ಅಖಾಡಕ್ಕೆ ಇಳಿದ ಸೋನಿಯಾ ಗಾಂಧಿ, ವಿಪಕ್ಷ ಒಕ್ಕೂಟ ಸಭೆಗೆ ನವೀನ್, ಜಗನ್, KCRಗೆ ಆಹ್ವಾನ

ಲೋಕಸಭಾ ಚುನಾವಣೆಯ ಫಲಿತಾಂಶಕ್ಕೆ ದಿನಗಣನೆ ಆರಂಭವಾಗಿದ್ದು, ಬಿಜೆಪಿ/ಎನ್ಡಿಎ ಮರುಆಯ್ಕೆ ಬಗ್ಗೆ ಸಂಶಯಗಳು ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ವಿರೋಧ ಪಕ್ಷಗಳನ್ನು ಒಂದೇ ಛತ್ರಿಯಡಿ ತರುವ ಪ್ರಯತ್ನದಲ್ಲಿ ಖುದ್ದು ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಎಂಟ್ರಿ ನೀಡಿದ್ದಾರೆ.

 

ಬಿಜೆಪಿ/ಎನ್ಡಿಎಗೆ ಅಗತ್ಯ ಬಹುಮತ ಡೌಟು ಎಂಬ ಅಂದಾಜು ವರದಿಗಳ ಬೆನ್ನಲ್ಲಿಯೇ ಕಾಂಗ್ರೆಸ್ ಪಕ್ಷವು 23ರಂದು ಯುಪಿಎ ಮಿತ್ರಪಕ್ಷಗಳು ಹಾಗೂ ಯುಪಿಎ ಹೊರಗಿರುವ ವಿರೋಧ ಪಕ್ಷಗಳ ಸಭೆ ಕರೆದಿದೆ.

ಈ ಸಭಗೆ ಆಗಮಿಸುವಂತೆ ಕಾಂಗ್ರೆಸ್ ಅನ್ನು ವಿರೋಧಿಸುವ ಪ್ರಾದೇಶಿಕ ಪಕ್ಷಗಳಿಗೂ ಆಹ್ವಾಣ ನೀಡಲಾಗಿದೆ. ತೆಲಂಗಾಣದ ಮುಖ್ಯಮಂತ್ರಿ ಕೆಸಿಆರ್ (ಟಿಆರೆಸ್)‍, ಒಡಿಶಾದ ನವೀನ್ ಪಟ್ನಾಯಕ್ (ಬಿಜೆಡಿ) ಹಾಗೂ ತಮ್ಮ ವಿರುದ್ಧ ಸಿಡಿದು ಹೋದ ಜಗನ್ (ವೈಎಸ್‌ಆರ್‍) ಅವರಿಗೆ ಸೋನಿಯಾ ಖುದ್ದು ಪತ್ರ ಬರೆದು ಆಹ್ವಾನ ನೀಡಿದ್ದಾರೆ.

 

ಐದು ವರ್ಷಗಳ ಮೋದಿ ದುರಾಟಳಿತ ಕೊನೆಗಾಣಿಸಲು ಕಾಲ ಕೂಡಿಬಂದಿದ್ದು ಪರಸ್ಪರ ಭಿನ್ನಾಭಿಪ್ರಾಯ ಮರೆತು ಎಲ್ಲರೂ ಕೈಜೋಡಿಸಬೇಕಿದೆ. ಈ ಹಿನ್ನೆಲೆಯಲ್ಲಿ ಮೇ. 23ರಂದು ಕರೆಯಲಾಗಿರುವ ಸಭೆಗೆ ಬರುವಂತೆ ಸೋನಿಯಾ ವಿಪಕ್ಷ ನಾಯಕರಿಗೆ ಪತ್ರ ಬರೆದಿದ್ದಾರೆ.

ಚುನಾವಣಾ ನಂತರದ ಸನ್ನಿವೇಶದಲ್ಲಿ ಜಗನ್, ಕೆಸಿಆರ್‍ ಮತ್ತು ನವೀನ್ ಅವರು ಬಿಜೆಪಿ/ಎನ್ಡಿಎ ಜೊತೆ ಕೈಜೋಡಿಸುವ ಸಾಧ್ಯತೆ ತಳ್ಳಿಹಾಕುವಂತಿಲ್ಲ ಎಂಬ ವರದಿಗಳ ಹಿನ್ನೆಲೆಯಲ್ಲಿ ಸೋನಿಯಾ ಅವರ ಈ ನಡೆ ಕುತೂಹಲ ಮೂಡಿಸಿದೆ.

ದೇಶದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ಹೊರತಾಗಿ ತೃತೀಯ ರಂಗ ರಚನೆಗೆ ಕೆಸಿಆರ್ ಇನ್ನಿಲ್ಲದ ಪ್ರಯತ್ನ ನಡೆಸುತ್ತಿದ್ದು, ಆ ನಿಟ್ಟಿನಲ್ಲಿ ಕೇರಳ ಸಿಎಂ ಪಿಣರಾಯಿ ವಿಜಯನ್ ಮತ್ತು ಡಿಎಂಕೆಯ ಸ್ಟಾಲಿನ್ ಅವರನ್ನು ಭೇಟಿ ಮಾಡಿದ್ದರು. ಆದರೆ ಅಂತಹ ಸಾಧ್ಯತೆ ಇಲ್ಲ ಬದಲಾಗಿ ನೀವೇ ಯುಪಿಯೆಗೆ ಬನ್ನಿ ಎಂದು ಹೇಳುವ ಮೂಲಕ ಈ ಪ್ರಯತ್ನಕ್ಕೆ ತಣ್ಣೀರು ಎಸಚಿದ್ದರು.

Leave a Reply

Your email address will not be published.

Social Media Auto Publish Powered By : XYZScripts.com