Karnataka : ಪತನದ ಹಾದಿಯಲ್ಲಿ ದೋಸ್ತಿ ಸರಕಾರ – B S ಯಡಿಯೂರಪ್ಪ…

ಸರಕಾರದ ಭವಿಷ್ಯದ ಬಗ್ಗೆ ದೋಸ್ತಿ ಪಕ್ಷಗಳಲ್ಲಿ ಭಿನ್ನ ಹೇಳಿಕೆಗಳು ಬರುತ್ತಿದ್ದು ಲೋಕಸಭಾ ಚುನಾವಣಾ ಫಲಿತಾಂಶದ ಬಳಿಕ ಸರಕಾರ ಮುಮದುವರಿಯುವ ಲಕ್ಷಣ ಕಾಣುತ್ತಿಲ್ಲ ಎಂದು ಮಾಜಿ ಸಿಎಂ ಬಿಎಸ್. ಯಡಿಯೂರಪ್ಪ ಹೇಳಿದ್ದಾರೆ.

ದಿನಕ್ಕೊಬ್ಬರಂತೆ ದೋಸ್ತಿ ಪಕ್ಷಗಳ ಮುಖಂಡರು ವೈರುದ್ಧ್ಯದ ಹೇಳಿಕೆಗಳನ್ನು ನೀಡುತ್ತಿದ್ರೂ ಸಿಎಂ ಕುಮಾರಸ್ವಾಂಇ ಮೌನಕ್ಕೆ ಶರಣಾಗಿದ್ದಾರೆ. ಇದನ್ನು ನೋಡಿದರೆ ಸರಕಾರದ ಅಂತ್ಯಕಾಲ ಸಮೀಪಿಸಿರುವಂತಿದೆ ಎಂದು ಯಡಿಯೂರಪ್ಪ ಹೇಳಿದ್ದಾರೆ.

ಜೆಡಿಎಸ್ ರಾಜ್ಯಾಧ್ಯಕ್ಷ ವಿಶ್ವನಾಥ್ ಹೇಳಿಕೆಗೂ ಸಿಎಂ ‌ಪ್ರತಿಕ್ರಿಯಿಸಿಲ್ಲ. ಹಾಗೆಯೇ ವಿಸರ್ಜನೆಯ ಮಾತನ್ನಾಡಿರುವ ಹೊರಟ್ಟಿ ಹೇಳಿಕೆ ಬಗ್ಗೆಯೂ ಮೌನ ವಹಿಸಿರುವುದು ನೋಡಿದರೆ ಕುಮಾರಸ್ವಾಮಿ ಮನಸಿನಲ್ಲಿ ಏನಿದೆ ಎನ್ನುವುದು ‌ಗೊತ್ತಾಗುತ್ತದೆ. ಸರಕಾರ ಪತನವಾಗುವುದು ಮಾತ್ರ ಸ್ಪಷ್ಟ ಎಂದು ಯಡಿಯೂರಪ್ಪ ಹೇಳಿದರು.

ಮೈತ್ರಿ‌ ಸರಕಾರದಲ್ಲಿ ಗೊಂದಲ ಉಲ್ಭಣಗೊಂಡಿದೆ. ಪರಸ್ಪರ ಕಚ್ವಾಡಿಕೊಳ್ಳುತ್ತಿದ್ದಾರೆ. ಒಬ್ಬರ ಮೇಲೆ ಇನ್ನೊಬ್ಬರನ್ನು ಎತ್ತಿಕಟ್ಟಲಾಗುತ್ತಿದೆ. ಹೀಗಾಗಿ ಈ ಸರಕಾರ ಅಲ್ಪಾಯುಷ್ಯದ್ದು ಎಂದರು.

ಸರಕಾರವನ್ನು ವಿಸರ್ಜನೆ ಮಾಡಲಾಗದು. ಎರಡೂ ಪಕ್ಷಕ್ಕೂ ಬಹುಮತವಿಲ್ಲ. ವಿಸರ್ಜನೆಗೆ ಕಾನೂನಿನ ತೊಡಕಿದೆ. ಯಾವುದೇ ಒಂದು‌ ಪಕ್ಷದ ಶಾಸಕರು ರಾಜ್ಯಪಾಲರಿಗೆ ರಾಜೀನಾಮೆ ನೀಡಬೇಕು. ಮುಂದಿನ ಹಂತದ ಎಲ್ಲಾ ಬೆಳವಣಿಗೆಯನ್ನು ಗಮನಿಸಿ ಬಿಜೆಪಿ ಮುಂದಡಿ ಇಡಲಿದೆ ಎಂದರು.

ಇದೇ ವೇಳೆ ಈ ಸರಕಾರದಲ್ಲಿರುವ ಮೈತ್ರಿ‌ ಪಕ್ಷಗಳಲ್ಲಿ ಪರಸ್ಪರ ಅಪನಂಬಿಕೆಯಿದೆ. ಹೀಗಾಗಿ ಸರಕಾರ ಪತನವಾಗುವ ಕಾ ಸನ್ನಿಹಿತವಾಗಿದೆ ಎಂದು‌ ಶಾಸಕ‌ ಗೋವಿಂದ ಕಾರಜೋಳ ಹೇಳಿದರು.

ಹಿರಿಯ ನಾಯಕ ಹೊರಟ್ಟಿಯವರೇ ಕಾಂಗ್ರೆಸ್ ವಿರುದ್ಧ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ಸರಕಾರ ವಿಸರ್ಜನೆಯ ಮಾತುಗಳನ್ನಾಡಿದ್ದಾರೆ. ಇದು ಮೈತ್ರಿಯಲ್ಲಿ ಬಿರುಕು ಕಾಣಿಸಿಕೊಂಡಿರುವುದರ ಸ್ಪಷ್ಟ ಲಕ್ಷಣ. ಈ ಸರಕಾರಕ್ಕೆ ಬಹುಮತವಿಲ್ಲ. ಹೀಗಾಗಿ ಸರಕಾರ ನಡೆಸಲಾಗುತ್ತಿಲ್ಲ ಎಂದರು.

Leave a Reply

Your email address will not be published.

Social Media Auto Publish Powered By : XYZScripts.com