Small screen big fight : ವೀಕೆಂಡ್ ವಿತ್ ರಮೇಶ್’, ವೀಕ್‌ಡೇಸ್‌ ವಿತ್‌ ಪುನೀತ್‌….

ಜೀ ಕನ್ನಡ ವಾಹಿನಿಯಲ್ಲಿ ‘ವೀಕೆಂಡ್ ವಿತ್ ರಮೇಶ್’ ಪ್ರಾರಂಭ ಆಗುತ್ತಿದ್ದರೆ, ಮತ್ತೊಂದು ಕಡೆ ಸ್ಟಾರ್ ಸುವರ್ಣ ಮನರಂಜನೆ ವಾಹಿನಿಯಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಡೆಸುವ ಕಾಮನ್ ಮ್ಯಾನ್ ರಿಯಾಲಿಟಿ ಶೋ ‘ಕನ್ನಡದ ಕೋಟ್ಯಾಧಿಪತಿ’ ಶುರುವಾಗುತ್ತಿದೆ.

ವಿಶೇಷ ಅಂದರೆ, ಎರಡೂ ಕಾರ್ಯಕ್ರಮಗಳು ಒಟ್ಟಾಗಿ ಮೂರು ಸೀಸನ್‌ಗಳ ಬಳಿಕ ನಾಲ್ಕನೇ ಸೀಸನ್‌ಗೆ ಕಾಲಿಡುತ್ತಿದೆ. ಜೀ ಕನ್ನಡ ವಾಹಿನಿಯ ಸೆಲೆಬ್ರಿಟಿ ಕಾರ್ಯಕ್ರಮ ‘ವೀಕೆಂಡ್ ವಿತ್ ರಮೇಶ್’ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದು ಮುಂಬರುವ ಸೀಸನ್ ನಲ್ಲಿ ಮೊದಲ ಅತಿಥಿಯಾಗಿ ವೀರೆಂದ್ರ ಹೆಗ್ಗಡೆ ಬರುವುದು ಖಚಿತವಾಗಿದೆ.

ಕನ್ನಡ ಕೋಟ್ಯಾಧಿಪತಿ ಸೋಮವಾರದಿಂದ ಶುಕ್ರವಾರದವರೆಗೂ ಪ್ರಸಾರವಾಗುತ್ತಿದ್ದು ವೀಕೆಂಡ್ ಕಾರ್ಯಕ್ರಮ ಶನಿವಾರ ಹಾಗೂ ಭಾನುವಾರ ಪ್ರಸಾರವಾಗುತ್ತದೆ.

ಎರಡೂ ಕಾರ್ಯಕ್ರಮಗಳು ಒಂದೇ ಸಮಯಕ್ಕೆ ಪ್ರಸಾರವಾಗುತ್ತದೆ. ಆದರೆ ಎರಡೂ ಕಾರ್ಯಕ್ರಮಗಳು ಬೇರೆ ಬೇರೆ ವಾಹಿನಿಯಲ್ಲಿ ಪ್ರಸಾರ ಆಗುತ್ತಿದ್ದು, ಬೇರೆ ಬೇರೆ ವೀಕ್ಷಕ ಬಳಗ ಹೊಂದಿದೆ.

ಕನ್ನಡದ ಕೋಟ್ಯಾಧಿಪತಿ’ ಕಾರ್ಯಕ್ರಮ ಸೋಮವಾರದಿಂದ ಶುಕ್ರವಾರದವರೆಗೆ ಪ್ರಸಾರ ಆಗಲಿದೆ. ‘ವೀಕೆಂಡ್ ವಿತ್ ರಮೇಶ್’ ಶನಿವಾರ ಹಾಗೂ ಭಾನುವಾರ ಪ್ರಸಾರ ಆಗಲಿದೆ. ಕಿರುತೆರೆ ವೀಕ್ಷಕರು ’ವೀಕೆಂಡ್ ವಿತ್ ರಮೇಶ್’, ವೀಕ್‌ಡೇಸ್‌ ’ಕನ್ನಡದ ಕೋಟ್ಯಾಧಿಪತಿ’ ಪುನೀತ್‌ ಕಾರ್ಯಕ್ರಮದ ಪ್ರಸಾರ ನೋಡಬಹುದಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com