89ಕ್ಕೆ ಕೇವಲ 14 ಅಂಕ : SSLC ಪರೀಕ್ಷಾ ಮಂಡಳಿ ಯಡವಟ್ಟಿನಿಂದ ವಿದ್ಯಾರ್ಥಿನಿ ಫೇಲ್

ವಿದ್ಯಾರ್ಥಿಗಳು ಕಷ್ಟಪಟ್ಟು ಓದಿ ಪರೀಕ್ಷೆ ಬರೆದಿರ್ತಾರೆ. ಆದ್ರೆ ಪರೀಕ್ಷಾ ಮಂಡಳಿ ಮಾಡುವ ಯಡವಟ್ಟಿಗೆ ಅವರ ಭವಿಷ್ಯವೇ ಕತ್ತಲಾಗುತ್ತೆ. ಇಂತಹುದೇ ಒಂದು ಘಟನೆ ರಾಮನಗರದಲ್ಲಿ ನಡೆದಿದೆ.

ಬಿಳಗುಂದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಲಕ್ಷ್ಮಿದೇವಿ ಈ ಬಾರಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಒಟ್ಟು 339 ಅಂಕ ಗಳಿಸಿದ್ದಳು. ಆದ್ರೆ ಆಕೆಗೆ ಕನ್ನಡದಲ್ಲಿ ಬಂದಿದ್ದು ಬರೀ 14 ಅಂಕ. ಹೀಗಾಗಿ ಆಕೆ ಅನುತ್ತೀರ್ಣಳಾಗಿದ್ದಳು. ಇದಕ್ಕೆ ಕಾರಣ ಪರೀಕ್ಷಾ ಮಂಡಳಿ ಮಾಡಿದ ಯಡವಟ್ಟು. ಕನ್ನಡ ಪರೀಕ್ಷೆಯಲ್ಲಿ 89 ಅಂಕ ಗಳಿಸಿದ್ರೂ, ಮಂಡಳಿಯವರು 14 ಅಂಕ ಅಂತಾ ನಮೂದಿಸಿದ್ರು. ಇದ್ರಿಂದಾಗಿ ಲಕ್ಷ್ಮೀದೇವಿ ಫೇಲಾಗಿದ್ದಳು.

ಲಕ್ಷ್ಮೀದೇವಿ ಪೋಷಕರು ಅನಕ್ಷರಸ್ಥರು. ಹೀಗಾಗಿ ಆಕೆ ನೆರೆಮನೆಯವರ ಸಹಕಾರದಿಂದ ಕರ್ನಾಟಕ ಪ್ರೌಢಶಿಕ್ಷಣ ಮಂಡಳಿಗೆ ಶುಲ್ಕ ತುಂಬಿ ಉತ್ತರ ಪತ್ರಿಕೆಯ ನಕಲು ಪತ್ರಿಕೆ ಪಡೆದಿದ್ದಾಳೆ. ಆಗ ಆಕೆ 89 ಅಂಕ ಪಡೆದಿರುವುದು ತಿಳಿದು ಬಂದಿದೆ.

ಕನ್ನಡ ವಿಷಯದಲ್ಲಿ ಲಕ್ಷ್ಮೀದೇವಿ 14 ಪುಟಗಳ ಉತ್ತರ ಬರೆದಿದ್ದಳು. ಇದಕ್ಕೆ ಮೌಲ್ಯಮಾಪಕರು 89 ಅಂಕ ನೀಡಿದ್ರು. ಆದ್ರೆ ಅಂಕ ನಮೂದಿಸುವ ಸಂದರ್ಭದಲ್ಲಿ ಪುಟಗಳ ಸಂಖ್ಯೆಯನ್ನು ಅಂಕ ಅಂತಾ ತಪ್ಪಾಗಿ ಭಾವಿಸಿ 14 ಎಂದು ನಮೂದಿಸಲಾಗಿತ್ತು.

Leave a Reply

Your email address will not be published.

Social Media Auto Publish Powered By : XYZScripts.com