ನಾಯಕಿ ಮನೇಕಾ ಗಾಂಧಿ ಹಾಗೂ SP ನಾಯಕ ಅಜಂ ಖಾನ್ ಭಾಷಣಕ್ಕೂ ನಿರ್ಬಂಧ

ಲೋಕಸಭಾ ಚುನಾವಣೆ 2019ರ ಪ್ರಚಾರ ಸಭೆಗಳಲ್ಲಿ ರಾಜಕೀಯ ನಾಯಕರು ನೀಡುತ್ತಿರುವ ಆಕ್ರಮಣಕಾರಿ ಹೇಳಿಕೆಗಳಿಗೆ ಸಂಬಂಧಿಸಿದಂತೆ ಚುನಾವಣಾ ಆಯೋಗ ಬಹಳಷ್ಟು ಅಲರ್ಟ್ ಆಗಿದೆ. ಚುನಾವಣಾ ಭಾಷಣಗಳಲ್ಲಿ ರಾಜಕೀಯ ಮುಖಂಡರರು ನೀಡುತ್ತಿರುವ ದ್ವೇಷ ಹಬ್ಬಿಸುವ ಭಾಷಣಗಳ ಕುರಿತಾಗಿ ಬರುತ್ತಿರುವ ದೂರುಗಳ ತನಿಖೆ ಆರಂಭಿಸಿ ಕ್ರಮ ಕೈಗೊಳ್ಳಲಾರಂಭಿಸಿದೆ. ಇದರ ಅನ್ವಯ ಈವರೆಗೆ ಒಟ್ಟು ನಾಲ್ವರು ಘಟಾನುಘಟಿ ನಾಯಕರ ಭಾಷಣಕ್ಕೆ ಬ್ರೇಕ್ ಹಾಕಿದೆ.

ಸುಪ್ರೀಂ ಕೋರ್ಟ್ ಆದೇಶದ ಬಳಿಕ ಎಚ್ಚೆತ್ತ ಚುನಾವಣಾ ಆಯೋಗ ಕ್ರಮ ಕೈಗೊಂಡಿದೆ. ನೀತಿ ಸಂಹಿತೆ ಉಲ್ಲಂಘನೆ ಆರೋಪದಡಿಯಲ್ಲಿ ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಸಮಾಜವಾದಿ ಪಕ್ಷದ ನಾಯಕಿ ಮಾಯಾವತಿ, ಬಿಜೆಪಿ ನಾಯಕಿ ಮನೇಕಾ ಗಾಂಧಿ ಹಾಗೂ SP ನಾಯಕ ಅಜಂ ಖಾನ್ ಭಾಷಣಕ್ಕೆ ಕೆಲ ಸಮಯದವರೆಗೆ ನಿರ್ಬಂಧ ಹೇರಿದೆ.

ಇದರ ಅನ್ವಯ ಈ ನಾಲ್ವರು ನಾಯಕರು ಯಾವುದೇ ರೋಡ್ ಶೋ ಹಾಗೂ ಸಮಾವೇಶದಲ್ಲಿ ಪಾಗ್ಗೊಳ್ಳುವಂತಿಲ್ಲ. ಚುನಾವಣಾ ಆಯೋಗದ ಈ ಕ್ರಮವನ್ನು ಅಭಿನಂದಿಸಿರುವ ಸುಪ್ರೀಂ ‘ನಮ್ಮ ಆದೇಶದ ಬಳಿಕ ಬಚುನಾವಣಾ ಆಯೋಗ ಎಚ್ಚೆತ್ತುಕೊಂಡಿದೆ’ ಎಂದು ತಿಳಿಸಿದೆ.

ಯೋಗಿ ಆದಿತ್ಯನಾಥ್ ಭಾಷಣಕ್ಕೆ 72 ಗಮಟೆಗಳ ನಿಷೇಧ ಹೇರಿದ್ದರೆ, ಮಾಯಾ ಭಾಷಣಕ್ಕೆ 48 ಗಂಟೆಗಳ ನಿರ್ಭಂಧ ಹೇರಿದೆ. ಇತ್ತ ಅಜಂ ಖಾನ್ ಭಾಷಣಕ್ಕೂ 72 ಗಂಟೆಗಳ ನಿಷೇಧ ಹೇರಿದ್ದು, ಮನೇಕಾ ಗಾಂಧಿಗೆ 48 ಗಂಟೆಗಳವರೆಗೆ ಚುನಾವಣಾ ಪ್ರಚಾರದಲ್ಲಿ ಭಾಗವಹಿಸದಂತೆ ತಡೆ ಹೇರಿದೆ.

Leave a Reply

Your email address will not be published.

Social Media Auto Publish Powered By : XYZScripts.com