ದಂಪತಿ ಮನೆಗೆ ಬಂದ ಪಾರ್ಸಲ್ ನಲ್ಲಿದ್ದದ್ದು ಬಿಳಿ ಬಣ್ಣದ ಪುಡಿ ಆಗಿರಲಿಲ್ಲ..

ಕಾನೂನು ಕಣ್ಣಿನಿಂದ ತಪ್ಪಿಸಿಕೊಂಡು ಮಾದಕ ವಸ್ತುಗಳನ್ನು ತಮ್ಮ ಗುರಿಗೆ ತಲುಪಿಸಲು ಕಳ್ಳಸಾಗಾಣಿಕೆದಾರರು ಅನುಸರಿಸುವ ಮಾರ್ಗಗಳು ಅತ್ಯಂತ ನಿಖರ ಮತ್ತು ಸಂಕೀರ್ಣವಾದುದು.

ಪೊಲೀಸರ ಕಣ್ತಪ್ಪಿಸಿ ಮಾದಕ ವಸ್ತುಗಳನ್ನು ಸಾಗಿಸುತ್ತಿರುವ ಸಮಯದಲ್ಲಿ ಆದ ಒಂದು ಎಡವಟ್ಟಿನಿಂದಾಗಿ ಆಸ್ಟ್ರೇಲಿಯಾದ ದಂಪತಿಗೆ ಲಕ್ಷಾಂತರ ಡಾಲರ್ ಬೆಲೆಬಾಳುವ ಮಾದಕ ದ್ರವ್ಯ ಸಿಗುವುದರ ಜೊತೆಗೆ ಪ್ರಕರಣ ಭೇದಿಸುವಲ್ಲಿ ಪೊಲೀಸರಿಗೂ ಈ ದಂಪತಿ ನೆರವಾಗಿದ್ದಾರೆ.

ಒಂದು ದಿನ ತಮ್ಮ ಮನೆಗೆ ಬಂದ ಪಾರ್ಸೆಲನ್ನು ತೆರೆದು ನೋಡಿದಾಗ ಅದರಲ್ಲಿ ಬಿಳಿ ಬಣ್ಣದ ಪುಡಿ ಇದ್ದದ್ದನ್ನು ಗಮನಿಸಿದ ದಂಪತಿ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಅದರಲ್ಲಿದ್ದುದು ಕೇವಲ ಬಿಳಿಯ ಬಣ್ಣದ ಪುಡಿಯಲ್ಲ ಬದಲಿಗೆ ಸುಮಾರು ಏಳು ದಶಲಕ್ಷ ಆಸ್ಟ್ರೇಲಿಯನ್ ಡಾಲರ್ ಬೆಲೆ ಬಾಳುವ ಮಾದಕ ದ್ರವ್ಯ ಎಂಬುದು ಅರಿವಿಗೆ ಬಂದಿದೆ.

ಇದೇ ರೀತಿ ಮತ್ತೊಂದು ವಿಳಾಸಕ್ಕೂ ಸಾಗಿಸಲ್ಪಟ್ಟಿದ್ದ ಮಾದಕ ದ್ರವ್ಯವನ್ನು ದಂಪತಿ ಸಹಾಯದಿಂದ ಪೊಲೀಸರು ವಶಕ್ಕೆ ಪಡೆದು ವ್ಯಕ್ತಿಯೊಬ್ಬನನ್ನು ಪ್ರಕರಣದಲ್ಲಿ ಬಂಧಿಸಿದ್ದಾರೆ. ಭದ್ರತೆಯ ಕಾರಣಕ್ಕೆ ದಂಪತಿಯ ಗುರುತನ್ನು ಪೊಲೀಸರು ಬಿಟ್ಟುಕೊಟ್ಟಿಲ್ಲ.

 

Leave a Reply

Your email address will not be published.

Social Media Auto Publish Powered By : XYZScripts.com