಿಯೇ ಇದು ಅತ್ಯಂತ ಸವಾಲಿನದ್ದಾಗಿದೆ. ಎಲ್ಲ ತಂಡಗಳೂ ಸಮಾನ ಅವಕಾಶ ಹೊಂದಿವೆ. ಆದರೂ ಆ ಸವಾಲನ್ನು ಮೆಟ್ಟಿ ನಿಲ್ಲುವ ವಿಶ್ವಾಸ ತಮಗಿದೆ ಎಂದರು.

Leave a Reply

Your email address will not be published.

Social Media Auto Publish Powered By : XYZScripts.com