‘ಸರ್ಜಿಕಲ್ ಸ್ಟ್ರೈಕ್ ಮಾಡೋಕೆ ಮೋದಿ ಹೆಲಿಕ್ಯಾಪ್ಟರ್ ನಲ್ಲಿ ಬಾಂಬ್ ಹಾಕೋಕೆ ಹೋಗಿದ್ರಾ…?’

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಉತ್ತರ ಪ್ರದೇಶ ಮುಖ್ಯಮಂತ್ರಿ ಕುರಿತು ಅದ್ಯಾವನೋ ಯೋಗಿ ಆದಿತ್ಯನಾಥ್ ಅಂತೆ. ಅವನೂ ಒಬ್ಬ ಸಿಎಂ. ಮೋದಿ ಸೈನ್ಯ ಅಂತ ಹೇಳ್ತಾನೆ. ಸೈನ್ಯ ಯಾರದ್ದೂ ಅಲ್ಲ, ಅದು ಇಂಡಿಯನ್ ಆರ್ಮಿ ಎಂದು ಹೇಳಿದ್ದಾರೆ.

ಮೈಸೂರಿನಲ್ಲಿ ಮಾಧ್ಯಮ ಸಂವಾದದಲ್ಲಿ ಪಾಲ್ಗೊಂಡಿದ್ದ ಸಿದ್ದರಾಮಯ್ಯ, ಸರ್ಜಿಕಲ್ ಸ್ಟ್ರೈಕ್ ಮಾಡೋಕೆ ಮೋದಿ ಏನು ಹೆಲಿಕ್ಯಾಪ್ಟರ್ ನಲ್ಲಿ ಬಾಂಬ್ ಹಾಕೋಕೆ ಹೋಗಿದ್ರಾ…? ಇಡೀ ದೇಶದಲ್ಲಿ ನಾನೊಬ್ಬನೇ ದೇಶಭಕ್ತ ಅನ್ನೋ ತರ ಪೋಸ್ ಕೊಡ್ತಾರೆ ಎಂದು ಹರಿಹಾಯ್ದಿದ್ದಾರೆ.

ಬಿಜೆಪಿ ಈವರೆಗೆ ಒಟ್ಟಾರೆಯಾಗಿ 15 ವರ್ಷಗಳ ಕಾಲ ಅಧಿಕಾರದಲ್ಲಿದ್ದು, ಈ ಅವಧಿಯಲ್ಲಿ ರಾಮಮಂದಿರ ಕಟ್ಟುವುದಾಗಿ ಕಬ್ಬಿಣ, ಸಿಮೆಂಟ್ ಸಂಗ್ರಹ ಮಾಡಿದ್ದಾರೆ ಹೊರತು ಇವರಿಗೆ ರಾಮ ಮಂದಿರ ಕಟ್ಟಲು ಏಕೆ ಸಾಧ್ಯವಾಗಿಲ್ಲ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ಇಂಥವರನ್ನ ಜನ ನಂಬಬೇಕೆ ಎಂದು ಕೇಳಿದರು.

ಕಪ್ಪು ಹಣವನ್ನು ಹೊರ ತರುವುದಾಗಿ ನೋಟು ಅಮಾನ್ಯೀಕರಣ ಮಾಡಿದ್ದು ಈವರೆಗೆ ಎಷ್ಟು ಕಪ್ಪು ಹಣ ಪತ್ತೆಯಾಗಿದೆ ಎಂಬುದರ ಕುರಿತು ಯಾವುದೇ ಮಾಹಿತಿ ನೀಡಿಲ್ಲ ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com