ಮಗುವಿನ ಕೈಗೆ ಟಿವಿ ರಿಮೋಟ್ ಕೊಟ್ಟಿದ್ದ ತಂದೆ-ತಾಯಿಗೆ ಆಗಿದ್ದು ದೊಡ್ಡ ಶಾಕ್..!

ಗುಜರಾತಿನ ಧೋಡ್ವಹಾನ್ ಗ್ರಾಮದಲ್ಲಿ ಎಂಟು ವರ್ಷದ ಮಗುವಿನ ಕೈನಲ್ಲಿದ್ದ ಟಿವಿ ರಿಮೋಟ್ ಕಂಟ್ರೋಲ್ ಸ್ಫೋಟಗೊಂಡಿದೆ. ಘಟನೆಯಲ್ಲಿ ಎಂಟು ವರ್ಷದ ಮಗು ಗಾಯಗೊಂಡಿದೆ. ಆಸ್ಪತ್ರೆಯಲ್ಲಿ ಮಗುವಿಗೆ ಚಿಕಿತ್ಸೆ ನಡೆಯುತ್ತಿದೆ.

ಮಾಹಿತಿ ಪ್ರಕಾರ, ಎಂಟು ವರ್ಷದ ಸೂರಜ್ ಗಾಯಗೊಂಡ ಬಾಲಕ. ಡ್ಯಾಮ್ ನಲ್ಲಿ ಕಲ್ಲು ಒಡೆಯಲು ಬಳಸುವ ಡೈನಾಮೈಟ್ ತಂತಿಯನ್ನು ಮನೆಗೆ ತಂದಿದ್ದ ಎನ್ನಲಾಗಿದೆ. ಟಿವಿ ರಿಮೋಟ್ ಕಂಟ್ರೋಲ್ ಬ್ಯಾಟರಿಗೆ ತಂತಿ ಅಳವಡಿಸುವ ಪ್ರಯತ್ನ ನಡೆಸಿದ್ದಾನೆ. ಈ ವೇಳೆ ಟಿವಿ ರಿಮೋಟ್ ಸ್ಫೋಟಗೊಂಡಿದೆ. ಸ್ಫೋಟದ ಶಬ್ಧ ಕೇಳಿ ಮನೆಯವರು ಅಲ್ಲಿಗೆ ಬಂದಿದ್ದಾರೆ.

ಬಾಲಕನ ಕೈ, ಹೊಟ್ಟೆಗೆ ಗಾಯವಾಗಿದೆ. ಸೂರಜ್ ತಂದೆ-ತಾಯಿ ಮಹಾರಾಷ್ಟ್ರದಲ್ಲಿ ಕೂಲಿ ಕೆಲಸ ಮಾಡ್ತಿದ್ದು, ಬಾಲಕ ಸಹೋದರನ ಜೊತೆ ಗುಜರಾತಿನಲ್ಲಿದ್ದನಂತೆ. ಘಟನೆ ವೇಳೆ ಮನೆಯಲ್ಲಿ ಯಾರೂ ಇರಲಿಲ್ಲ ಎನ್ನಲಾಗಿದೆ. ಧೋಡ್ವಹಾನ್ ಗ್ರಾಮದಲ್ಲಿ ಡ್ಯಾಮ್ ಕೆಲಸ ನಡೆಯುತ್ತಿದೆ. ಕಲ್ಲುಗಳನ್ನು ಒಡೆಯಲು ಡೈನಾಮೈಟ್ ಬಳಸಲಾಗ್ತಿದೆ.

Leave a Reply

Your email address will not be published.

Social Media Auto Publish Powered By : XYZScripts.com