Election 2019 : Varanasi – ಮೋದಿ ಎದುರಿಸಲು Ready ಎಂದ ಪ್ರಿಯಾಂಕಾ…!

ವಾರಣಾಸಿಯಲ್ಲಿ ಮೋದಿಗಿSಪ್ರಿಯಾಂಕಾ ಸ್ಪರ್ಧೆ ವಿಚಾರ ಕುತೂಲದ ಪರಾಕಾಷ್ಠೆ ತಲುಪಿದೆ. ವಾರಣಾಸಿಯಲ್ಲಿ ಮೋದಿ ವಿರುದ್ಧ ಸ್ಪರ್ಧೆಗೆ ನಾನು ರೆಡಿ ಎಂದು ಹೇಳುವ ಮೂಲಕ ಪ್ರಿಯಾಂಕಾ ಗಾಂಧಿ ಕುತೂಹಲಗಳಿಗೆ ರೆಕ್ಕೆ ಕಟ್ಟಿದ್ದಾರೆ.

ಕಾಂಗ್ರೆಸ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದರೆ ವಾರಣಾಸಿಯಲ್ಲಿ ಪ್ರಧಾನಿ ಮೋದಿ ವಿರುದ್ಧ ಸೆಣಸಿಗೆ ನನಗೇನೂ ಹಿಂಜರಿಕೆ ಇಲ್ಲ ಎಂದು ವಯನಾಡಿನಲ್ಲಿ ರಾಹುಲ್ ಪರ ಪ್ರಚಾರ ಪ್ರವಾಸದಲ್ಲಿರುವ ಪ್ರಿಯಾಂಕಾ ಗಾಂಧಿ ಘೋಷಿಸಿದ್ದಾರೆ.

ರಾಹುಲ್ ಗಾಂಧಿ ಬಯಸಿದರೆ, ಒಪ್ಪಿಗೆ ಕೊಟ್ಟರೇ ವಾರಣಾಸಿಯಿಂದ ಬಹಳ ಖುಷಿಯಿಂದಲೇ ಸ್ಪರ್ಧಿಸುತ್ತೇನೆ ಎಂದು ಪ್ರಿಯಾಂಕಾ ಹೇಳಿದ್ದಾರೆ.

ವಾರಣಾಸಿಯಲ್ಲಿ ಮೇ. 19ರಂದು, ಅಂದರೆ ಕೊನೆಯ ಹಂತದಲ್ಲಿ ಚುನಾವಣೆ ನಡೆಯಲಿದ್ದು, ನಾಂಪತ್ರ ಸಲ್ಲಿಕೆಗೆ ಏಪ್ರಿಲ್ 29 ಕಡೆಯ ದಿನವಾಗಿದೆ.

ಮೋದಿ ಅವರ ವಿರುದ್ಧ ಪ್ರಿಯಾಂಕಾ ಅವರನ್ನು ಕಣಕ್ಕಿಲಿಸುವ ವಿಚಾದಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕಾದು ನೋಡಿ ಎಂದು ಹೇಳುವ ಮೂಲಕ ಕಾತರದ ಮೊಟ್ಟೆಗೆ ಕಾವು ನೀಡಿದ್ದಾರೆ.

ಪ್ರಧಾನಿ ಮೋದಿ ಅವರು ಬೇರೆಡೆ ಕಣಕ್ಕಿಳಿಯದಂತೆ ತಡೆಯಲು ಕಡೆಯ ಕ್ಷಣದವರೆಗೂ ಅಭ್ಯರ್ಥಿ ಘೋಷಿಸದಿರುವ ನಿಟ್ಟಿನಲ್ಲಿ ಕಾಂಗ್ರೆಸ್ ಕೌತುಕವನ್ನು ಉಳಸಿಕೊಂಡು ಬರುತ್ತಿದೆ ಎಂದು ಪಕ್ಷದೊಳಗಿನ ವ್ಯವಹಾರಗಳನ್ನು ಬಲ್ಲವರು ಹೇಳುತ್ತಿದ್ದಾರೆ.

ಈ ಮಧ್ಯೆ ಮೋದಿ ಅವರು ವಾರನಾಸಿ ಜೊತೆಗೆ ಮತ್ತೊಂದು ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವ ಸಾಧ್ಯತೆಗಳು ದಟ್ಟವಾಗಿವೆ ಎಂದು ಬಿಜೆಪಿ ಪಾಳೆಯದಲ್ಲಿ ಗುಸುಗುಸು ಕೇಳಿಬರುತ್ತಿದೆ.

ಒಟ್ಟಿನಲ್ಲಿ ಈ ಕುರಿತಾದ ಕಾಂಗ್ರೆಸಿಗರ ನಿರೀಕ್ಷೆಯ ಮೊಟ್ಟೆ ಒಡೆಯಲು ಕನಿಷ್ಟ ಇನ್ನು ನಾಲ್ಕೈದು ದಿನ ಕಾಯಬೇಕಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com