ಭರದಿಂದ ಸಾಗಿದ ‘ಕೆಜಿಎಫ್‍ 2’ ಚಿತ್ರೀಕರಣ : ಸಿನಿಮಾದ ಬಜೆಟ್ ಕೇಳಿದ್ರೆ ಶಾಕ್ ಆಗ್ತೀರಾ..!

ಕಳೆದ ಡಿಸೆಂಬರ್ ನಲ್ಲಿ ರಿಲೀಸ್ ಆದ ಕೆಜಿಎಫ್‍ ಚಿತ್ರದ ಮೊದಲ ಭಾಗ ಬಾಕ್ಸ್ ಆಫೀಸ್‍ ನಲ್ಲಿ ಕೊಳ್ಳೆ ಹೊಡೆದಿದೆ. ಸ್ಯಾಂಡಲ್‍ ವುಡ್ ಇತಿಹಾಸದಲ್ಲೇ ಅತ್ಯಧಿಕ ಕಲೆಕ್ಷನ್ ಮಾಡಿದ ಸಿನಿಮಾ ಎಂಬ ಹೆಗ್ಗಳಿಕೆಗೂ ಕೆಜಿಎಫ್ ಪಾತ್ರವಾಗಿದೆ. 80 ಕೋಟಿ ಬಜೆಟ್ ಸಿನಿಮಾ 250 ಕೋಟಿ ಕಲೆಕ್ಷನ್ ಮಾಡಿದೆ.

ಇದೀಗ ಕೆಜಿಎಫ್‍ ನ ಎರಡನೇ ಭಾಗದ ಚಿತ್ರೀಕರಣ ಭರದಿಂದ ಸಾಗಿದೆ. 2 ನೇ ಚಾಪ್ಟರ್ ಮೇಲೆ ಜನರ ನಿರೀಕ್ಷೆಗಳು ಹೆಚ್ಚಾಗಿದ್ದು, ಬಜೆಟ್ ಗಾತ್ರವೂ ಜಾಸ್ತಿಯಾಗಿದೆ ಎಂದು ಮೂಲಗಳು ತಿಳಿಸಿವೆ.

ಈಗಾಗಲೇ ಕೆಜಿಎಫ್‍ 2 ಸಿನಿಮಾದ ಬಜೆಟ್ 100 ಕೋಟಿ ದಾಟಿದೆಯಂತೆ. ನಿರ್ಮಾಪಕರು ಕೂಡಾ ಹಣ ಖರ್ಚು ಮಾಡಲು ಹಿಂದೇಟು ಹಾಕ್ತಿಲ್ಲವಂತೆ. ಸೆಪ್ಟಂಬರ್ ವೇಳೆಗೆ ಈ ಚಿತ್ರದ ಶೇ.90 ರಷ್ಟು ಶೂಟಿಂಗ್ ಮುಗಿಯಲಿದೆ. ಸದ್ಯಕ್ಕೆ ಬೆಂಗಳೂರಿನಲ್ಲಿ ಶೂಟಿಂಗ್ ಮುಗಿಯುತ್ತಿದ್ದು, ಬಳಿಕ ಮೈಸೂರು, ರಾಮೋಜಿ ರಾವ್ ಫಿಲ್ಮ್ ಸಿಟಿಯಲ್ಲಿ ಚಿತ್ರದ ಶೂಟಿಂಗ್ ನಡೆಯಲಿದೆಯಂತೆ. ಕೆಜಿಎಫ್‍ ಚಾಪ್ಟರ್ 2 ನಲ್ಲಿ ರಾಖಿ ಭಾಯ್ ನೋಡಲು ಪ್ರೇಕ್ಷಕರು ಉತ್ಸುಕರಾಗಿದ್ದು, ಚಿತ್ರ ಭಾರಿ ಕುತೂಹಲ ಕೆರಳಿಸಿದೆ.

 

Leave a Reply

Your email address will not be published.

Social Media Auto Publish Powered By : XYZScripts.com