98 ವಯಸ್ಸಿನಲ್ಲಿ ಅಕ್ಷರ ಕಲಿಯಲು ನಿರ್ಧಾರಿಸಿದ ಹಣ್ಣಣ್ ಅಜ್ಜಿಯ ಉತ್ಸಾಹ ನೋಡಿ..!

ಈಗಿನ ಕಾಲದಲ್ಲಿ 80 ವಯಸ್ಸು ದಾಟಿದರೆ ಬದುಕುವ ಸಾಧ್ಯತೆ ಕಡಿಮೆ. 80 ವಯಸ್ಸು ದಾಟಿದ ಬಳಿಕ ನಾನಾ ಕಾಯಿಲೆಗಳು ದೇಹ ಸೇರುತ್ತವೆ. ಹೀಗಿರುವಾಗ ವೃದ್ಧರು ಆದಷ್ಟು ಅಲ್ಪಾಹಾರ, ವಿಶ್ರಾಂತಿ ತೆಗೆದುಕೊಳ್ಳಲು ಬಯಸುತ್ತಾರೆ. ವಯಸ್ಸಾದಂತೆ ಜ್ಞಾಪಕ ಶಕ್ತಿ ಕೂಡ ಕ್ಷಿಣಿಸುತ್ತಾ ಹೋಗುತ್ತದೆ. ಅಂಥದ್ರಲ್ಲಿ ಇಲ್ಲೊಂದು ಅಜ್ಜಿ ತನ್ನ 99 ವಯಸ್ಸಿನಲ್ಲಿ ಅಕ್ಷರ ಕಲಿಯಲು ಮುಂದಾಗಿದ್ದಾರೆ.  ಒಬ್ಬ ವ್ಯಕ್ತಿ ಯಾವ ವಯಸ್ಸಿನಲ್ಲಿ ವಯಸ್ಕರ ಶಿಕ್ಷಣಕ್ಕೆ ಸೇರಬಹುದು. ಅಬ್ಬಾಬ್ಬಾ ಎಂದರೆ 50 ನೇ ವಯಸ್ಸಿನಿಂದ ವಯಸ್ಕರ ಶಿಕ್ಷಣ ಕಲಿಯಬಹುದು.

ಆದರೆ ಅರ್ಜೆಂಟೈನಾದಲ್ಲಿ 99 ನೇ ವಯಸ್ಸಿನ ವೃದ್ಧೆ ಅಕ್ಷರ ಕಲಿಯಲು ಶಾಲೆಗೆ ಹೋಗುತ್ತಿದ್ದಾಳೆ. ಅರ್ಜೆಂಟೈನಾದ ಎಸೆಬಿಯಾ ಲಿಯೋನಾರ್ ಕೋರ್ಡಲ್ ಎಂಬ 99 ವಯಸ್ಸಿನ ವೃದ್ಧೆ ಕೌಟುಂಬಿಕ ಸಮಸ್ಯೆ ಹಾಗೂ ಸಣ್ಣ ವಯಸ್ಸಿನಲ್ಲಿಯೇ ತನ್ನ ತಾಯಿಯನ್ನ ಕಳೆದುಕೊಂಡ ಪರಿಣಾಮ ಶಾಲೆಗೆ ಹೋಗಲು ಸಾಧ್ಯವಾಗಿಲ್ಲ. ಇದರಿಂದಾಗಿ ಲಿಯೋನಾರ್ ತಮ್ಮ ಜೀವನದ ಕೊನೆಗಾಲದಲ್ಲಿ ಲೆಪ್ರಿಡಾದ ವಯಸ್ಕರ ಶಿಕ್ಷಣದ ಪ್ರಾಥಮಿಕ ಶಾಲೆಗೆ ಸೇರಿಕೊಂಡಿದ್ದಾರೆ.

98 ನೇ ವಯಸ್ಸಿನಲ್ಲಿ ಶಾಲೆಗೆ ಸೇರಿದ ಲಿಯೋನಾರ್ ಒಂದು ದಿನವೂ ಶಾಲೆಗೆ ಗೈರುಹಾಜರಿಯಾಗದಿರುವುದು ವಿಶೇಷವಾಗಿದೆ. ಪ್ರತಿ ಮಂಗಳವಾರ, ಬುಧವಾರ ಹಾಗೂ ಗುರುವಾರ ಇವರ ಶಿಕ್ಷಕಿ ಪಟ್ರೇಶಿಯಾ, ಮನೆಗೆ ಬಂದು ಶಾಲೆಗೆ ಕರೆದುಕೊಂಡು ಹೋಗುತ್ತಾರೆ.

ವಯಸ್ಸಾದಂತೆ ಜ್ಞಾಪಕ ಶಕ್ತಿ ಕುಂದುಹೋಗುತ್ತದೆ. ಆದರೆ ಶಾಲೆಯಲ್ಲಿ ನಡೆಯುವ ಪ್ರತಿ ಪಾಠದ ಬಗ್ಗೆ ನನಗೆ ನೆನಪಿದೆ. ನಾನು ಶಾಲೆಗೆ ಸೇರಿದಾಗ ನನಗೆ ಓದಲು ಬರೆಯಲು ಬರುತ್ತಿರಲಿಲ್ಲ. ಈಗ ಅವೆಲ್ಲವೂ ಸಾಧ್ಯವಾಗಿದೆ. ಮುಂದಿನ ದಿನಗಳಲ್ಲಿ ಕಂಪ್ಯೂಟರ್ ಬಳಸುವುದು ಹೇಗೆ ಎಂಬುದನ್ನ ಕಲಿಯಲಿದ್ದೇನೆ ಎಂದು ಎಸೆಬಿಯಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

 

 

Leave a Reply

Your email address will not be published.

Social Media Auto Publish Powered By : XYZScripts.com