IPL hungama : ರೋಚಕ ಹಣಾಹಣಿಯಲ್ಲಿ ಹೈದರಾಬಾದ್ ಮಣಿಸಿದ ಡೆಲ್ಲಿ ಕ್ವಾಲಿಫಯರಗೆ..

ತವರಿನ ಮೇಲ್ಮೈ ಏನೇ ಇರಲಿ ಸರ್ವಾಂಗೀಣ ಆಟದ ಮುಂದೆ ಏನೂ ನಡೆಯದು ಎಂಬುದನ್ನು ಸಾಬೀತು ಮಾಇಡದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿಯ ಎಲಿಮಿನೇಟರ್‍ ಗೆದ್ದು ಫೈನಲ್ ತಲುಪುವ ಅವಕಾಶ ಉಳಿಸಿಕೊಂಡಿದೆ.

ವೈಎಸ್ಸಾರ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಗೆಲುವಿಗೆ 163 ರನ್‌ಗಳ ಸವಾಲನ್ನು ಸ್ವೀಕರಿಸಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಕೊನೆಯ ಹಂತದಲ್ಲಿ ಆತಂಕದ ಕ್ಷಣಗಳನ್ನು ಎದುರಿಸಿದರೂ ಇನ್ನೂ 1 ಎಸೆತ ಬಾಕಿ ಉಳಿಸಿ 8 ವಿಕೆಟ್ ನಷ್ಟದಲ್ಲಿ 165 ರನ್ ಗಳಿಸಿತು.

ಅಂತಿಮ ಓವರ್‍ ನಾಟಕೀಯವಾಗಿತ್ತು. ಅಮಿತ್ ಮಿಶ್ರಾ ರನ್ ಓಡುವ ವೇಳೆ ವಿಕೆಟ್‌ಗೆ ಅಡ್ಡ ಬಂದ ಕಾರಣ ರನೌಟ್ ಆದರು. ಹೀಗಾಗಿ ಡೆಲ್ಲಿ ಗೆಲುವಿಗೆ 2 ಎಸೆತದಲ್ಲಿ 2 ರನ್ ಬೇಕಿತ್ತು. ಕೀಮೋ ಪೌಲ್ ಬೌಂಡರಿ ಸಿಡಿಸೋ ಮೂಲಕ ಡೆಲ್ಲಿ ತಂಡಕ್ಕೆ 2 ವಿಕೆಟ್ ರೋಚಕ ಗೆಲುವು ತಂದುಕೊಟ್ಟರು.

ಕೂದಲೆಳೆಯ ಅಂತರದಲ್ಲಿ ಜಯ ಗಳಿಸಿದ ಡೆಲ್ಲಿ ತಂಡವು ಶುಕ್ರವಾರ ನಡೆಯುವ ಎರಡನೇ ಕ್ವಾಲಿಫಯರಿನಲ್ಲಿ ಧೋನಿ ನಾಯಕತ್ವದ ಚೆನ್ನೈ ಸೂಪರ್‍ ಕಿಂಗ್ಸ್ ವಿರುದ್ಧ ಸೆಣಸಬೇಕಿದ್ದು, ಆ ಪಂದ್ಯ ಗೆದ್ದಲ್ಲಿ ಮಾತ್ರ ಅದು ಐಪಿಎಲ್ ಫೈನಲ್ ತಲುಪಲಿದೆ.

ಇದಕ್ಕೆ ಮೊದಲು ಟಾಸ್ ಸೋತು ಮೊದಲಿಗೆ ಬ್ಯಾಟ್‌ ಮಾಡಿದ ಸನ್‌ರೈಸರ್ಸ್ ಹೈದರಾಬಾದ್ ನಿಗದಿತ 20 ಓವರುಗಳಲ್ಲಿ 8 ವಿಕೆಟ್ ನಷ್ಟಕ್ಕೆ 162 ರನ್ ಸಿಡಿಸಿತು. ಮಾರ್ಟಿನ್ ಗಪ್ಟಿಲ್ 19 ಎಸೆತದಲ್ಲಿ 4 ಸಿಕ್ಸರ್ ನೆರವಿನಿಂದ 36 ರನ್ ಸಿಡಿಸಿದರೇ, ಮನೀಶ್ ಪಾಂಡೆ 36 ಎಸೆತದಲ್ಲಿ 30 ರನ್ ಸಿಡಿಸಿ ಔಟಾದರು.

Leave a Reply

Your email address will not be published.

Social Media Auto Publish Powered By : XYZScripts.com