‘ಸಿನಿಮಾ ರಂಗದಲ್ಲಿ ಯಶ್ ಗಿಂತ ನಿಖಿಲ್ ಇನ್ನೂ ಚಿಕ್ಕವರು.. ಈಗಿನ್ನು 2 ಸಿನಿಮಾ ಮಾಡಿದ್ದಾರೆ’ ಸುಮಲತಾ

ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಪರ ಪ್ರಚಾರ ಮಾಡುತ್ತಿರುವ ರಾಕಿಂಗ್ ಸ್ಟಾರ್ ಯಶ್ ವಿರುದ್ಧ ಜೆಡಿಎಸ್ ಅಭ್ಯರ್ಥಿ ನಿಖಿಲ್ ಪ್ರಚಾರದ ವೇಳೆ ವೈಯಕ್ತಿಕ ವಿಚಾರವನ್ನು ಮಾತನಾಡಿದ್ದಕ್ಕೆ ಸುಮಲತಾ ತಿರಗೇಟು ಕೊಟ್ಟಿದ್ದಾರೆ.

ಸಿನಿಮಾ ರಂಗದಲ್ಲಿ ಯಶ್ ಸಾಧನೆ ಅಪಾರವಾಗಿದೆ. ಸಾಕಷ್ಟು ಸಾಧನೆ ಮಾಡಿದ ಯಶ್ ಬಗ್ಗೆ ಹಾಗೆಲ್ಲಾ ಮಾತನಾಡಬಾರದು. ನಿಖಿಲ್ ಇನ್ನೂ ಚಿಕ್ಕವರು.. ಈಗಿನ್ನು 2 ಸಿನಿಮಾ ಮಾಡಿದ್ದಾರೆ. ನಿಖಿಲ್ ಬಗ್ಗೆ ಯಶ್ ಮಾತು ಬೇಕಾಗಿರಲಿಲ್ಲ. ಯಶ್ ಗೆ ಫಿಲ್ಮ್ ಹಿನ್ನೆಲೆ ಇದೆ. ಕಿಂಚಿತ್ತು ಗೌರವ ಇಲ್ಲದಂತೆ ಮಾತನಾಡೋದು ಬೇಕಾಗಿರಲಿಲ್ಲ. ಯಾವತ್ತೂ ಯಶ್ ನಿಖಿಲ್ ಬಗ್ಗೆ ಮಾತನಾಡಿಲ್ಲ. ನಿಖಿಲ್ ಮಾತು ಅಹಂಕಾರ ಸೂಚಿಸುತ್ತದೆ ಎಂದು ಸುಮಲತಾ ತಿರಗೇಟು ಕೊಟ್ಟಿದ್ದಾರೆ.

ನಿನ್ನೆಯಷ್ಟೇ ನಿಖಿಲ್ ಯಶ್ ಗೆ ‘ ಮನೆ ಬಾಡಿಗೆ ಕಟ್ಟಲು ಯೋಗ್ಯತೆ ಇಲ್ಲದವರು ಯೋಗ್ಯತೆ ಬಗ್ಗೆ ಮಾತನಾಡುತ್ತಾರೆ’ ಎಂದು ಯಶ್ ಗೆ ಟಾಂಗ್ ಕೊಟ್ಟಿದ್ದರು. ಈ ಮಾತಿಗೆ ಇಂದು ಮದರ್ ಇಂಡಿಯಾ ಪ್ರತಿಯುತ್ತರ ನೀಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com