ಬಿಜೆಪಿ ಗೆಲುವಿಗೆ ಕ್ರಿಕೆಟ್ ಆಟಗಾರರನ್ನು ಕಣಕ್ಕಿಳಿಸುವ ಪ್ರಯತ್ನ : ಧೋನಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರಾ..?

ಒಂದು ಕಡೆ ಲೋಕಸಭೆ ಚುನಾವಣೆಯಾದ್ರೆ ಇನ್ನೊಂದು ಕಡೆ ಐಪಿಎಲ್ ನಡೆಯುತ್ತಿದೆ. ಕ್ರಿಕೆಟ್ ಆಟಗಾರರು ಎಷ್ಟು ಪ್ರಸಿದ್ಧಿ ಪಡೆದಿದ್ದಾರೆ ಎಂಬುದು ರಾಜಕೀಯ ನಾಯಕರಿಗೆ ಗೊತ್ತು.

ಪಕ್ಷದ ಗೆಲುವಿಗೆ ಪ್ರಸಿದ್ಧ ಆಟಗಾರರನ್ನು ಕಣಕ್ಕಿಳಿಸುವ ಪ್ರಯತ್ನವನ್ನೂ ರಾಜಕೀಯ ಪಕ್ಷಗಳು ಮಾಡ್ತಿವೆ. ಅನೇಕ ಕ್ರಿಕೆಟ್ ಆಟಗಾರರು ಈಗಾಗಲೇ ತಮ್ಮಿಷ್ಟದ ಪಕ್ಷ ಸೇರಿಯಾಗಿದೆ. ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಬಗ್ಗೆ ಕೆಲ ದಿನಗಳಿಂದ ಸುದ್ದಿಯೊಂದು ಹರಡುತ್ತಿದೆ.

ಅಮಿತ್ ಶಾ ಫ್ಯಾನ್ ಪೇಜ್ ನಲ್ಲಿ ಧೋನಿ, ಅಮಿತ್ ಶಾ ಕೈ ಕುಲುಕುತ್ತಿರುವ ಫೋಟೋ ಒಂದನ್ನು ಮಂಗಳವಾರ ಹಾಕಲಾಗಿದೆ. ಧೋನಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಚುನಾವಣೆಯಲ್ಲಿ ಸ್ಪರ್ಧೆ ಮಾಡ್ತಾರೆ. ಅವ್ರಿಗೆ ಸ್ವಾಗತ ಕೋರಿ ಎಂದು ಬರೆಯಲಾಗಿದೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ. ಈವರೆಗೆ 900ಕ್ಕೂ ಹೆಚ್ಚು ಬಾರಿ ಫೋಟೋವನ್ನು ಹಂಚಿಕೊಳ್ಳಲಾಗಿದೆ. 200ಕ್ಕೂ ಹೆಚ್ಚು ಮಂದಿ ತಮ್ಮ ಅಭಿಪ್ರಾಯ ಹೇಳಿದ್ದಾರೆ.

ವಾಸ್ತವವಾಗಿ ಧೋನಿ ಬಿಜೆಪಿಗೆ ಸೇರ್ಪಡೆಯಾಗಿಲ್ಲ. ಯಾವುದೇ ಕ್ಷೇತ್ರದಿಂದ ಚುನಾವಣಾ ಕಣಕ್ಕಿಳಿಯುತ್ತಿಲ್ಲ. ಈ ಫೋಟೋ ಈಗಿನದಲ್ಲವೇ ಅಲ್ಲ. 2018ರಲ್ಲಿ ತೆಗೆದ ಫೋಟೋ ಇದು. ಕಾರ್ಯಕ್ರಮವೊಂದರಲ್ಲಿ ಅಮಿತ್ ಶಾ, ಧೋನಿ ಭೇಟಿಯಾದಾಗ ಈ ಫೋಟೋ ತೆಗೆಯಲಾಗಿತ್ತು. ಧೋನಿ, ಚುನಾವಣೆಗೆ ಸ್ಪರ್ಧೆ ಮಾಡ್ತಾರೆ ಎಂಬುದು ಸುಳ್ಳು ಎಂದು ಸ್ನೇಹಿತ ಅರುಣ್ ಪಾಂಡೆ ಹೇಳಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com