ಕಮಲ್ ಮತ್ತೊಂದು ವಿವಾದಾತ್ಮಕ ಹೇಳಿಕೆ : ‘ಹಿಂದೂ’ ಎಂಬ ಪದ ಯಾವುದೇ ಪ್ರಾಚೀನ ಗ್ರಂಥಗಳಲ್ಲಿಲ್ಲ!

ದೇಶದ ಮೊದಲ ಭಯೋತ್ಪಾದಕ ಎಂಬ ಹೇಳಿಕೆ ನೀಡುವ ಮೂಲಕ ವಿವಾದ ಸೃಷ್ಟಿಸಿದ್ದ ಕಮಲ್ ಹಾಸನ್, ಇದೀಗ ಮತ್ತೊಂದು ಹೇಳಿಕೆ ನೀಡುವ ಮೂಲಕ ಉರಿಯುವ ಬೆಂಕಿಗೆ ತುಪ್ಪ ಸುರಿದಿದ್ದಾರೆ. ‘ಹಿಂದೂ’ ಎಂಬ ಪದ ಯಾವುದೇ ಪ್ರಾಚೀನ ಗ್ರಂಥಗಳಲ್ಲಿಲ್ಲ. ಇದು ವಿದೇಶೀ ಆಕ್ರಮಣಕಾರರು ನಿಡಿದ ಶಬ್ಧ ಎನ್ನುವ ಮೂಲಕ ಮತ್ತೊಂದು ವಿವಾದಕ್ಕೆ ನಾಂದಿ ಹಾಡಿದ್ದಾರೆ.

ಟ್ವಿಟರ್ ನಲ್ಲಿ ತಮಿಳು ಲಿಪಿಯಲ್ಲಿ ಈ ಕುರಿತಾಗಿ ಬರೆದುಕೊಂಡಿರುವ ಕಮಲ್ ಹಾಸನ್ ‘ಯಾವುದೇ ಪ್ರಾಚೀನ ಗ್ರಂಥಗಳಲ್ಲಿ ಹಿಂದೂ ಎಂಬ ಶಬ್ಧವನ್ನು ಉಲ್ಲೇಖಿಸಿಲ್ಲ. ಮೊಘಲರು ಸೇರಿದಂತೆ ಇನ್ನಿತರ ವಿದೇಶೀ ಆಕ್ರಮಣಕಾರರು ಈ ಪದ ಬಳಕೆ ಆರಂಭಿಸಿದ್ದರು. ಹೀಗಾಗಿ ಒಂದು ಧರ್ಮಕ್ಕೆ ಈ ಶಬ್ಧವನ್ನು ಸೀಮಿತಗೊಳಿಸುವುದು ತಪ್ಪು. ನಮ್ಮನ್ನು ನಾವು ಭಾರತೀಯರೆಂದು ಗುರುತಿಸಿಕೊಳ್ಳಬೇಕೇ ಹೊರತು ಹಿಂದೂ ಎಂದಲ್ಲ’ ಎಂಬ ಸ್ಪಷ್ಟನೆ ನೀಡಿದ್ದಾರೆ.

ಮಕ್ಕಳ್ ನಿಧಿ ಮಯ್ಯಮ್ ಪಕ್ಷದ ಮುಖ್ಯಸ್ಥ ಕಮಲ್ ಹಾಸನ್ ಈ ಕುರಿತಾಗಿ ಪ್ರತಿಕ್ರಿಯಿಸುತ್ತಾ ”ಅಲ್ವರ್ ಆಗಲಿ ನಯನ್ಮಾರ್ ಆಗಲಿ, ಶೈವರು ಅಥವಾ ವೈಷ್ಣವರಾಗಲಿ ಹಿಂದೂ ಎಂಬ ಪದ ಬಳಕೆ ಮಾಡಿಲ್ಲ. ನಮ್ಮ ಮೇಲೆ ಆಕ್ರಮಣ ನಡೆಸಿ ಶಾಸನ ನಡೆಸಿದ ಬ್ರಿಟಿಷರು ಹಾಗೂ ವಿದೇಶಿಗರು ನೀಡಿದ ಈ ಪದವನ್ನೇ ನಾವು ಮುಂದುವರೆಸಿಕೊಂಡು ಹೋಗುತ್ತಿದ್ದೇವೆ’ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com