ಸಲ್ಮಾನ್ ಖಾನ್ ಅಭಿನಯದ ‘ದಬಾಂಗ್-೩’ ಚಿತ್ರದಲ್ಲಿ ಕಿಚ್ಚ ಸುದೀಪ್..!

ಈಗಾಗಲೇ ಕೆಲವು ಸಿನಿಮಾ ಮೂಲಕ ಬಾಲಿವುಡ್‌ನಲ್ಲಿ ತಮ್ಮ ಛಾಪನ್ನು ಮೂಡಿಸಿರೋ ಕಿಚ್ಚ ಸುದೀಪ್ ಅವರು, ಸಲ್ಮಾನ್ ಖಾನ್ ಅಭಿನಯದ ‘ದಬಾಂಗ್-೩’ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಈಗಾಗಲೆ ಮೊದಲ ಹಂತದ ಚಿತ್ರೀಕರಣ ಮುಗಿಸಿ ಎರಡನೇ ಹಂತದ ಚಿತ್ರೀಕರಣದಲ್ಲಿ ಸಲ್ಮಾನ್ ಖಾನ್ ‘ದಬಾಂಗ್-೩’ ತಂಡ ಬ್ಯುಸಿಯಾಗಿದೆ. ಸಲ್ಮಾನ್ ಖಾನ್ ಅವರ ಜೊತೆ ಮೊದಲ ಬಾರಿಗೆ ‘ದಬಾಂಗ್-೩ರಲ್ಲಿ ಸಿಖಂದರ್ ಭಾರಧ್ವಜ್ ಆಗಿ ಸಲ್ಮಾನ್ ಎದುರು ನಟ ಕಿಚ್ಚ ಸುದೀಪ್ ನಟಿಸಲಿದ್ದಾರೆ. ಚುಲ್ ಬುಲ್ ಪಾಂಡೆ ಪಾತ್ರದಲ್ಲಿ ನಟ ಸಲ್ಮಾನ್ ಖಾನ್ ನಟಿಸಲಿದ್ದಾರೆ.

ಇದೊಂದು ಹಾಸ್ಯ ಮಿಶ್ರಿತ ಪಾತ್ರ ಎನ್ನಲಾಗಿದೆ. ಸಿಖಂದರ್ ಭಾರದ್ವಜ್ ಪಾತ್ರದ ಮೂಲಕ ಖಳ ನಟನಾಗಿ ಕಿಚ್ಚ ಅಬ್ಬರಿಸಲಿದ್ದಾರೆ. ಚಿತ್ರದಲ್ಲಿ ಸಲ್ಮಾನ್ ಮತ್ತು ಸುದೀಪ್‌ ಅವರ ಪಾತ್ರ ಟಾಮ್‌ ಮತ್ತು ಜೆರಿಯ ಹೊಡೆದಾಟದಂತೆ ಇರಲಿದೆ ಎನ್ನಲಾಗಿದೆ.

ಚಿತ್ರದಲ್ಲಿ ಸೋನಾಕ್ಷಿ ಸಿನ್ಹಾ ನಾಯಕಿಯಾಗಿದ್ದು, ಪ್ರಭುದೇವ ಅವರು ಚಿತ್ರವನ್ನು ನರ‍್ದೇಶಿಸುತ್ತಿದ್ದಾರೆ. ದಬಾಂಗ್-೩ ಚಿತ್ರವು ಈ ರ‍್ಷದ ಡಿಸೆಂಬರ್‌ನಲ್ಲಿ, ಅಂದರೆ ಕ್ರಿಸ್‌ಮಸ್‌ಗೆ ರಿಲೀಸ್ ಆಗುವ ನಿರೀಕ್ಷೆ ಇದೆ.

ಮುಂದಿನ ತಿಂಗಳಿಂದ ಕಿಚ್ಚ ಸುದೀಪ್ ಸಿಖಂದರ್ ಭಾರದ್ವಜ್ ಆಗಿ ‘ದಬಾಂಗ್-೩’ ತಂಡ ಸೇರಿಕೊಳ್ಳಲಿದ್ದಾರೆ. ಸದ್ಯ ಅಭಿನಯ ಚಕ್ರರ‍್ತಿ ‘ಕೋಟಿಗೊಬ್ಬ-೩’ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಇನ್ನು ‘ಪೈಲ್ವಾನ್’ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ.

ಸ್ಯಾಂಡಲ್‌ವುಡ್ ಪ್ರೇಕ್ಷಕರು ಕಿಚ್ಚ ಸುದೀಪ್ ಅವರನ್ನು ಮತ್ತೊಮ್ಮೆ ಮಗದೊಮ್ಮೆ ಹಿಂದಿ ಚಿತ್ರದಲ್ಲೂ ನೋಡಲು ಕಾತರದಿಂದ ಕಾಯುತ್ತಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com