IPL Hungama : ನಾಲ್ಕನೇ ಬಾರಿ ಐಪಿಎಲ್ ಗೆದ್ದು ಇತಿಹಾಸ ಬರೆದ ಮುಂಬೈ ಇಂಡಿಯನ್ಸ್..

ಭಾರತದ ಏಕದಿನ ತಂಡದ ಉಪನಾಯಕ ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡುವ ರೋಚಕ ಪಂದ್ಯದಲ್ಲಿ ಧೋನಿ ನೇತೃತ್ವದ ಚೆನ್ನೈ ತಂಡವನ್ನು ರೋಮಾಂಚಕ ರೀತಿಯಲ್ಲಿ ಪರಾಭವಗೊಳಿಸಿ ನಾಲಕ್ನೇ ಬಾರಿಗೆ ಐಪಿಎಲ್ ಪಂದ್ವಾವಳಿ ಗೆದ್ದು ಹೊಸ ಇತಿಹಾಸ ನಿರ್ಮಿಸಿದೆ.

ಭಾನುವಾರ ಹೈದರಾಬಾದಿನಲ್ಲಿ ನಡೆದ ನಡೆದ ಪ್ರಶಸ್ತಿ ಕಾಳಗದಲ್ಲಿ ಮುಂಬೈ ತಂಡವು ಕಡೆಯ ಓವರಿನಲ್ಲಿನ ಒತ್ತಡವನ್ನು ಸಮರ್ಥವಾಗಿ ನಿಬಾಯಿಸುವ ಮೂಲಕ ಕೇವಲ ಒಂದು ರನ್ನಿನ ರೋಚಕ ಜಯದೊಂದಿಗೆ ಪ್ರಶಸ್ತಿ ತನ್ನದಾಗಿಸಿಕೊಂಡು ಇತಿಹಾಸದ ಪುಸ್ತಕದಲ್ಲಿ ಹೆಸರು ದಾಖಲಿಸಿಕೊಂಡಿದೆ.

ಗೆಲುವಿಗೆ 150 ರನ್‌ಗಳ ಸವಾಲನ್ನು ಪಡೆದ ಚೆನ್ನೈ ಸೂಪರ್ ಕಿಂಗ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟದಲ್ಲಿ 148 ರನ್ ಗಳಿಸಿ ಸೋಲೊಪ್ಪಿಕೊಂಡಿತು.

ಈ ಫಲಿತಾಂಶ ಹೊರಬಿದ್ದ 20ನೇ ಓವರ್‍ ಸಾಕಷ್ಟು ನಾಟಕೀಯ ತಿರುವು ಪಡೆದುಕೊಂಡಿತು. ಅಂತಿಮ ಓವರಿನಲ್
ಆವರೆಗೆ ಅದ್ಭುತ ಬ್ಯಾಟಿಂಗ್ ಮಾಡಿದ್ದ ಚೆನ್ನೈನ ಆರಂಭಿಕ ಶೇನ್ ವಾಟ್ಸನ್ ರನೌಟ್ ಆದದ್ದು ಮತ್ತು ಶಾರ್ದುಲ್ ಠಾಕೂರ್ ವೇಗಿ ಮಾಲಿಂಗ ಅವರ ರ ಕೊನೆಯ ಎಸೆತದಲ್ಲಿ ಎಲ್‌ಬಿಡಬ್ಲು ಬಲೆಗೆ ಬೀಳುವ ಮೂಲಕ ಚೆನ್ನೈ ಕೈಯಲ್ಲಿದ್ದ ಪಂದ್ಯ ಮುಂಬೈ ಮಡಿಲಿಗೆ ಜಾರಿತು.

ಕೊನೆಯ ಓವರಿನಲ್ಲಿ ಔಟಾಗುವ ಮುನ್ನ ಆರಂಭಿಕ ಶೇನ್ ವಾಟ್ಸನ್ 59 ಎಸೆತಗಳಲ್ಲಿ 8 ಬೌಂಡರಿ ಮತ್ತು 4 ಸಿಕ್ಸರ್ ಒಳಗೊಂಡ 80 ರನ್ ಗಳಿಸಿ ಹೋರಾಟ ನಡೆಸಿದರೂ, ಅದು ಫಲ ನೀಡಲಿಲ್ಲ.

ಇದಕ್ಕೆ ಮುನ್ನ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಮುಂಬೈ ಇಂಡಿಯನ್ಸ್ ತಂಡವು ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟದಲ್ಲಿ 149 ರನ್ ಗಳಿಸಿತು.

ಕೀರನ್ ಪೊಲಾರ್ಡ್‌ ಅವರ ಸ್ಫೋಟಕ 41 ರನ್ ಹಾಗೂ ಆರಮಬ ಅರಂಭ ಆಟಗಾರ ಡಿಕಾಕ್ ಅವರ 29 ರನ್‌ಗಳ ಹೊರತಾಗಿಯೂ ಮುಂಬೈ ಹೆಚ್ಚಿನ ಮೊತ್ತ ಗಳಿಸಲು ವಿಫಲವಾಯಿತು.

ಎರಡೂ ತಂಡಗಳು ತಲಾ ಮೂರು ಬಾರಿ ಚಾಂಪಿಯನ್ ಪಟ್ಟಕ್ಕೇರಿದ್ದವು. ಈಗ ಮುಂಬೈ ತಂಡ ನಾಲ್ಕನೇ ಬಾರಿ ಚಾಂಪಿಯನ್ ಆಗಿ ಹೊರಹೊಮ್ಮುವ ಮೂಲಕ ಹೊಸ ಇತಿಹಾಸ ನಿರ್ಮಿಸಿದೆ.

Leave a Reply

Your email address will not be published.

Social Media Auto Publish Powered By : XYZScripts.com