ಬಿಡುವಿನ ಸಮಯ ಪತ್ನಿ ಅನುಷ್ಕಾ ಜೊತೆ ಗೋವಾದಲ್ಲಿ ಕಳೆದ ಕೊಹ್ಲಿ

ಐಸಿಸಿ ವಿಶ್ವಕಪ್ ಮೇ 30 ರಿಂದ ಆರಂಭವಾಗಲಿದೆ. ವಿಶ್ವಕಪ್ ಆರಂಭವಾಗಲು ಇನ್ನೂ 12-13 ದಿನ ಬಾಕಿಯಿದೆ. ಐಪಿಎಲ್ ಈಗಾಗಲೇ ಮುಗಿದಿದೆ. ಬಿಡುವಿನ ಸಮಯವನ್ನು ಪತ್ನಿ ಅನುಷ್ಕಾ ಶರ್ಮಾ ಜೊತೆ ಟೀಂ ಇಂಡಿಯಾ ನಾಯಕ ಕೊಹ್ಲಿ ಗೋವಾದಲ್ಲಿ ಕಳೆಯುತ್ತಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಅನುಷ್ಕಾ ಶರ್ಮಾ ಹಾಗೂ ಕೊಹ್ಲಿ ಫೋಟೋಗಳು ವೈರಲ್ ಆಗಿವೆ. ರೆಸ್ಟೋರೆಂಟ್ ಒಂದರಲ್ಲಿ ಪ್ರಸಿದ್ಧ ಜೋಡಿ ಸುಂದರ ಕ್ಷಣಗಳನ್ನು ಕಳೆಯುತ್ತಿರುವ ಫೋಟೋ ಇದು. ಫೋಟೋದಲ್ಲಿ ವಿರುಷ್ಕಾ ಜೊತೆ ಸ್ನೇಹಿತರೊಬ್ಬರಿದ್ದಾರೆ. ಅನುಷ್ಕಾ ಶರ್ಮಾ ಹಾಗೂ ವಿರಾಟ್ ಕೊಹ್ಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಕೆಲ ವಿಡಿಯೋ ಕೂಡ ವೈರಲ್ ಆಗಿದೆ.

ಕೊಹ್ಲಿ ವಿಶ್ವಕಪ್ ಗೆ ಸಂಪೂರ್ಣ ಸಿದ್ಧರಾಗಿದ್ದಾರೆ. ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಕೂಡ, ವಿಶ್ವಕಪ್ ಗೆ ಭಾರತ ಸಿದ್ಧವಾಗಿದೆ ಎಂದಿದ್ದರು. ಇಂಗ್ಲೆಂಡ್ ಗೆ ಪ್ರಯಾಣ ಬೆಳೆಸುವ ಮೊದಲು ಕೊಹ್ಲಿ, ಪತ್ನಿ ಜೊತೆ ಸುಂದರ ಕ್ಷಣಗಳನ್ನು ಎಂಜಾಯ್ ಮಾಡ್ತಿದ್ದಾರೆ. ಅನುಷ್ಕಾ ಸದ್ಯ ಯಾವುದೆ ಚಿತ್ರಕ್ಕೆ ಸಹಿ ಹಾಕಿಲ್ಲ. ವಿಶ್ವಕಪ್ ಮುಗಿದ ಮೇಲೆ ಮುಂದಿನ ಪ್ಲಾನ್ ಮಾಡಲಿದ್ದಾರೆ ಎನ್ನಲಾಗ್ತಿದೆ.

Leave a Reply

Your email address will not be published.

Social Media Auto Publish Powered By : XYZScripts.com