Congress + JDS govt : ಐವರು Congress ಶಾಸಕರು ರಾಜೀನಾಮೆಗೆ ಸಿದ್ದ – ರಮೇಶ್..

ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟದ ನಂತರ ರಾಜ್ಯದಲ್ಲಿ ಅಧಿಕಾರ ಪಲ್ಲಟಕ್ಕೆ ಹೆಗಲು ಕೊಡಲು ಕೈ ಬಂಡಾಯ ಶಾಸಕ ರಮೇಶ್ ಜಾರಕಿಹೊಳಿ ಸಿದ್ಧತೆ ನಡೆಸಿದ್ದಾರೆ.

ಈ ನಿಟ್ಟಿನಲ್ಲಿ ಈಗಾಗಲೇ ಬಿಜೆಪಿ ಕೆಲವು ಹಿರಿಯ ಮುಖಂಡರ ಜೊತೆ ಮಾತುಮಕತೆ ನಡೆಸಿರುವ ರಮೇಶ್ ಜಾರಕಿಹೊಳಿ ಎಲ್ಲಕ್ಕೂ ಮೇ. 23ರ ತನಕ ಕಾಯುವುದು ಲೇಸು ಎಂಬ ಸಂದೇಶ ರವಾನಿಸಿದ್ದಾರೆ ಎಂದು ಹೇಳಲಾಗಿದೆ.

ರಾಜ್ಯದಲ್ಲಿ ಎರಡನೇ ಹಂತದ ಮತದಾನ ಮುಕ್ತಾಗೊಂಡ ಸಂದರ್ಭದಲ್ಲಿಯೇ ರಾಜೀನಾಮೆಗೆ ರಮೇಶ್ ಸಿದ್ಧರಾಗಿದ್ದರಾದರೂ ಅವರ ಬೆಂಬಲಿಗರು ಅವರಿಗೆ ಕೈಕೊಟ್ಟಿದ್ದರು.

ಫಲಿತಾಂಶ ಪ್ರಕಟಗೊಳ್ಳುವ ತನಕ ಆತುರ ತೋರದಂತೆ ಅವರು ರಮೇಶ್ ಅವರನ್ನು ಎಚ್ಚರಿಸಿದ್ದ ಕಾರಣ ರಾಜೀನಾಮೆ ನಿರ್ಧಾರ ಮುಂದೂಡಲಾಗಿತ್ತು.

ಹೊಸ ಸರಕಾರ ರಚನೆಗೆ ಬೇಕಾಗುವಷ್ಟು ಶಾಸಕರನ್ನು ಸೆಳೆದು ತರಲು ತಮ್ಮಿಂದ ಸಾಧ್ಯವಿಲ್ಲ ಎಂದು ಬಿಜೆಪಿ ನಾಐಕರಿಗೆ ಸ್ಪಷ್ಟಪಡಿಸಿರುವ ಗೋಕಾಕದ ಸಾಹುಕಾರರು ತಮ್ಮೊಂದಿಗೆ ಐದಾರು ಶಾಸಕರು ಬರಬಹುದು. ಉಳಿದವರನ್ನು ನೀವೇ ಮೇನೇಜ್ ಮಾಡಬೇಕು ಎಂದು ಹೇಳಿದ್ದಾರಂತೆ.

ತಮ್ಮೊಂದಿಗೆ ಗುರುತಿಸಿಕೊಂಡಿರುವ ಶಾಸಕರು ರಾಜೀನಾಮೆ ಕುರಿತು ಫಲಿತಾಂಶದ ನಂತರ ತಮ್ಮ ನಿಲುವು ಬದಲಿಸಿಕೊಳ್ಳಲಿದ್ದಾರೆ. ನಾವೆಲ್ಲರೂ ಒಟ್ಟಿಗೆ ರಾಜೀನಾಮೆ ನೀಡುತ್ತೇವೆ ಎಂದು ರಮೇಶ್ ಜಾರಕಿಹೊಳಿ ಬಿಜೆಪಿ ನಾಯಕರಿಗೆ ಭರವಸೆ ನೀಡಿದ್ದಾರೆ ಎನ್ನಲಾಗಿದೆ.

ಇದೇ ವೇಳೇ ರಮೇಶ್ ನಿಷ್ಠ ಶಾಸಕ ಮಹೇಶ್ ಕುಮುಟಳ್ಳಿ ಬುಧವಾರ ರಮೇಶ್ ಅವರನ್ನೂ ಭೇಟಿ ಮಾಡಿ ಸುದೀರ್ಘ ಮಾತುಕತೆ ನಡೆಸಿರುವುದು ನಾನಾ ಊಹಾಪೋಹಗಳಿಗೆ ಗಾಳಿ ಹಾಕಿದೆ.

Leave a Reply

Your email address will not be published.

Social Media Auto Publish Powered By : XYZScripts.com