Athletics : ಸಲಿಂಗ ಸಂಬಂಧ ದೃಢಪಡಿಸಿದ ಅಥ್ಲೀಟ್ ದುತಿ ಚಂದ್…..

ಭಾರತದ ಖ್ಯಾತ ಅಥ್ಲೀಟ್ ದುತಿ ಚಂದ್ ತಾವು ಒಡಿಶಾದ ಮಹಿಳೆಯ ಜೊತೆ ಸಲಿಂಗ ಸಂಬಂಧದಲ್ಲಿ ಇರುವುದನ್ನು ದೃಢಪಡಿಸಿದ್ದಾರೆ. ಜೊತೆಗೆ ಇಂತಹ ಸಂಬಂಧ ಒಪ್ಪಿಕೊಂಡ ದೇಶದ ಮೊದಲ ಅಥ್ಲೀಟ್ ಎನಿಸಿದ್ದಾರೆ.

2018ರ ಏಷ್ಯನ್ ಗೇಮ್ಸ್ ಬೆಳ್ಳಿ ಪದಕ ವಿಜೇತೆ ದುತಿ ತಮ್ಮ ಸಂಗಾತಿ ಹೆಸರನ್ನು ಬಹಿರಂಗಪಡಿಸಲು ನಿರಾಕರಿಸಿದ್ದು, ಆಕೆ ಒಡಿಶಾದವರು ಎಂದಷ್ಟೇ ಹೇಳಿದ್ದಾರೆ.

ಸಲಿಂಗ ಸಂಬಂಧ ಅಕ್ರಮ ಅಲ್ಲ ಎಂದು ಕಳೆದ ವರ್ಷ ಸುಪ್ರೀಂ ಕೊಟ್‌ ತೀರ್ಪು ನೀಡಿದ ನಂತರ ಅನೇಕರು ತಮ್ಮ ಸಲಿಂಗ ಸಂಬಂಧವನ್ನು ದೃಢಪಡಿಸಿದ್ದು, ಈಗ ದುತಿ ಸಹ ಅದನ್ನೇ ಮಾಡಿದ್ದಾರೆ.

ಕಳೆದ ಮೂರು ವರ್ಷಗಳಿಂದ ತಾವಿಬ್ಬರೂ ಅನ್ಯೋನ್ಯವಾಗಿ ಬಾಳ್ವೆ ಮಾಡುತ್ತಿರುವುದಾಗಿ 100 ಮೀಟರ್ ಚಾಂಪಿಯನ್ ದುತಿ ಸ್ಪಷ್ಟಪಡಿಸಿದ್ದಾರೆ.

ಸಲಿಂಗ ಸಂಬಂಧ ಕುರಿತ ಸುಪ್ರಿಂ ಕೋರ್ಟ್‌ ತೀರ್ಪಿನ ನಂತರ ನಾವಿಬ್ಬರೂ ಒಟ್ಟಿಗೆ ಬಾಳ್ವೆ ಮಾಡುವ ನಿರ್ಧಾರ ಮಾಡಿದೆವು ಎಂದು ದುತಿ ಹೇಳಿದ್ದಾರೆ. ಈ ಸಂಬಂಧಕ್ಕೆ ನನ್ನ ಸಹೋದರಿ ಅಡ್ಡಿಯಾಗಿದ್ದಾರೆ. ಆದರೆ ನಾನು ಅದಕ್ಕೆ ಬೆಲೆ ನೀಡುವುದಿಲ್ಲ ಎಂದು ಅವರು ಹೇಳಿದ್ದಾರೆ.

ಈ ಮಧ್ಯೆ ಮುಂದಿನ ವರ್ಷದ ಒಲಿಂಪಿಕ್ಸ್‌ಗೆ ಅರ್ಹಯತೆ ಗಿಟ್ಟಿಸುವ ನಿಟ್ಟಿನಲ್ಲಿ ನಾನಾ ಅಥ್ಲಿಟಿಕ್ ಕೂಟಗಳಲ್ಲಿ ಭಾಗವಹಿಸಲಿರುವ ದುತಿ ಚಂದ್ ಜಗತ್ತಿನ ಅತಿ ದೊಡ್ಡ ವೇದಿಕೆಯಲ್ಲಿ ಪಕದಧಾರಿಯಾಗುವ ಕನಸು ಇಟ್ಟುಕೊಂಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com