ಓತುಲಾ.. ಓತುಲಾ.. ಓಟಿಲ್ಲಿ ಒತ್ತುಲಾ.. ಬೆರಳುಗಳನ್ನ ಕಟ್ಮಾಡಿ ಎಲೆಕ್ಷನ್ಗೆ ತಂದ್ರಲಾ…?

ನಿಮಗೆಲ್ಲಾ ‘ಓಂಕಾರ್’ ಉಪೇಂದ್ರ ಅಭಿನಯದ ಸಿನಿಮಾ ಹಾಡು ‘ಓತುಲಾ.. ಓತುಲಾ.. ಓಟಿಲ್ಲಿ ಒತ್ತುಲಾ.. ‘ ಕೇಳಿರಬಹುದು. ಅದ್ಯಾಕ್ ಈಗ ಅಂತೀರಾ..? ಈ ಸಾಂಗಿಗೂ ನಾವೀಗ ಹೇಳ ಹೊರಟಿರುವ ಸುದ್ದಿಗೂ ಯಾವುದೇ ಸಂಬಂಧವಿಲ್ಲ. ಆದರೆ ಈ ಸಾಂಗ್ ನ್ನ ಸ್ವಲ್ಪ ಚೆಂಜ್ ಮಾಡಿದ್ದೇವೆ ಅಷ್ಟೇ.

‘ಓತುಲಾ.. ಓತುಲಾ.. ಓಟಿಲ್ಲಿ ಒತ್ತುಲಾ..  ಡೆಮಾಕ್ರಸಿ ಬಟ್ಟೆ ಬಿಚ್ಚಿ ರೋಡ್ ಗೆ ತಂದ್ರಲಾ..’  ಬದಲಾಗಿ ‘ಬೆರಳುಗಳನ್ನ ಕಟ್ಮಾಡಿ ಎಲೆಕ್ಷನ್ಗೆ ತಂದ್ರಲಾ…’ಏನೂ ಬೆರಳುಗಳನ್ನ ಕಟ್ಮಾಡಿ ಎಲೆಕ್ಷನ್ಗೆ ತಂದ್ರಾ..? ಅಂತ ಗಾಬರಿ ಆಗಬೇಡಿ. ಯಾಕಂದ್ರೆ ಈ ಬೆರಳುಗಳು ಅಸಲಿ ಅಲ್ಲ ನಕಲಿ.

ಎಸ್.. ನಕಲಿ ಕೈಬೆರಳುಗಳಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಬಾರೀ ವೈರಲ್‌ ಆಗುತ್ತಿದೆ. ಜಿದ್ದಾಜಿದ್ದನ ಕದನವಾಗಿರುವ ಈ ಲೋಕಸಭಾ ಚುನಾವಣೆಯಲ್ಲಿ ನಕಲಿ ಮತದಾನ ಮಾಡಲು ಈ ಕೃತಕ ಬೆರಳುಗಳನ್ನು ಉಪಯೋಸುವ ಯೋಜನೆ ರೂಪುಗೊಂಡಿದೆ ಎಂದು ಆರೋಪಿಸಲಾಗಿದೆ.

ಮತ ಚಲಾಯಿಸಿದ ಬಳಿಕ ಮತಹಾಕಿದ ಗುರುತಿಗಾಗಿ ತೋರು ಬೆರಳಿಗೆ ಶಾಯಿ ಹಾಕಲಾಗುತ್ತದೆ. ಆದರೆ ಈ ಕೃತಕ ಬೆರಳುಗಳನ್ನು ಬಳಸಿ ಒಬ್ಬರು ಒಂದಕ್ಕಿಂತ ಹೆಚ್ಚು ಬಾರಿ ಮತ ಹಾಕುವ ತಂತ್ರ ರೂಪಿಸಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಯಾವುದೇ ಪಕ್ಷದ ಕುರಿತು ಇಲ್ಲಿ ಉಲ್ಲೇಖ ಇಲ್ಲ.

ಆದರೆ ನಿಜಕ್ಕೂ ಈ ಚುನಾವಣೆಯಲ್ಲಿ ಇಂಥದ್ದೊಂದು ಅಕ್ರಮ ನಡೆಯುತ್ತಿದೆಯೇ ಎಂದು ಪರಿಶೀಲಿಸಿದಾಗ ಈ ಕೃತಕ ಬೆರಳುಗಳು ಭಾರತದಲ್ಲಿ ಇದುವರೆಗೂ ಬಳಕೆಯಾಗಿಲ್ಲ, ಇದೊಂದು ಸುಳ್ಳು ಸುದ್ದಿ ಎಂದು ತಿಳಿದುಬಂದಿದೆ.

ಎಬಿಸಿ ನ್ಯೂಸ್‌ 2013ರಲ್ಲಿ ‘ಯಕುಜಾ ಗ್ಯಾಂಗ್‌ಸ್ಟರ್‌ಗಳಿಗೆ ಪ್ರೋಸ್ಥೆಟಿಕ್‌ ಫಿಂಗರ್‌ ನೆರವಾಗಲಿವೆ’ ಎಂಬ ವರದಿ ಪ್ರಕಟಿಸಿದೆ. ಅದರಲ್ಲಿ ಜಪಾನಿನಲ್ಲಿರುವ ಯಕುಜಾ ಸಮುದಾಯದಲ್ಲಿ ಯಾವುದಾರು ಅಪರಾಧ ಎಸಗಿದ್ದರೆ, ಬೆರಳುಗಳನ್ನು ಕತ್ತರಿಸುವ ಶಿಕ್ಷೆ ಜಾರಿಯಲ್ಲಿದೆ. ಹೀಗೆ ಬೆರಳು ಕತ್ತರಿಸಿಕೊಂಡ ಸಂತ್ರಸ್ತರಿಗೆ ಈ ಕೃತಕ ಬೆರಳುಗಳು ನೆರವಾಗಲಿವೆ ಎಂದಿದೆ.

Leave a Reply

Your email address will not be published.

Social Media Auto Publish Powered By : XYZScripts.com