ತಮ್ಮ ಚಿತ್ರವಿರುವ ಸಾಕ್ಸ್ ನೋಡಿ ಹಾಸ್ಯಪ್ರಜ್ಞೆಯಿಂದ ಸ್ವೀಕರಿಸಿದ ಟ್ರಂಪ್..!

ಅಮೆರಿಕಾದಲ್ಲಿ ಯಾವುದೇ ರಾಜಕಾರಣಿ ಇರಲಿ ಅವರನ್ನು ಅಲ್ಲಿಯ ಜನತೆ ಮುಲಾಜಿಲ್ಲದೇ ಟೀಕಿಸುತ್ತಾರೆ. ಅದರಲ್ಲೂ ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾದ ಮೇಲಂತೂ ಹೇಗಾದರೊಂದು ರೀತಿಯಲ್ಲಿ ಜನ ಅವರ ಕಾಲೆಳೆಯುತ್ತಾರೆ.

ಈಗ ಅಮೆರಿಕಾದ ಲೂಸಿಯಾನಾದ ಲೆಫ್ಟಿನೆಂಟ್ ಗವರ್ನರ್ ಬಿಲ್ಲಿ ನಂಗೆಸ್ಸರ್, ಡೊನಾಲ್ಡ್ ಟ್ರಂಪ್ ಅವರ ಮುಖ ಹಾಗೂ ಕೂದಲಿರುವ ಸಾಕ್ಸ್ ಅನ್ನು ಅವರ ಸಮ್ಮುಖದಲ್ಲೇ ಹಾಕಿಕೊಂಡು ಎಲ್ಲರ ಗಮನ ಸೆಳೆದಿದ್ದಾರೆ.

ಟ್ರಂಪ್ ಅವರು ಸರ್ಕಾರಿ ಕಾರ್ಯಕ್ರಮಕ್ಕಾಗಿ ಲೂಸಿಯಾನಾಗೆ ಬಂದಾಗ ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಳ್ಳಲು ನಿಂತಾಗ ಈ ಘಟನೆ ನಡೆದಿದೆ. ಸಾಕ್ಸ್ ಅನ್ನು ನೋಡಿದ ಟ್ರಂಪ್ ಚಕಿತರಾದರಂತೆ. ಆದರೆ ಅವರು ಇದನ್ನು ಹಾಸ್ಯಪ್ರಜ್ಞೆಯಿಂದ ಸ್ವೀಕರಿಸಿದ್ದಾರಂತೆ.

ನಮ್ಮ ಭಾರತದಲ್ಲಿ ಕೇವಲ ಮೀಮ್ ಹಂಚಿಕೊಡಿರುವುದಕ್ಕಾಗಿ ಜೈಲಿಗೆ ಕಳಿಸುತ್ತಿರುವಾಗ ನಮ್ಮ ರಾಜಕಾರಣಿಗಳು ಅವರನ್ನು ನೋಡಿ ಕಲಿಯಬೇಕು.

Leave a Reply

Your email address will not be published.

Social Media Auto Publish Powered By : XYZScripts.com