Kar govt : Congress ದೋಸ್ತಿ ಕಡಿದರೆ BJP ಜೊತೆ ಹೊಸ ದೋಸ್ತಿಗೆ JDS ಪ್ಲಾನ್?

ಕಳೆದ ವರ್ಷ ವಿಧಾನಸಭಾ ಚುನಾವಣೆಯಲ್ಲಿ ಅತಂತ್ರ ಸ್ಥಿತಿನಿರ್ಮಾಣವಾದ ಲಾಭ ಪಡೆದು ಕಾಂಗ್ರೆಸ್ ಕೃಪೆಯಿಂದ ಸಮ್ಮಿಶ್ರ ಸರಕಾರದ ವೇತೃತ್ವ ವಹಿಸಿಕೊಂಡ ಜೆಡಿಎಸ್‌ ಈಗ ಪರ್‍ಯಾಯ ದೋಸ್ತಿ ಮಾಡಿಕೊಳ್ಳುವ ಹವಣಿಕೆಯಲ್ಲಿದೆಯೇ?

ಕಾಂಗ್ರೆಸ್ ಹಾಗೂ ದಳದ ವರಿಷ್ಠ ನಾಯಕರ ನಡುವಿನ ಬಹಿರಂಗ ವಾಕ್ಸಮರ ಕಾಂಗ್ರೆಸ್ ಮತ್ತು ಜೆಡಿಎಸ್‌ನ ನಡುವಿನ ಮೈತ್ರಿಯ ಬುಡವನ್ನೇ ಅಲುಗಾಡಿಸಿದ್ದು ಅದು ಸರಕಾರಕ್ಕೂ ಎರವಾಗುವ ಎಲ್ಲ ಸಾಧ್ಯತೆಗಳನ್ನು ತೆರೆದಿಟ್ಟಿರುವ ಸಂದರ್ಭದಲ್ಲಿಯೇ ಇಂತಹ ಪ್ರಶ್ನೆ ರಾಜಕೀಯ ವಲಯದಲ್ಲಿ ಚರ್ಚಿತವಾಗುತ್ತಿದೆ.

ಸಿದ್ದು ಮತ್ತೆ ಸಿಎಂ ಎಂಬ ಕೆಲ ಕಾಂಗ್ರೆಸ್ ನಾಐಕರ ಕೂಗಿನ ಹಿಂದೆ ದೊಡ್ಡ ಮಸಲತ್ತೇ ಇದೆ. ಅದು ಸರಕಾರವನ್ನು ಆಹುತಿ ತೆಗೆದುಕೊಳ್ಳುವ ಮಟ್ಟಕ್ಕೆ ಹೋಗಬಹುದು ಎಂಬುದು ಜೆಡಿಎಸ್ ನಾಯಕರ ಲೆಕ್ಕಾಚಾರವಾಗಿದೆ.

ಈ ಹಿನ್ನೆಲೆಯಲ್ಲಿ ರಾಜ್ಯ ಜೆಡಿಎಸ್ ನಾಯಕರು ಮುಂದೆ ಎದುರಾಗಬಹುದಾದ ಪರಿಸ್ಥಿತಿ ನಿಭಾಯಿಸಲು ಇಡಬೇಕಾದ ನಡೆಯ ಬಗ್ಗೆ ಗಹನ ಚರ್ಚೆ ನಡೆಸಿದ್ದಾರೆ. ತಾವಾಗಿ ಕಾಂಗ್ರೆಸ್ ಸಂಗ ತೊರೆಯುವ ಬದಲು ಮೈತ್ರಿ ಮುರಿದ ಶ್ರೇಯಸ್ಸು ಕಾಂಗ್ರೆಸಿನ ತಲೆಗೆ ಕಟ್ಟಲು ಜೆಡಿಎಸ್ ನಾಯಕರು ನಿರ್ಧರಿಸಿದ್ದಾರೆ.

ಹಾಗೊಂದು ವೇಳೆ ಕಾಂಗ್ರೆಸ್ ಪಕ್ಷವು ಮೈತ್ರಿಯಿಂದ ಹೊರನಡೆದಿದ್ದೇ ಆದಲ್ಲಿ ಪರ್‍ಯಾಯ ರಾಜಕೀಯ ದಾಳ ಉದುರಿಸಲು ಸಹ ಚಿಂತನೆ ನಡೆದಿದೆ. ಆ ಚಿಂತನೆಯ ಒಂದು ಅಂಶ ಬಿಜೆಪಿ ಜೊತೆ ಕೈಜೋಡಿಸಿ ಹೊಸದಾಗಿ ಸರಕಾರ ರಚಿಸುವುದಾಗಿದೆ.

ಕಾಂಗ್ರೆಸ್ ಬದಲು ಬಿಜೆಪಿ ಜೊತೆ ಕೈಜೋಡಿಬೇಕಾದ ಪರಿಸ್ಥಿತಿ ಎದುರಾದಲ್ಲಿ ಅದಕ್ಕೆ ಎರಡು ಪ್ರಮುಖ ಷರತ್ತುಗಳನ್ನು ಜೆಡಿಎಸ್ ವಿಧಿಸಲಿದೆಯಂತೆ. ಒಂದು ಯಡಿಯೂರಪ್ಪ ಸಿಎಂ ಆಗಬಾರದು ಮತ್ತೊಂದು ಕೇಂದ್ರದಲ್ಲಿ ಬಿಜೆಪಿ ಸರಕಾರ ಬಂದಲ್ಲಿ ಎಚ್ಡಿಕೆಗೆ ದಿಲ್ಲಿಯಲ್ಲಿ ಸಚಿವ ಸ್ಥಾನ ನೀಡಬೇಕು ಎಂಬುದಾಗಿದೆ.

ಯಡಿಯೂರಪ್ಪ ಹೊರತಾಗಿ ಬೇರೊಬ್ಬರನ್ನು ಮುಖ್ಯಮಂತ್ರಿ ಮಾಡುವುದಾದರೆ ಬಿಜೆಪಿ ಜೊತೆ ಹೆಜ್ಜೆ ಹಾಕಲು ಜೆಡಿಎಸ್‌ ಒಪ್ಪಬಹುದು ಎಂದು ಪತ್ರಿಕೆಯೊಂದು ವರದಿ ಮಾಡಿದೆ. ಆದರೆ ಇದೆಲ್ಲ ಸಾಧ್ಯವೇ ಎಂಬುದನ್ನು ತಿಳಿಯಲು ಮೇ 23ರವರೆಗೆ ಕಾಯಬೇಕಿದೆ.

Leave a Reply

Your email address will not be published.

Social Media Auto Publish Powered By : XYZScripts.com