ಪತ್ನಿ ಬಿಜೆಪಿಗೆ ಮತಹಾಕಿದ್ದಾಳೆಂಬ ಕಾರಣಕ್ಕೆ ಪತಿ ಮಾಡಿದ್ದು ಈ ಕೆಲಸ..!

ಬಿಜೆಪಿಗೆ ಮತಹಾಕಿದ್ದು ಮಹಿಳೆಯೊಬ್ಬಳಿಗೆ ದುಬಾರಿಯಾಗಿ ಪರಿಣಮಿಸಿದೆ. ಪತಿಯೊಬ್ಬ ಪತ್ನಿ ಕತ್ತು ಕೊಯ್ದು ಹತ್ಯೆ ಮಾಡಿದ್ದಾನೆ. ಪತ್ನಿ ಬಿಜೆಪಿಗೆ ಮತಹಾಕಿದ್ದಾಳೆಂಬುದು ಗೊತ್ತಾಗ್ತಿದ್ದಂತೆ ಕೋಪಗೊಂಡ ಪತಿ ಈ ಕೆಲಸ ಮಾಡಿದ್ದಾನೆ. ಘಟನೆ ಗಾಜಿಪುರದಲ್ಲಿ ನಡೆದಿದೆ.

ತರವಾನಿಯಾ ಗ್ರಾಮದ ರಾಂಬಚನ್ ಸೋಮವಾರ ಪತ್ನಿ ನೀಲಮ್ ಹತ್ಯೆಗೈದಿದ್ದಾನೆ. ಮೃತ ಮಹಿಳೆ ಕುಟುಂಬಸ್ಥರು ವರದಕ್ಷಿಣೆ ಕಿರುಕುಳ ದೂರು ದಾಖಲಿಸಿದ್ದಾರೆ. ಬಿಎಸ್ಪಿಗೆ ಮತ ಹಾಕುವಂತೆ ರಾಂಬಚನ್ ಪತ್ನಿಗೆ ಹೇಳಿದ್ದನಂತೆ. ಆದ್ರೆ ನೀಲಮ್, ಬಿಜೆಪಿಗೆ ಮತ ಹಾಕಿದ್ದಳಂತೆ. ಭಾನುವಾರ ಈ ಬಗ್ಗೆ ಗಲಾಟೆ ನಡೆದಿತ್ತು ಎನ್ನಲಾಗಿದೆ. ಸೋಮವಾರ ಬೆಳಿಗ್ಗೆ ಮತ್ತೆ ಗಲಾಟೆ ನಡೆದಿದೆ.

ಪತ್ನಿ ಕತ್ತು ಕತ್ತರಿಸಿದ ರಾಂಬಚನ್ ಅಲ್ಲಿಯೇ ನಿಂತಿದ್ದನಂತೆ. ಜನ ಸೇರುತ್ತಿದ್ದಂತೆ ಅಲ್ಲಿಂದ ತೆರಳಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com