‘ಭಾರತದ ಮುಖ್ಯ ವಿಭಜಕ’ ಟೈಮ್ ಮ್ಯಾಗಜಿನ್ ಲೇಖನ ಸ್ವಾಗತಿಸಿದ ದಿನೇಶ್ ಗಂಡೂರಾವ್..

ಭಾರತದ ಪ್ರಧಾನಿ ನರೇಂದ್ರ ಮೋದಿ ಕುರಿತ ಅಮೆರಿಕದ ಟೈಮ್ ಮ್ಯಾಗಜಿನ್ ಲೇಖನವನ್ನು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸ್ವಾಗತಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಭಾರತದ ಮುಖ್ಯ ವಿಭಜಕ ಎಂಬ ಅಡಿಬರಹದಲ್ಲಿ ಟೈಮ್ ಮ್ಯಾಗಜಿನ್ ತನ್ನ ಮುಖಪುಟವನ್ನು ಮುದ್ರಿಸಿದೆ. ಮೋದಿ ಆಡಳಿತದ ಐದು ವರ್ಷದಲ್ಲಿ ಭಾರತದ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದು ಲೇಖನ ಬರೆಯಲಾಗಿತ್ತು.

ಟೈಮ್ ಮ್ಯಾಗಜಿನ್ ಲೇಖನವನ್ನು ಸ್ವಾಗತಿಸಿರುವ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಟೈಮ್ ಮ್ಯಾಗಜಿನ್ ಲೇಖನ ಅತ್ಯಂತ ಸರಿಯಾಗಿದೆ ಎಂದು ಟ್ವಿಟ್ ಮಾಡಿದ್ದಾರೆ.

ಪ್ರಧಾನಿ ಮೋದಿ ಕಳೆದ ಐದು ವರ್ಷಗಳಿಂದ ಕೇವಲ ಸುಳ್ಳನ್ನೇ ಹೇಳಿಕೊಂಡು ಬರುತ್ತಿದ್ದು, ಜನತೆಗೆ ನೀಡಿದ ಒಂದೂ ಭರವಸೆಯನ್ನು ಈಡೇರಿಸಿಲ್ಲ ಎಂದು ಗುಂಡೂರಾವ್ ಟ್ವಿಟ್ ಮಾಡಿದ್ದಾರೆ. ಅಲ್ಲದೇ ಟೈಮ್ ಮ್ಯಾಗಜಿನ್ ಲೇಖನವನ್ನು ಬೆಂಬಲಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com