ಪ್ರಚಾರಕ್ಕೆ ಕೆಲವೇ ದಿನ ಬಾಕಿ : ದಲಿತ, ಕ್ರೈಸ್ತ ವೋಟ್ ಮೇಲೆ ಸುಮಾ ಕಣ್ಣು

ಲೋಕಸಭಾ ಚುನಾವಣೆಗೆ ಇನ್ನೇನು ಕೆಲವೇ ದಿನ ಬಾಕಿ ಇರುವ ಹಿನ್ನೆಲೆಯಲ್ಲಿ ಭರ್ಜರಿ ಪ್ರಚಾರ ಮಂಡ್ಯದಲ್ಲಿ ನಡೆದಿದೆ. ಇಂದು ಅಂಬೇಡ್ಕರ್ ಜಯಂತಿ ಹಿನ್ನೆಲೆಯಲ್ಲಿ ಡಿಸಿ ಕಚೇರಿ ಬಳಿ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಮಸ್ಕರಿಸಿ ಮತಯಾಚನೆಗೆ ತೆರಳಿದ್ದಾರೆ.

ಜೊತೆಗೆ ಮತಯಾಚನೆಗೆ ಇರುವ ಏಕೈಕ ಭಾನುವಾರ ಇದಾಗಿರುವುದರಿಂದ ಸುಮಾರು ಜನ ರಜೆಯಲ್ಲಿರುತ್ತಾರೆ. ಅವರ ಮತ ಸೆಳೆಯಲು ಸುಮ ಪ್ರಯತ್ನಿಸುತ್ತಿದ್ದಾರೆ.ಹೀಗಾಗಿ ಸುಭಾಷ್ ನಗರದಲ್ಲಿರೋ ಚರ್ಚೆಗೆ ಭೇಟಿ ನೀಡಿ ಮತಯಾಚಿಸಿದ್ದಾರೆ.

ದಲಿತ, ಕ್ರೈಸ್ತ ವೋಟ್ ಮೇಲೆ ಸುಮಾ ಕಣ್ಣು ಬಿದ್ದಿದ್ದು, ಇತ್ತ ಯಶ್ ಕೂಡ ಸುಮಲತಾ ಪರ ಮಂಡ್ಯದ ಕೆ.ಆರ್ ಪೇಟೆ ಯಲ್ಲಿ ನಟ ಪ್ರಚಾರ ಆರಂಭಿಸಿದ್ದಾರೆ. ಇನ್ನೂ ಮೂರು ದಿನ ಜೋಡೆತ್ತುಗಳು ಮದರ್ ಇಂಡಿಯಾ ಪರ ಪ್ರಚಾರ ನಡೆಸಲಿವೆ.

ಈ ವೇಳೆ ಮಾತನಾಡಿದ ಸುಮಲತಾ ಅವರು, ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಭಯದ ವಾತಾವರಣ ಇದೆ ಎಂದು ಸ್ವತಂತ್ರ ಅಭ್ಯರ್ಥಿ ಸುಮಲತಾ ಅಂಬರೀಶ್ ಹೇಳಿದ್ದಾರೆ.

ಮಂಡ್ಯ ಕ್ಷೇತ್ರದಲ್ಲಿ ಅಧಿಕಾರ ದುರ್ಬಳಕೆಯಾಗುತ್ತಿದೆ ಎಂದು ಆರೋಪಿಸಿದ್ದಾರೆ. ಕ್ಷೇತ್ರದಲ್ಲಿ ಅಧಿಕಾರ ದುರ್ಬಳಕೆ ಆಗುತ್ತಿರುವುದರಿಂದ ನಾನು ಚುನಾವಣಾ ಆಯೋಗಕ್ಕೆ ದೂರು ಕೊಟ್ಟಿದ್ದೇನೆ ಎಂದು ತಿಳಿಸಿದ್ದಾರೆ.

ಡಾ.ಬಿ.ಆರ್. ಅಂಬೇಡ್ಕರ್ ಅವರು ಮಹಿಳೆಯರಿಗೆ ಮತ ಹಾಕುವ ಹಕ್ಕು ನೀಡಿದ್ದರು. ಅವರಿಂದಾಗಿಯೇ ಚುನಾವಣೆಯಲ್ಲಿ ಸ್ಪರ್ಧಿಸಲು ಮಹಿಳೆಯರಿಗೆ ಅವಕಾಶ ದೊರೆತಿದೆ. ಅಂತಹ ಅವಕಾಶ ನನಗೆ ಸಿಕ್ಕಿದೆ ಎಂದು ಹೇಳಿದ್ದಾರೆ.

ಡಾಬರ್ ನಾಯಿ ಕಟ್ಟಿಕೊಂಡು ಮನೆಯೊಳಗೆ ಬಿಡದವರು ಅಭಿವೃದ್ಧಿ ಕುರಿತು ಮಾತನಾಡುತ್ತಾರೆ ಎಂಬ ಸಂಸದ ಎಲ್.ಆರ್. ಶಿವರಾಮೇಗೌಡರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಇವತ್ತು ಬಿ.ಆರ್. ಅಂಬೇಡ್ಕರ್ ಅವರ ಜನ್ಮ ದಿನವಾಗಿದೆ. ಹೀಗಾಗಿ, ಇಂತಹ ಹೇಳಿಕೆಗಳಿಗೆ ನಾನು ಉತ್ತರಿಸುವುದಿಲ್ಲ ಎಂದು ಹೇಳಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com