exit poll effect : ಮಧ್ಯಪ್ರದೇಶದಲ್ಲಿ ಕಮಲ್ ಸರಕಾರ ಕೆಡವಲು ಮುಂದಾದ ಬಿಜೆಪಿ…!

ಮತ್ತೊಂದು ಅವಧಿಗೆ ಎನ್ಡಿಎ ಸರಕಾರ ಕೇಂದ್ರದಲ್ಲಿ ಅಧಿಕಾರ ಹಿಡಿಯಲಿದೆ ಎಂಬ ಮತಗಟ್ಟೆ ಸಮೀಕ್ಷೆಗಳ ಬೆನ್ನಲ್ಲಿಯೇ ಮಧ್ಯಪ್ರದೇಶದಲ್ಲಿ ಅಧಿಕಾರ ಪಲ್ಲಟಕ್ಕೆ ಬಿಜೆಪಿ ಮುಂದಾಗಿದೆ.

ಕಮಲ್ನಾಥ್ ಮುಂದಾಳತ್ವದ ಕಾಂಗ್ರೆಸ್ ಸರಕಾರ ಬಹುಮತ ಕಳೆದುಕೊಂಡಿದ್ದು ಕೂಡಲೇ ವಿಧಾನಸಭಾ ಅಧಿವೇಶನ ಕರೆದು ಬಹುಮತ ಸಾಬೀತು ಮಾಡುವಂತೆ ಅವರಿಗೆ ಆದೇಶ ನೀಡಬೇಕು ಎಂದು ಕೊರಿ ಬಿಜೆಪಿ ಮಧ್ಯಪ್ರದೇಶ ರಾಜ್ಯಪಾಲರ ಮೊರೆ ಹೋಗಿದೆ.

ಫಲಿತಾಂಶ ಪೂರ್ವದಲ್ಲಿಯೇ ಕಮಲನಾಥ್ ಸರಕಾರ ಬಹುಮತ ಕಳೆದುಕೊಂಡಿದೆ. ಹಾಗಾಗಿ ಕೂಡಲೇ ಬಹುಮತ ಸಾಬೀತಿಗೆ ಆದೇಶ ನೀಡಿ ಎಂದು ಮಧ್ಯಪ್ರದೇಶದ ಬಿಜೆಪಿ ನಾಯಕರು ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ. ಅಲ್ಲದೇ ಖುದ್ದು ಭೇಟಿಗೆ ಸಮಯವನ್ನೂ ಕೋಡಿದ್ದಾರೆ.

ಕಳೆದ ವರ್ಷ ನಡೆದ ಚಿಧಾನಸಭಾ ಚುನಾವಣೆಯಲ್ಲಿ ಅಚ್ಚರಿಯ ರೀತಿಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೇರಿತಾದರೂ ಬಿಜೆಪಿ ಸಹ 109 ಸ್ಥಾನ ಗೆಲ್ಲುವ ಮೂಲಕ ಬಹುಮತದಿಂದ ತೀರಾ ದೂರವೇನೂ ಉಳಿಯಲಿಲ್ಲ.

ಈಗ ದಿಲ್ಲಿಯಲ್ಲಿ ಮತ್ತೆ ತಮ್ಮದೇ ಸರಕಾರ ಬರಲಿದೆ ಎಂಬ ಸಮೀಕ್ಷಾ ವರದಿಗಳ ಹಿನ್ನೆಲೆಯಲ್ಲಿ ಬಿಜೆಪಿ ಸರಕಾರ ರಚನೆಯ ಹವಣಿಕೆಯಲ್ಲಿದೆ.

ಚುನಾವಣೆ ಮುಗಿದ 22 ದಿನಗಳಲ್ಲಿ ಕಮಲ್ ಸರಕಾರ ಬೀಳಲಿದೆ ಎಂದು ಮಧ್ಯಪ್ರದೇಶದ ಬಿಜೆಪಿ ಮುಖಂಡರು ಪ್ರಚಾರ ಸಂರ್ಭದಲ್ಲಿ ಬಹಿರಂಗವಾಗಿಯೇ ಹೇಳಿದ್ದರು.

 

Leave a Reply

Your email address will not be published.

Social Media Auto Publish Powered By : XYZScripts.com