‘ನಮ್ಮ ಶಾಲಾ ದಿನಗಳಲ್ಲಿ ಈ ಎಕ್ಸಿಟ್ ಪೋಲ್ ಇರಲಿಲ್ಲ..’ ಕಾಲೆಳೆದ ನೆಟ್ಟಿಗರು!

ಪ್ರಧಾನಿ ನರೇಂದ್ರ ಮೋದಿಯವರಿಗೆ ಮತ್ತೆ ಅಧಿಕಾರ ಸಿಗಲಿದೆ. ಬಿಜೆಪಿ ನೇತೃತ್ವದ ಎನ್.ಡಿ.ಎ. ಗೆ 300 ಸ್ಥಾನಗಳು ಲಭಿಸಲಿವೆ ಅಂಥ ಎಕ್ಸಿಟ್ ಪೋಲ್ ಸಮೀಕ್ಷೆಗಳು ಅಭಿಪ್ರಾಯ ವ್ಯಕ್ತಪಡಿಸಿವೆ.

ಇನ್ನು ಎನ್.ಡಿ.ಎ.ಗೆ 300ಕ್ಕೂ ಹೆಚ್ಚು ಸ್ಥಾನ ಲಭಿಸಿದ್ರೆ, ಯುಪಿಎ ಗೆ 152 ಸ್ಥಾನ ಸಿಗಬಹುದು ಅನ್ನೋದು ಎಲ್ಲಾ ಎಕ್ಸಿಟ್ ಪೋಲ್ಸ್ ವಾದ. ಎಕ್ಸಿಟ್ ಪೋಲ್ಸ್ ನೋಡಿದ ಬಳಿಕ ಟ್ವೀಟಿಗರು ಸಿಕ್ಕಾಪಟ್ಟೆ ಮಾಧ್ಯಮಗಳ ಕಾಲೆಳೆದಿದ್ದಾರೆ. ಕೆಲವೊಂದು ಟ್ವೀಟ್ಸ್ ಇಲ್ಲಿವೆ ನೋಡಿ.

ಸದ್ಯ ನಾವೇ ಪುಣ್ಯವಂತರು.. ನಮ್ಮ ಶಾಲಾ ದಿನಗಳಲ್ಲಿ ಈ ಎಕ್ಸಿಟ್ ಪೋಲ್ ಇರಲಿಲ್ಲ..
ಇಲ್ಲಾಂದ್ರೆ ನಮ್ಮ ಪೋಷಕರು ರಿಸಲ್ಟ್ ಗೆ ಮೂರ್ನಾಲ್ಕು ದಿನಗಳ ಮುಂಚೆ ಹೊಡೆಯೋಕೆ ಶುರು ಮಾಡ್ತಾ ಇದ್ರು…

ಶೋಭಾ ಡೇ.

ಆ ಎಕ್ಸಿಟ್ ಪೋಲ್ ನೋಡಿ……ಮತ್ತೆ ಅವರೇ ಬರ್ತಾರಂತೆ. ಆ ಸೆನ್ಸ್ ಕ್ಸ್ ನೋಡಿ…..ವಾವ್ಹ್… ಮೋದಿ…ಮೋದಿ..ಮೋದಿ..! ಎಎಪಿ ಬೆಂಬಲಿಗರು ಎಕ್ಸಿಟ್ ಪೋಲ್ಸ್ ಬಂದಾಗೆಲ್ಲ ತಮ್ಮ ಬೆಂಬಲ ಪರೀಕ್ಷಿಸಿಕೊಳ್ತಾರೆ.

Leave a Reply

Your email address will not be published.

Social Media Auto Publish Powered By : XYZScripts.com