ಹೀಗೂ ಉಂಟೇ : ನಗದೇ ಇದ್ದರೆ ಫೈನ್ – ಒಳ ಉಡುಪಿನಿಂದ ಕಾರ್ ವಾಶ್ ಮಾಡಿದ್ರೂ ಫೈನ್

ವಿಶ್ವದಲ್ಲಿ ಚಿತ್ರವಿಚಿತ್ರ ಕಾನೂನುಗಳು ಜಾರಿಯಲ್ಲಿವೆ. ಕೆಲ ಕಾನೂನುಗಳು ಆಶ್ಚರ್ಯ ಹುಟ್ಟಿಸುತ್ತವೆ. ಮತ್ತೆ ಕೆಲವು ಹೀಗೂ ಉಂಟೇ ಎಂಬ ಪ್ರಶ್ನೆ ಹುಟ್ಟುಹಾಕುತ್ತವೆ ವಿಶ್ವದಲ್ಲಿ ಜಾರಿಯಲ್ಲಿರುವ ಕೆಲ ಕಾನೂನುಗಳ ಬಗ್ಗೆ ವಿವರ ಇಲ್ಲಿದೆ.

ಇಂಗ್ಲೆಂಡ್ ನ ಮಸಾಚುಸೆಟ್ಸ್ ಸಮೀಪವಿರುವ ಒಂದು ಪ್ರದೇಶದಲ್ಲಿ ರಾತ್ರಿ ಸ್ನಾನ ಮಾಡದೆ ಹಾಸಿಗೆಗೆ ಹೋಗುವಂತಿಲ್ಲ. ಕಾನೂನು ಉಲ್ಲಂಘಿಸಿ ಸಿಕ್ಕಿಬಿದ್ರೆ ದಂಡ ಹಾಗೂ ಶಿಕ್ಷೆ ಅನುಭವಿಸಬೇಕಾಗುತ್ತದೆ.

ಸಾಮಾನ್ಯವಾಗಿ ಮನೆ, ವಾಹನ ಸ್ವಚ್ಛಗೊಳಿಸಲು ಜನರು ಹಳೆಯ ಹಾಗೂ ಹರಿದ ಬಟ್ಟೆ, ಒಳ ಉಡುಪುಗಳನ್ನು ಬಳಸ್ತಾರೆ. ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ವಾಹನ ಸ್ವಚ್ಛಗೊಳಿಸಲು ಒಳ ಉಡುಪು ಬಳಸುವಂತಿಲ್ಲ. ಸಿಕ್ಕಿಬಿದ್ದವರು ದಂಡ ನೀಡಬೇಕು.

ಇಟಲಿಯ ಮಿಲಾನ್ ನಲ್ಲಿ ನಗದೆ ಇದ್ರೆ ದಂಡ ವಿಧಿಸುವ ಕಾನೂನಿದೆ. ಇಲ್ಲಿನ ಜನರು ಯಾವಾಗ್ಲೂ ನಗುತ್ತಿರಬೇಕು. ಕೆಲ ಸಂದರ್ಭಗಳಲ್ಲಿ ಜನರಿಗೆ ರಿಯಾಯಿತಿಯಿದೆ. ಆಸ್ಪತ್ರೆಗೆ ಹೋಗುವ ವೇಳೆ, ಅಂತ್ಯಸಂಸ್ಕಾರಕ್ಕೆ ಹೋಗುವ ವೇಳೆ ಜನರು ನಗಬೇಕಾಗಿಲ್ಲ.

 

Leave a Reply

Your email address will not be published.

Social Media Auto Publish Powered By : XYZScripts.com