‘ಬಿಜೆಪಿ ಬೆಂಗಳೂರಿಗೆ ಮಸಿ ಬಳಿಯುವ ಕೆಲಸ ಮಾಡಿದೆ’ – ಬಿ‌.ಕೆ.ಹರಿಪ್ರಸಾದ್

ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ‌.ಕೆ.ಹರಿಪ್ರಸಾದ್ ಪತ್ರಿಕಾ ಸಂವಾದ ಮಾಡಿ ಮತಯಾಚಿಸಿದರು.
ಸ್ಮಾರ್ಟ್ ಟ್ ಸಿಟಿಯಾದ ಬೆಂಗಳೂರಿಗೆ ಬಿಜೆಪಿ ಕೂಡುಗೆ ಶೂನ್ಯವಾಗಿದೆ. ಮೋದಿಯವರ ಗುಜರಾತ್ ಮಾದರಿಗೆ ಇದುವರೆಗೂ ಸರಿಯಾದ ಉತ್ತರವಿಲ್ಲ, ಬಿಜೆಪಿಯವರು ಬೆಂಗಳೂರಿಗೆ ಮಸಿ ಬಳಿಯುವ ಕೆಲಸ ಮಾಡಿದರು. ಬೆಂಗಳೂರು ನಗರ ಮಾದರಿ ನಗರವಾಗಿದೆ. ಬೆಂಗಳೂರಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ.ಕಸದ ಸಮಸ್ಯೆ ನಿರ್ವಹಣೆಗಾಗಿ ಅಂತರಾಷ್ಟ್ರೀಯ ಮಟ್ಟದ ನಗರ ಯೋಜನೆ ತರಬೇಕಿದೆ.
ಜಾಪರ್ ಷರೀಪ್, ಕೃಷ್ಣಪ್ಪ ನವರಂತಹ ನಾಯಕರುಉತ್ತಮ ಕೊಡುಗೆ ನೀಡಿದ್ದಾರೆ. ಬಿಜೆಪಿಯಿಂದ ಆಯ್ಕೆಯಾದ ಸಂಸದರು ಬೆಂಗಳೂರಿಗೆ ಯಾವುದೇ ಕೊಡುಗೆ ನೀಡಿಲ್ಲ.
ತೇಜಸ್ವಿ ಸೂರ್ಯ ಗೆ ಟಕೇಟ್ ನೀಡಿರುವುದು ಅಂತರಿಕ ವಿಚಾರ, ನನ್ನ ಜೀವನದುದ್ದಕ್ಕೂ ಬಿಜೆಪಿ ವಿರುದ್ದ ಹೋರಾಟ ಮಾಡಿದ್ದೇನೆ ಅದನ್ನು ಮುಂದುವರಿಸುತ್ತೆನೆ.
ಕಾಂಗ್ರೆಸ್ ಅವಧಿಯಲ್ಲಿ ಬೆಂಗಳೂರಿನಲ್ಲಿ ಬಾಂಬ್ ಸ್ಪೋಟ ನಡೆಯಿತು, ಅದು ಈಗ ಇಲ್ಲ ಎಂದು ಪ್ರಧಾನ ಮಂತ್ರಿಗಳು ಹೇಳಿಕೆ ನೀಡಿರುವುದು ಮೂರ್ಖತನದ ಪರಮಾವಧಿಯಾಗಿದೆ.
ದೇವೆಗೌಡರು,_ ನನ್ನ ಮಧ್ಯೆ ಉತ್ತಮ ಸಂಬಂಧವಿದೆ, ಅವರ ಆಶೀರ್ವಾದ ಸದಾ ನಮ್ಮ ಮೇಲಿದೆ ದಕ್ಷಿಣದಲ್ಲಿ ಜೆಡಿ ಎಸ್ ಕಾರ್ಯಕರ್ತರು ನಮ್ಮ ಗೆಲುವಿಗೆ ಶ್ರಮಿಸಲಿದ್ದಾರೆ ಎಂದರು.

Leave a Reply

Your email address will not be published.

Social Media Auto Publish Powered By : XYZScripts.com