IPL hungama : ಪೊಲಾರ್ಡ್‌ ಅಬ್ಬರದಲ್ಲಿ ಮರೆಯಾದ ರಾಹುಲ್ ಶತಕ- MIಗೆ ಜಯ….

ತಾತ್ಕಾಲಿಕವಾಗಿ ನಾಯಕನ ಜವಾಬ್ದಾರಿ ಹೊತ್ತ ಕೀರನ್ ಪೊಲಾರ್ಡ್‌ ಅದನ್ನು ಸೊಗಸಾಗಿ ನಿಭಾಯಿಸುವ ಮೂಲಕ ಪಂಜಾನ್ ವಿರುದ್ಧ ಮುಂಬೈಗೆ ರೋಚಕ ಜಯ ತಂದಿತ್ತಿದ್ದಾರೆ.

ಬರೋಬ್ಬರಿ 10 ಸಿಕ್ಸರ್‍ ಸಿಡಿಸಿ ಬೊಬ್ಬಿರದ ಪೊಲಾರ್ಡ್‌ ಆರ್ಭಟದಲ್ಲಿ ಪಂಜಾಬ್‌ ಪರ ಅಷ್ಟೇ ಸುಲಲಿತವಾಗಿ ಶತಕ ಬಾರಿಸಿದ ಕನ್ನಡಿಗ ಕೆಎಲ್ ರಾಹುಲ್ ಶ್ರಮ ವ್ಯರ್ಥವಾಯಿತು.

ವಾಂಖೆಡೆಯಲ್ಲಿ ಗೆಲುವಿಗೆ 198 ರನ್ (197/4) ಟಾರ್ಗೆಟ್ ಪಡೆದ ಮುಂಬೈ ಪೋಲಾರ್ಡ್‌ ಕಣಕ್ಕಿಳಿಯುವ ತನಕ ಸೋಲಿನ ಹೊಸ್ತಿಲಿನಲ್ಲಿ ನಿಂತಿತ್ತು. ಆದರೆ ಆ ದೈತ್ಯನ ಬ್ಯಾಟಿಂಗ್ ಮುಂಬೈಗೆ (198/7) ಮೂರು ವಿಕೆಟ್ ಜಯ ಉಣಿಸಿತು.

ಪೊಲಾರ್ಡ್ 31 ಎಸೆತದಲ್ಲಿ 10 ಸಿಕ್ಸರ್,3 ಬೌಂಡರಿ ಸಹಿತ 83 ರನ್ ಸಿಡಿಸಿ ಔಟಾದರು. ಅಂತಿಮ ಎಸೆತದಲ್ಲಿ ಮುಂಬೈಗೆ 2 ರನ್ ಬೇಕಿತ್ತು. ಅಲ್ಜಾರಿ ಜೊಸೆಫ್ 2 ರನ್ ಸಿಡಿಸಿ ಮುಂಬೈಗೆ ರೋಚಕ ಗೆಲುವು ತಂದುಕೊಟ್ಟರು. ಮುಂಬೈ 3 ವಿಕೆಟ್ ಗೆಲುವು ಸಾಧಿಸಿತು.

ಅಂತಿಮ 12 ಎಸೆತದಲ್ಲಿ ಮುಂಬೈ ಗೆಲುವಿಗೆ 32 ರನ್ ಅವಶ್ಯಕತೆ ಇತ್ತು. ಪೊಲಾರ್ಡ್ ಸಿಕ್ಸರ್ ಸುರಿಮಳೆಗೆ ಪಂದ್ಯದ ಗತಿ ಬದಲಾಯಿತು.

ಅಂತಿಮ ಓವರ್‌ನ ಮೊದಲ ನೋ ಬಾಲ್ ಎಸೆತಕ್ಕೆ ಪೊಲಾರ್ಡ್ ಸಿಕ್ಸರ್ ಸಿಡಿಸಿದರು. ಇನ್ನು ಫ್ರೀ ಹಿಟ್ ಎಸೆತವೂ ಗೆರೆಯಾಚೆ ಹಾರಿಹೋಯಿತು. ಅಲ್ಲಿಗೆ ಪಂಜಾಬ್‌ ಸೋಲು ಕಂಡಿತು.

ಇದಕ್ಕೆ ಮುನ್ನ ಟಾಸ್ ಸೋತು ಬ್ಯಾಟಿಂಗ್ ಇಳಿದ ಪಂಜಾಬ್‌ಗೆ ಕೆಎಲ್ ರಾಹುಲ್ ಹಾಗೂ ಕ್ರಿಸ್ ಗೇಲ್ ಅದ್ಬುತ ಆರಂಭ ನೀಡಿದರು. ಮೊದಲ ವಿಕೆಟ್‌ಗೆ ಈ ಜೋಡಿ 116 ರನ್ ಜೊತೆಯಾಟ ನೀಡಿತು.

ರಾಹುಲ್ 63 ಎಸೆತದಲ್ಲಿ ಸೆಂಚುರಿ ಸಿಡಿಸಿದರು. ರಾಹುಲ್ 64 ಎಸೆತದಲ್ಲಿ 6 ಸಿಕ್ಸರ್ ಹಾಗೂ 6 ಬೌಂಡರಿ ಮೂಲಕ ಅಜೇಯ 100 ರನ್ ಸಿಡಿಸಿದರು. ಈ ಮೂಲಕ ಪಂಜಾಬ್ 4 ವಿಕೆಟ್ ನಷ್ಟಕ್ಕೆ 197 ರನ್ ಸಿಡಿಸಿತು.

ಮೊದಲ ವಿಕೆಟ್ಟಿಗೆ ಭರ್ಜರಿ ಶತಕದ ಜೊತೆಯಾಟ ನಿಭಾಯಿಸಿದ ವಿಂಡೀಸಿನ ಕ್ರಿಸ್ ಗೇಲ್ 36 ಎಸೆತದಲ್ಲಿ 3 ಬೌಂಡರಿ ಹಾಗೂ 7 ಸಿಕ್ಸರ್ ನೆರವಿನಿಂದ 63 ರನ್ ಸಿಡಿಸಿ ಔಟಾದರು.

Leave a Reply

Your email address will not be published.

Social Media Auto Publish Powered By : XYZScripts.com