ತುಪ್ಪ ತಿಂದ್ರೆ ದಪ್ಪಗಾಗ್ತಾರಾ..? ತುಪ್ಪದ ಬಗ್ಗೆ ನೀವು ಅರಿಯದ ಕೆಲ ವಿಚಾರಗಳು ಇಲ್ಲಿವೆ..

ಶುದ್ಧ ತುಪ್ಪ ಜೀರ್ಣ ಕ್ರೀಯೆಯನ್ನು ವೃದ್ಧಿಸುತ್ತದೆ, ಉರಿಯೂತ, ತ್ವಚೆ ರೂಪ, ಕೂದಲ ತೊಂದರೆಗೆ ರಾಮಬಾಣದಂತೆ ಕೆಲಸ ಮಾಡುತ್ತದೆ ತುಪ್ಪ. ಹಲವಾರು ಪೌಷ್ಠಿಕಾಂಶಗಳನ್ನು ತುಪ್ಪ ಹೊಂದಿದೆ. ತುಪ್ಪದ ಪ್ರಯೋಜನಗಳನ್ನು ತಿಳಿಯಲು ಕೆಲ ಅಂಶಗಳು ನಿಮಗೆ ಸಹಾಯವಾಗಬಹುದು.

1.ಜೀರ್ಣಕ್ರಿಯೆ – ರಾತ್ರಿ ಹಾಲಿನಲ್ಲಿ ಒಂದು ಚಮಚ ತುಪ್ಪ ಹಾಕಿ ಕುಡಿದರೆ ಜೀರ್ಣಕ್ರಿಯೆ ಹೆಚ್ಚಾಗುತ್ತದೆ

2.ಶೀತ ನಿವಾರಣೆಗೆ – ಕಟ್ಟಿಕೊಂಡ ಮೂಗನ್ನು ತೆರೆಯಲು ತುಪ್ಪ ಮನೆ ಮದ್ದು. ಸ್ವಲ್ಪ ಬಿಸಿ ಮಾಡಿದ ತುಪ್ಪ ಮೂಗು ಒಳಭಾಗಕ್ಕೆ ಹಾಕಿಕೊಂಡರೆ ಮೂಗು ಕಟ್ಟುವುದನ್ನ ತಡೆಗಟ್ಟಿ ಮುಂದಾಗುವ ಸಮಸ್ಯೆಯನ್ನು ನಿವಾರಿಸುತ್ತದೆ.

3.ಹೊಟ್ಟೆಯ ಕೊಬ್ಬನ್ನು ಕರೆಗಿಸಲು ಮನೆ ಮದ್ದು – ಸೊಂಟದ ಸುತ್ತಳತೆಯ ಕಡಿಮೆ ಹಾಗೂ ತೂಕ ಇಳಿಕೆಗೆ ಸಹಕಾರಿಯಾಗುತ್ತದೆ. ಪ್ರತಿನಿತ್ಯದ ಆಹಾರದಲ್ಲಿ ಒಂದು ಚಮಚ ತುಪ್ಪ ಬಳಕೆ ಮಾಡಿ.

4.ಮಧುಮೇಹ ನಿಯಂತ್ರಿಸಲು ತುಪ್ಪ ತುಂಬಾನೇ ಒಳ್ಳೆಯದು.

ಸೌಂದರ್ಯವನ್ನು ಹೆಚ್ಚಿಸುತ್ತದೆ :-

1.ತುಪ್ಪ ಔಷಧಿಯ ಗುಣಗಳನ್ನು ಹೊಂದಿದೆ. ಹೀಗಾಗಿ ಸೌಂದರ್ಯ ವೃದ್ಧಿಗೂ ಇದನ್ನ ಬಳಕೆ ಮಾಡಲಾಗುತ್ತದೆ.

2.ತ್ವಚೆಯ ಆರೋಗ್ಯವನ್ನು ವೃದ್ಧಿಸಲು ಸುಲಭ ಮನೆಮದ್ದು ತುಪ್ಪ.

3.ಕೂದಲ ಆರೋಗ್ಯಕ್ಕೆ ಒಳ್ಳೆಯದು – ಕೊಬ್ಬರಿ ಎಣ್ಣೆಯೊಂದಿಗೆ ತುಪ್ಪ ಬೆರೆಸಿ ಹಚ್ಚಿಕೊಳ್ಳುವುದರಿಂದ ಕೂದಲು ದಟ್ಟವಾಗಿ ಬೆಳೆಯುತ್ತದೆ.

4.ಒಣಗಿ ಒಡೆದಿರುವ ತುಟಿಗಳಿಗೆ ತುಂಬಾ ಒಳ್ಳೆಯದು. ರಾತ್ರಿ ಮಲಗುವಾಗ ತುಟಿಗೆ ತುಪ್ಪ ಸವರಿಕೊಂಡು ಮಲಗುವುದರಿಂದ ತುಟಿಗಳ ಆರೋಗ್ಯ ಕಾಪಾಡಿಕೊಳ್ಳಬಹುದು.

Leave a Reply

Your email address will not be published.

Social Media Auto Publish Powered By : XYZScripts.com