ಆಟೋ ಚಾಲಕನ ಮನೆ ಮೇಲೆ ಐಟಿ ದಾಳಿ : ಆತನ ಬಳಿ ಇದ್ದ ಹಣ ಎಷ್ಟು ಗೊತ್ತಾ..?

ಬೆಂಗಳೂರಿನ ಆಟೋ ಚಾಲಕರೊಬ್ಬರ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿ ಅಪಾರ ಪ್ರಮಾಣದ ಆಸ್ತಿ ದಾಖಲಾತಿ ವಶಕ್ಕೆ ಪಡೆದುಕೊಂಡಿದ್ದಾರೆ.

ಏಪ್ರಿಲ್ 16 ರಂದು ದಾಳಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ವಶಪಡಿಸಿಕೊಂಡ ದಾಖಲೆ ಆಧಾರದಲ್ಲಿ ಸಂಪತ್ತಿನ ಮೂಲದ ಬಗ್ಗೆ ಮಾಹಿತಿ ನೀಡುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಅಲ್ಲದೇ, ವಿಚಾರಣೆಗೆ ಹಾಜರಾಗಲು ನೋಟಿಸ್ ಕೂಡ ನೀಡಲಾಗಿದೆ ಎನ್ನಲಾಗಿದೆ.

ವೈಟ್ ಫೀಲ್ಡ್ ಸಮೀಪವಿರುವ ಆಟೋ ಚಾಲಕ ಕೋಟಿ ಕೋಟಿ ಬೆಲೆಬಾಳುವ ವಿಲ್ಲಾ, ಮನೆ ಖರೀದಿ ಮಾಡಿದ್ದು, ತೆರಿಗೆ ವಂಚಿಸಿದ್ದರು. ಈತ ಆಟೋ ಚಾಲಕರಿಗೆ ಫೈನಾನ್ಸ್ ಮಾಡುತ್ತಿದ್ದ ಎನ್ನಲಾಗಿದೆ. ಮಾಹಿತಿ ಪಡೆದ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ಹೇಳಲಾಗಿದೆ.

 

Leave a Reply

Your email address will not be published.

Social Media Auto Publish Powered By : XYZScripts.com