ಕ್ಲೈಮ್ಯಾಕ್ಸ್ ನಲ್ಲಿ ಅಂಬಿ ಸಾವಿನ ರಾಜಕೀಯ..! : ಆ ತಾಯಿಗೆ ಸೌಜಯ್ಯ ಇದಿಯಾ ಎಂದ ಸಿಎಂ

ಮಂಡ್ಯದ ಅಂಬಿ ಸಾವಿನ ವಿಷಯ ನನಗೆ ನನ್ನ ಮಗ ತಿಳಿಸಿದ. ಅಂಬಿ ಮೃತಪಟ್ಟಿದ್ದಾಗ ರಾತ್ರೋ ರಾತ್ರಿ ಜೊತೆಗೆ ಸಾಹಯಕ್ಕೆ ಬಂದವನು ನಾನು. ಆಸ್ಪತ್ರೆ ಹೋಗಿ ಜೊತೆಗೆ ಇದ್ದವನು ನಾನು. ಅವರ ವಾಸದ ಮನೆಗೆ ಕರೆದುಕೊಂಡು ಹೋಗಲು ನಾನೇ ಕ್ಲೀನ್ ಮಾಡಿಸಿಕೊಟ್ಟಿದ್ದು. ಪಾರ್ಥೀವ ಶವವನ್ನು ತೆಗೆದುಕೊಂಡು ಹೋಗಲು ನಾನೇ ವ್ಯವಸ್ಥೆ ಮಾಡಿಕೊಟ್ಟಿದ್ದು.

ಆ ತಾಯಿ ಸೌಜಯ್ಯ ಇದಿಯಾ..? ಎಂದು ಕ್ಲೈಮ್ಯಾಕ್ಸ್ ನಲ್ಲಿ ಅಂಬಿ ಸಾವಿನ ರಾಜಕೀಯ ಮಾಡಿದರು ಸಿಎಂ ಕುಮಾರಸ್ವಾಮಿ. ಮಂಡ್ಯದ ಜನ ಅಂಬಿ ಅಂತಿಮ ದರ್ಶನಕ್ಕೆ ಪಾರ್ಥೀವ ಶರೀರವನ್ನು ಹೆಲಿಕಾಪ್ಟರ್ ಇಲ್ಲ ಅಂದರು. ಆಗಲೂ ಅಭಿಮಾನಿಗಳ ಕಣ್ಣೀರಿಗೆ ತಲೆ ಭಾಗಿ ವ್ಯವಸ್ಥೆ ಮಾಡಿಕೊಟ್ಟೆ. ಅದೆಲ್ಲವೂ ನಿಮಗೆ ತಿಳಿದಿದೆ.

ಆದರೆ ಆ ತಾಯಿ ( ಸುಮಲತಾ ಅಂಬರೀಶ್) ಗೆ ಈ ಬಗ್ಗೆ ಸೌಜನ್ಯ ಇಲ್ಲ. ಮರೆತುಬಿಟ್ಟಿದ್ದಾರೆ ಎಂದು ಸಿಎಂ ಕುಮಾರಸ್ವಾಮಿ ಕಿಡಿಕಾರಿದರು. ಒಟ್ಟಿನಲ್ಲಿ ಕ್ಲೈಮ್ಯಾಕ್ಸ್ ನಲ್ಲಿ ಅಂಬಿ ಸಾವಿನ ರಾಜಕೀಯ ಮಂಡ್ಯದಲ್ಲಿ ಜೋರಾಗಿತ್ತು.

 

Leave a Reply

Your email address will not be published.

Social Media Auto Publish Powered By : XYZScripts.com