ಸಾಂಸ್ಕ್ರತಿಕ ನಗರಿಯಲ್ಲಿ ನಮೋ ಸಮಾವೇಶ : ಕನ್ನಡದಲ್ಲಿ ಭಾಷಣ ಆರಂಭಿಸಿದ ಮೋದಿ

ಕೋಟೆನಾಡಿ ಚಿತ್ರದುರ್ಗದ ಬಳಿಕ ಸಾಂಸ್ಕ್ರತಿಕ ನಗರಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಕನ್ನಡದಲ್ಲಿ ಭಾಷಣ ಆರಂಭಿಸಿ ಮೈಸೂರಿನ ಜನತೆ ಹುಬ್ಬೇರಿಸುವಂತೆ ಮಾಡಿದ್ರು.

ಕನ್ನಡದಲ್ಲಿ ಭಾಷಣ ಆರಂಭಿಸಿದ ಪ್ರಧಾನಿ ನರೇಂದ್ರ ಮೋದಿ ‘ ಮೈಸೂರು ಸೇರಿದಂತೆ ಸುತ್ತಲ ಜಿಲ್ಲೆಗಳ ಹೆಸರನ್ನು ಹೇಳುತ್ತ ಜನರಿಗೆ ನಮಸ್ಕರಿಸಿದರು.

ಚಾಮುಂಡೇಶ್ವರಿ ದೇವಿ ಕೃಪೆಯಿಂದ ಎಲ್ಲರೂ ಚೆನ್ನಾಗಿರಲಿ, ಇಲ್ಲಿರೋ ಎಲ್ಲಾ ಧರ್ಮದ ದೇವಾಲಯಗಳಿಗೂ ವಂದಿಸುತ್ತೇನೆ.. ಸರ್, ಎಂ ವಿಶ್ವೇಶ್ವರಯ್ಯ ಅವರಿಗೂ ನಾನು ನಮಸ್ಕರಿಸುತ್ತೇನೆ. ಬಿಸಿಲು ಚುನಾವಣೆಯ ಕಾವು ಇದ್ದರೂ ನೀವು ನನಗಾಗಿ ಬಂದಿದ್ದೀರಿ ನಾನು ಇದಕ್ಕೆ ಅಭಾರಿಯಾಗಿದ್ದೇನೆ. ನಿಮ್ಮ ಮೋದಿ ಎನ್ನುವ ಘೋಷಣೆ ನನಗೆಡ ನಿದ್ದೆ ಮಾಡಲು ಬಿಡುತ್ತಿಲ್ಲ. ನಿಮ್ಮ ಪ್ರೀತಿಯಿಂದ ನಾನು ಭಾರತದ ಚೌಕಿದಾರಿ (ಸೇವೆ) ಮಾಡಲು ಸಾಧ್ಯವಾಗಿದೆ.

ದೇಶದ ಮೊದಲನೇ ಪಾಸ್ ಪೋರ್ಟ್ ಸೇವಾ ಕೇಂದ್ರ ಮೈಸೂರಿನಲ್ಲೇ ಸ್ಥಾಪನೆಯಾಯ್ತು. ಸುಮಾರು ವರ್ಷಗಳಿಂದ ‘ ಸ್ವಚ್ಚ ಭಾರತ, ಸಬ್ ಕೆ ಸಾಥ್ ಸಬ್ಕಾ ವಿಕಾಸ್’ ಎನ್ನುವುದನ್ನ ಅನುಸರಿಸಿಕೊಂಡು ಬಂದಿದ್ದೇನೆ.  ಅಭಿವೃದ್ಧಿ ಮಾಡೋದು ನಮ್ಮ ಸಂಕಲ್ಪ – ವೈದ್ಯರ ಸಂಖ್ಯೆ ಹೆಚ್ಚಿಸುವುದು, ಬಡತನ ಹೋಗಲಾಡಿಸುವುದು ನಮ್ಮ ಸಂಕಲ್ಪ. ಆದರೆ ಕಾಂಗ್ರೆಸ್ ದ್ದು ಕೇವಲ ಮೋದಿಯನ್ನು ಹೋಡಿಸುವ ಸಂಕಲ್ಪ.

ಬಡತನ ಹೋಗಲಾಡಿಸಲು ಕಾಂಗ್ರೆಸ್ ನ್ನು ಮೊದಲು ತೊಲಗಿಸಿ ಆಗ ಬಡತನ ತನ್ನಿಂದ ತಾನೇ ದೂರವಾಗುತ್ತದೆ ಎಂದು ಮೋದಿ ಮೈಸೂರಿನಲ್ಲಿ ಭಾಷಣ ಮಾಡುತ್ತಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com