ವಾಟ್ಸಪ್ ಬಳಕೆದಾರರಿಗೆ ಸಿಹಿ ಸುದ್ದಿ : ಗ್ರೂಪ್‌ಗಳಿಗೆ ಸೇರುವ ನಿರ್ಧಾರ ನಿಮ್ಮ ಕೈಯಲ್ಲಿ

ವಾಟ್ಸಪ್ ಬಳಕೆದಾರರೇ ಈಗ ಗ್ರೂಪ್‌ಗಳಿಗೆ ಸೇರುವ ನಿರ್ಧಾರ ಕೈಗೊಳ್ಳಬಹುದು.
ವಾಟ್ಸಪ್ ಬಳಕೆದಾರರಿಗೆ ಗ್ರೂಪ್‌ಗಳದ್ದೇ ರಗಳೆ. ಯಾರ್ಯಾರೋ ಗ್ರೂಪ್‌ಗಳನ್ನು ರಚಿಸಿಕೊಂಡು ಏಕಾಏಕಿ ಸೇರಿಸಿಬಿಡುತ್ತಾರೆ. ಇಂತಹ ಅನಪೇಕ್ಷಿತ, ಅಸಂಬದ್ಧ ಗ್ರೂಪ್‌ಗಳ ಕಿರಿಕಿರಿಯಿನ್ನು ಇರುವುದಿಲ್ಲ. ಗ್ರೂಪ್‌ಗಳಿಗೆ ಸೇರುವ ನಿರ್ಧಾರ ಇನ್ನು ಬಳಕೆದಾರರ ಕೈಯಲ್ಲೇ ಇರುತ್ತದೆ. ಈ ಸಂಬಂಧ ವಾಟ್ಸಪ್ ಮಹತ್ವದ ಬದಲಾವಣೆಯೊಂದನ್ನು ಮಾಡಿದೆ.
ಗ್ರೂಪ್‌ಗಳಿಗೆ ಸೇರಬೇಕೇ ಬೇಡವೇ ಎಂಬ ನಿರ್ಧಾರವನ್ನು ಈಗ ಬಳಕೆದಾರರೇ ಕೈಗೊಳ್ಳುವ ಅವಕಾಶವನ್ನು ವಾಟ್ಸಪ್ ಕಲ್ಪಿಸಿದೆ.
“ಕುಟುಂಬ, ಸ್ನೇಹಿತರು, ಸಹಕೆಲಸಗಾರರು, ಕ್ಲಾಸ್‌ಮೇಟ್‌ಗಳ ಜತೆಗೆ ಬೆಸೆದುಕೊಳ್ಳಲು ವಾಟ್ಸಪ್ ಗ್ರೂಪ್‌ಗಳು ಮುಂದುವರಿಯಲಿವೆ. ಆದರೆ ಹೆಚ್ಚು ಮುಖ್ಯವಾದ ಸಂಭಾಷಣೆಗಳನ್ನು ನಡೆಸಲು, ಬಳಕೆದಾರರು ತಮ್ಮ ಅನುಭವದ ಮೇಲೆ ಹೆಚ್ಚಿನ ನಿಯಂತ್ರಣವನ್ನು ಬಯಸಿದ್ದಾರೆ. ಹಾಗಾಗಿ ಹೊಸ ಪ್ರೈವೆಸಿ ಸೆಟಿಂಗ್ ಅನ್ನು ಸೇರಿಸಿದ್ದೇವೆ. ಈ ಮೂಲಕ ಗ್ರೂಪ್‌ಗಳಿಗೆ ಸೇರುವಂತೆ ವಾಟ್ಸಪ್ ಬಳಕೆದಾರರಿಗೆ ಆಹ್ವಾನ ನೀಡಲಾಗುತ್ತದೆ. ಅವರು ಗ್ರೂಪ್‌ಗೆ ಸೇರುವ ಕುರಿತು ನಿರ್ಧಾರ ಕೈಗೊಳ್ಳುತ್ತಾರೆ. ಎಂದು ಫೇಸ್‌ಬುಕ್ ಮಾಲೀಕತ್ವದ ವಾಟ್ಸಪ್ ಹೇಳಿಕೆಯಲ್ಲಿ ತಿಳಿಸಿದೆ.
ಈ ಫೀಚರ್ ಅನ್ನು ಹೊಂದಲು, ಬಳಕೆದಾರರು ಸೆಟಿಂಗ್ಸ್ ಆಪ್ಶನ್‌ನಲ್ಲಿ ಮೂರು ಆಯ್ಕೆಗಳಿವೆ.- “ನೋಬಡಿ”, “ಮೈ ಕಾಂಟಾಕ್ಟ್ಸ್” ಅಥವಾ “ಎವ್ರೀವನ್”. “ನೋಬಡಿ”ಯನ್ನು ಆರಿಸಿದರೆ, ನಿಮ್ಮನ್ನು ಆಹ್ವಾನಿಸುವ ಪ್ರತಿಯೊಂದು ಗ್ರೂಪ್‌ಗಳು ನಿಮ್ಮ ಅನುಮತಿ ಪಡೆಯಬೇಕಾಗುತ್ತವೆ. “ಮೈ ಕಾಂಟಾಕ್ಟ್ಸ್” ಆರಿಸಿದರೆ, ನಿಮ್ಮ ಅಡ್ರೆಸ್ ಬುಕ್‌ನಲ್ಲಿರುವ ವ್ಯಕ್ತಿಗಳು ತಮ್ಮ ಗ್ರೂಪ್‌ಗೆ ನಿಮ್ಮನ್ನು ನೇರವಾಗಿ ಸೇರಿಸಬಹುದು. ಉಳಿದವರು ಅನುಮತಿ ಕೇಳಬೇಕಾದಗುತ್ತದೆ.
ಈ ತನಕ ವಾಟ್ಸಪ್‌ನಲ್ಲಿ ಬಳಕೆದಾರರ ಅನುಮತಿಯಿಲ್ಲದೇ ಗ್ರೂಪ್‌ಗಳಿಗೆ ಸೇರ್ಪಡೆ ಮಾಡಬಹುದಿತ್ತು. ಈಗ ಚುನಾವಣೆ ಹೊತ್ತಲ್ಲಿ ಸರ್ಕಾರದ ಕಠಿಣ ಎಚ್ಚರಿಕೆಯ ಹಿನ್ನೆಲೆಯಲ್ಲಿ, ಸಾಮಾಜಿಕ ಮಾಧ್ಯಮಗಳು ತಮ್ಮ ನಿಯಮಗಳನ್ನು ಬಿಗಿಗೊಳಿಸತೊಡಗಿವೆ.

Leave a Reply

Your email address will not be published.

Social Media Auto Publish Powered By : XYZScripts.com