ಆ.. ಶಿಕ್ಷಕ ವಿದ್ಯಾರ್ಥಿನಿಗೆ ‘ಲವ್ ಯೂ’ ಹೇಳಿದ ಸನ್ನಿವೇಶ ಯಾವುದು ನೋಡಿ..

ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಫೇಲಾದ ವಿದ್ಯಾರ್ಥಿನಿಗೆ ಸಮಾಧಾನ ಹೇಳುವ ನೆಪದಲ್ಲಿ ಪೋಲಿ ಶಿಕ್ಷಕನೊಬ್ಬ ಲವ್ ಯೂ ಎಂದು ಹೇಳಿದ್ದಾನೆ.

ಮೇಘನಾಥ್ ಲವ್ ಯೂ ಎಂದು ಹೇಳಿದ ಶಿಕ್ಷಕ. ಮೇಘನಾಥ್ ಮಂಡ್ಯದ ನೆಹರು ನಗರದಲ್ಲಿರುವ ಖಾಸಗಿ ಶಾಲೆಯಲ್ಲಿ ಶಿಕ್ಷಕನಾಗಿ ಕಾರ್ಯ ನಿರ್ವಹಿಸುತ್ತಿದ್ದಾನೆ.

ವಿದ್ಯಾರ್ಥಿನಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಎರಡು ವಿಷಯಗಳಲ್ಲಿ ಫೇಲ್ ಆಗಿದ್ದಳು. ವಿದ್ಯಾರ್ಥಿನಿ ಫೇಲ್ ಆಗಿರುವುದನ್ನು ತಿಳಿದ ಶಿಕ್ಷಕ ಮೇಘನಾಥ್ ಒಂದು ವಿಷಯದಲ್ಲಿ ಫೇಲ್ ಆಗಿದೆ ಎಂದು ಹೇಳು ಎಂದು ವಿದ್ಯಾರ್ಥಿನಿಗೆ ಹೇಳಿದ್ದಾರೆ. ಅಲ್ಲದೆ ನಾನು ನಿನಗೆ ನೋಟ್ಸ್ ಕೊಟ್ಟು ಎಕ್ಸಾಂ ಬರೆಸ್ತೀನಿ ಎಂದು ಹೇಳಿದ್ದಾನೆ.

ಅಷ್ಟೇ ಅಲ್ಲದೆ ಬೇಜಾರಾಗಬೇಡ ನಾಳೆ ಅಥವಾ ನಾಡಿದ್ದು ಫೋನ್ ಮಾಡ್ತೀನಿ. ಆಗ ನೀನು ಬರುವಂತೆ. ಈಗ ಲೌಡ್ ಸ್ಪೀಕರ್ ಆಫ್ ಮಾಡಿದ್ಯಾ?. “ಸಂಜೆ ಸಿಗು…. ಐ ಲವ್ ಯೂ ಕಣೋ” ಎಂದು ಶಿಕ್ಷಕ ಫೋನಿನಲ್ಲಿ ವಿದ್ಯಾರ್ಥಿನಿಗೆ ಹೇಳಿದ್ದಾನೆ.

ಈ ಬಗ್ಗೆ ವಿದ್ಯಾರ್ಥಿನಿಯ ಪೋಷಕರು ಶಿಕ್ಷಕ ಮೇಘನಾಥ್ ವಿರುದ್ಧ ದೂರು ಕೊಡಲು ನಿರ್ಧರಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com