ಶಾಕಿಂಗ್ ನ್ಯೂಸ್ : ಮಧುಮಗಳಿಲ್ಲದ ಮದುವೆ ನೀವು ನೋಡಿದ್ದೀರಾ..? ನೋಡಿಲ್ಲಂದ್ರೆ ಇಲ್ನೋಡಿ…

ಗುಜರಾತಿನ ಗಾಂಧಿನಗರದಲ್ಲಿ ವಧುವಿಲ್ಲದೆ ಮದುವೆ ಮಾಡಿಸಿರುವ ಘಟನೆ ನಡೆದಿದೆ. ತನ್ನ 27 ವರ್ಷದ ಮಗನಿಗೆ ಅದ್ಧೂರಿಯಾಗಿ ಮದುವೆ ಮಾಡಿದ ತಂದೆ ಮಗನ ಕನಸು ನನಸು ಮಾಡಿದ್ದಾರೆ.

ವಧುವಿಲ್ಲದೇ ಮದುವೆಯಾದವರು ಅಜಯ್ ಬಾರೋಟ್.  ಈತ ಪುಟ್ಟ ಮಗುವಿರುವಾಗಲೇ ಆತನ ಹೆತ್ತವರು ಮಗ ದೊಡ್ಡವನಾದ ಬಳಿಕ ಆತನಿಗೆ ಅದ್ಧೂರಿಯಾಗಿ ಮದುವೆ ಮಾಡಬೇಕು ಎಂಬ ಕನಸು ಕಂಡಿದ್ದರು. ಆದರೆ ಅಜಯ್ ಬೆಳವಣಿಗೆಯಲ್ಲಿ ಕುಂಠಿತವಾದ ಕಾರಣ ಆತನಿಗೆ ಸಂಗಾತಿ ಹುಡುಕಲು ಮನೆಯವರಿಗೆ ಕಷ್ಟವಾಯಿತು. ಯಾಕಂದರೆ ಅಜಯ್ ಬೆಳೆಯುತ್ತಾ ಅಂಗವೈಕಲ್ಯದಿಂದ ಬಳಲತೊಡಗಿದ. ಹೀಗಾಗಿ ಆತನಿಗೆ ವಧು ಇಲ್ಲದೆ ಮದುವೆ ಮಾಡಲು ಕುಟುಂಬ ತೀರ್ಮಾನ ಮಾಡಿತ್ತು. ಹಾಗೆಯೇ ಗುಜರಾತ್ ಸಂಪ್ರದಾಯದಂತೆ ಇದೀಗ ಅಜಯ್ ಗೆ ಅದ್ಧೂರಿಯಾಗಿ ಮದುವೆ ಮಾಡಿಸಿದ್ದಾರೆ.

ಅಜಯ್ ಮದುವೆಯ ಹಿಂದಿನ ದಿನ ಮೆಹಂದಿ ಹಾಗೂ ಸಂಗೀತ ಕಾರ್ಯಕ್ರಮವೂ ಇತ್ತು. ಈ ಕಾರ್ಯಕ್ರಮದಲ್ಲಿ ಅಜಯ್ ನೆಚ್ಚಿನ ಗೆಳೆಯರು ಹಾಗೂ ಸಂಬಂಧಿಕರು ಮಾತ್ರ ಭಾಗಿಯಾಗಿದ್ದರು. ಮದುವೆಯಂದು ಚಿನ್ನದ ಬಣ್ಣದ ಶೆರ್ವಾನಿ, ಗುಲಾಬಿ ಬಣ್ಣದ ರುಮಾಲು, ಹೂಮಾಲೆಯನ್ನು ಅಜಯ್ ಧರಿಸಿದ್ದನು. ಬಳಿಕ ಮದುಮಗ ಕುದುರೆಯ ಮೇಲೆ ಕುಳಿತು ಮಂಟಪಕ್ಕೆ ತೆರಳಿದನು. ಈ ಮೆರವಣಿಗೆಯಲ್ಲಿ ಸುಮಾರು 200 ಮಂದಿ ಭಾಗವಹಿಸಿದ್ದು, ಗುಜರಾತಿ ಮ್ಯೂಸಿಕ್ ಹಾಗೂ ಬ್ಯಾಂಡ್ ಸೆಟ್ ಗೆ ತಕ್ಕಂತೆ ಕುಣಿಯುವ ಮೂಲಕ ವರನನ್ನು ಮಂಟಪಕ್ಕೆ ಕರೆತರಲಾಯಿತು. ಕಮ್ಯೂನಿಟಿ ಹಾಲ್ ನಲ್ಲಿ ನಡೆದ ಈ ಶುಭಸಮಾರಂಭದಲ್ಲಿ ಸುಮಾರು 800 ಮಂದಿ ಭಾಗವಹಿಸಿದ್ದರು.

Leave a Reply

Your email address will not be published.

Social Media Auto Publish Powered By : XYZScripts.com