ಲಂಕಾ ಸ್ಪೋಟದ ಹೊಣೆ ಹೊತ್ತ ಐಸಿಸ್ : ಸಾವಿನ ಸಂಖ್ಯೆ 321 ಕ್ಕೆ ಏರಿಕೆ

ಈಸ್ಟರ್ ದಿನದಂದೆ ಶ್ರೀಲಂಕಾ ಸರಣಿ ಬಾಂಬ್ ಸ್ಪೋಟ್ ಗೊಂಡು ಸಾವಿನ ಸಂಖ್ಯೆ 321 ಕ್ಕೆ ಏರಿಕೆಯಾಗಿದೆ. ಈ ಸ್ಪೋಟದ ಹೊಣೆಯನ್ನು ಐಸಿಎಸ್ ಉಗ್ರ ಸಂಘಟನೆ ಹೊತ್ತಿದೆ.

ಸರಣಿ ಅಪಘಾತದಲ್ಲಿ ಮರಣವನ್ನಪ್ಪಿದವರ ಸಂಖ್ಯೆ 321 ಕ್ಕೆ ಏರಿಕೆಯಾಗಿದ್ದು 500 ಜನ ಗಾಯಗೊಂಡಿದ್ದಾರೆ. ಗಂಭೀರವಾಗಿ ಗಾಯಗೊಂಡವರ ಸಂಖ್ಯೆ ಲೆಕ್ಕಕ್ಕಿಲ್ಲದಂತಾಗಿದೆ. 4 ಚರ್ಚೆಗಳು ಹಾಗೂ 4 ಹೋಟೆಲೆ ಗಳಲ್ಲಿ ಸರಣಿ ಬಾಂಬ್ ಸ್ಪೋಟ ನಡೆಸಿದ ಐಸಿಎಸ್ ಸಂಘಟನೆಯಲ್ಲಿ ಪೈಶಾಚಿಕ ಮೆರೆದಿದ್ದ ಒಬ್ಬ ಉಗ್ರ ಚರ್ಚೆ ಒಳಗಡೆ ಪ್ರವೇಶ ಮಾಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ದೃಶ್ಯಗಳನ್ನು ಆಧರಿಸಿ ಐಸಿಎಸ್ ಉಗ್ರ ಸಂಘಟನೆ ಸ್ಪೋಟದ ರೂವರಿ ಎನ್ನುವ ಮಾಹಿತಿ ಲಭ್ಯವಾಗಿದೆ. ಸಾವಿಗೀಡಾದವರಲ್ಲಿ 7 ಜನ ಕನ್ನಡಿಗರಿದ್ದರು ಎಂದು ಹೇಳಲಾಗುತ್ತಿದೆ.

 

Leave a Reply

Your email address will not be published.

Social Media Auto Publish Powered By : XYZScripts.com